ಗಜಲ್

ಗಜಲ್

ಸಿದ್ಧರಾಮ ಹೊನ್ಕಲ್

Heart, Love, Luck, Abstract

ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲ
ನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ

ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆ
ಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ

ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತು
ಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ

ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿ
ಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ ನೀ ಹಾಡುತ್ತಿಲ್ಲ

ಇಷ್ಟು ಗೊತ್ತಿರಲಿ ನೀನಿಲ್ಲದೆ ಬದುಕಿರಲಾರದು ಈ ಜೀವ ಇನ್ನೆಂದಿಗೂ
‘ಹೊನ್ನು’ಪ್ರೀತಿಯಲ್ಲಿ ಬಿದ್ದಾಗಿದೆ ನೀ ತಬ್ಬದೆ ಗತಿಯಿಲ್ಲ ಮತಿಯಿಲ್ಲ


ಸಿದ್ಧರಾಮ ಹೊನ್ಕಲ್

(ಹಿಂದಿ ಗೀತೆಯೊಂದರ ಪ್ರಭಾವದಿಂದ

(ಹಿಂದಿ ಗೀತೆಯೊಂದರ ಪ್ರಭಾವದಿಂದ)

*********************************************

Leave a Reply

Back To Top