ಗಜಲ್
ಸಿದ್ದರಾಮ ಹೊನ್ಕಲ್
ಹೇಳಬೇಕಾದ ಮಾತೆಲ್ಲವನು ಹೇಳಿಯಾಯಿತು ಮತ್ತೇನು ಮಾಡಲಿ
ಕೇಳಬೇಕಾದ ಮಾತೆಲ್ಲ ಮತ್ತೆ ಕೇಳಿಯಾಯಿತು ಮತ್ತೇನು ಮಾಡಲಿ
ತಿಳಿಯದವರಿಗೆ ತಿಳಿಸಬಹುದು ತಿಳಿದು ಮೌನ ಆದರೇನು ಮಾಡಲಿ
ಮನದ ಬಯಕೆ ಬಾಯಿಬಿಟ್ಟು ಕಂಗಾಲಾಯಿತು ಮತ್ತೇನು ಮಾಡಲಿ
ಕಾಯ ಕಾಯಬೇಕು ನಿಜ ಆ ಕಾಯುವಿಕೆಗೆ ಕೊನೆ ಯಾವಾಗ
ಪಿಸುಮಾತು ಬಿಸುಮಾತಾಗಿ ಆಟವಾಯಿತು ಮತ್ತೇನು ಮಾಡಲಿ
ಪ್ರೀತಿಯಲಿ ಬಿದ್ದವರೆಲ್ಲ ಹುಚ್ಚರೆಂಬ ಸತ್ಯ ಇಡೀ ಜಗವು ಬಲ್ಲದು
ಸತ್ಯ ಹುಚ್ಚೆನಿಸಿ ಬಾಗಿಲು ಮುಚ್ಚಿಯಾಯಿತು ಮತ್ತೇನು ಮಾಡಲಿ
ಹೇಳಿ ಕೇಳಿ ಬೇಸತ್ತು ಬಸವಳಿದು ಹೋಗಿಹನು ನೀ ಬಲ್ಲೆ ಸಾಕಿ
ತರವಲ್ಲ ತಿಳಿ ನೀ ಬರೀ ಕಾಡುವದಾಯಿತು ಮತ್ತೇನು ಮಾಡಲಿ
ತನ್ನ ಪಾಡಿಗಿದ್ದವನ ಸುತ್ತ ಸುಳಿದು ಹುಚ್ಚುಹಚ್ಚಿ ಕೈ ಬಿಡೋದು ನ್ಯಾಯವೆ
ಕಷ್ಟ ಸುಖದ ನಾಲ್ಕುಮಾತು ಇಲ್ಲವಾಯಿತು ಮತ್ತೇನು ಮಾಡಲಿ
ಅದಕೆ ಜಿಪುಣತನ ಬಂದರೆ ಬರಗೆಟ್ಟ ಹೊನ್ನು’ ಬದುಕಿಗೆ ಏನರ್ಥ ಸಾಕಿ
ಮನೆ ಮನ ಇಡೀ ಜೀವ ಕಾಯುವದಾಯಿತು ಮತ್ತೇನು ಮಾಡಲಿ
*********************************************
ಸುಂದರ ಗಝಲ್.
It’s very nice