Category: ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಅದ್ಯಾವ ಗಳಿಗೆಯಲಿ ನನ್ನಿಂದ ದೂರವಾದೆ ಗೆಳತಿಮನದೊಳು ಭಾವನೆಗಳ ಬಿತ್ತಿ ಮರೆಯಾದೆ ಗೆಳತಿ ಹೃದಯದಿ ಪ್ರೀತಿ ಬಸಿದು ಮೌನ ನೀಡಿದೆಯಲ್ಲಸಾವಿನ ಮನೆ ಅಂಗಳದಿ ಹೆಜ್ಜೆ ಮೂಡಿದೆ ಗೆಳತಿ ಮೊಳ ಹೂವು ತಂದವರು ಶವಕೆ ಅರ್ಪಿಸಿದ್ದಾರೆನನ್ನ ಹೆಣದ ಮೆರವಣಿಗೆಯುದ್ದಕೂ ಧ್ಯಾನಿಸಿದೆ ಗೆಳತಿ ಹಾದಿ ಬೀದಿಯಲಿ ನಮ್ಮಿಬ್ಬರದೆ ಮಾತು ಜನರ ಬಾಯಲ್ಲಿಧರೆಯ ನಾಚಿಸುವ ಜೋಡಿ ಎಂದು ಹೊಗಳಿದೆ ಗೆಳತಿ ಲೋಕ ನಿಂದೆ ಹೊಗಳಿಕೆಯ ಕೇಳದೆ ಸುಮ್ಮನಿದ್ದೆವುಒಳಗಾದ ಗಾಯ ನೋವು ಯಾರಿಗೂ ತಿಳಿಯದೆ ಗೆಳತಿ ಮರುಳ ಸಾಕಿನ್ನೂ ಲೋಕದ […]

ಗಜಲ್

ಗಝಲ್ ರಜಿಯಾ ಬಳಬಟ್ಟಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಲೇಬೇಕೀಗ.ಬಂದ ಹಿಸಾಬು ಮುಗಿಯದಿದ್ದರೂ ಮರಳಲೇಬೇಕೀಗ. ಅರಿತವರಾರೋ ತಿರುಗಿಬಿದ್ದವರಾರೋ ಬಂಧ ದೂರಾದಾಗ,ಎಲ್ಲ ಕೊಂಡಿಗಳ ಕಳಚಿ ಹೊರಳಲೇ ಬೇಕೀಗ. ನನ್ನ ನಿನ್ನ ಮಾತು ಅದೆಷ್ಟು ಬಾಕಿ ಉಳಿದರೇನೀಗ,ಗಾಡಿಯ ಪೆಟ್ರೋಲು ತೀರಿದಾಗ ನಡೆದು ಹೋಗಲೇಬೇಕೀಗ. ಅದೆಷ್ಟು ಕಸ ಮುಸುರೆಯ ತಾಣವಾದರೇನೀಗ,ಮೂಗು ಮುಚ್ಚಿ ಕೈ ಬಿಡಿಸಿ ಹೆಜ್ಜೆ ಹಾಕಲೇಬೇಕೀಗ. ನಿನ್ನ ಪ್ರೀತಿಯ ಹಂಬಲಿಸಿ ಅದೆಷ್ಟು ಮಿಡಿದರೇನೀಗ,ಅಗಲಿಕೆಯನು ಬೆನ್ನಿಗಂಟಿಸಿ ರಾಜಿ ಚಡಪಡಿಸುವ ದಿನಗಳೇ ಎಲ್ಲ ಈಗ ******************************************

ಗಝಲ್

ಗಝಲ್ ಎ.ಹೇಮಗಂಗಾ ನಿನ್ನ ಮನ ಪರಿತಾಪದಿ ಬೇಯುವ ಮೊದಲು ಮರಳಿಬಿಡು ನನ್ನೆಡೆಗೆಅಂತರಾಳದಿ ಕಹಿಭಾವ ಬೇರೂರುವ ಮೊದಲು ಮರಳಿಬಿಡು ನನ್ನೆಡೆಗೆ ಬಾಳದೋಣಿ ಮುನ್ನಡೆಸಲು ಹುಟ್ಟು ಹಾಕಬೇಕಿತ್ತು ಜೊತೆ ಸೇರಿಕಾಲದ ಕಡಲಲಿ ಮುಳುಗುವ ಮೊದಲು ಮರಳಿಬಿಡು ನನ್ನೆಡೆಗೆ ಹೃದಯ ನಿನಗಾಗಿ ಮಿಡಿಯುವುದನ್ನು ಈ ಕ್ಷಣಕ್ಕೂ ನಿಲ್ಲಿಸಿಲ್ಲಅಂತರದ ಕಂದಕ ಆಳವಾಗುವ ಮೊದಲು ಮರಳಿಬಿಡು ನನ್ನೆಡೆಗೆ ಅರಳಿದೊಲವ ಹೂವ ಬಿಸುಟು ನಡೆದ ನಿನ್ನ ನಡೆ ಸರಿಯೇ ಹೇಳುಕಣ್ಣೆದುರೇ ಮಣ್ಣಲಿ ಮಣ್ಣಾಗುವ ಮೊದಲು ಮರಳಿಬಿಡು ನನ್ನೆಡೆಗೆ ಪ್ರೀತಿಸುಧೆಯ ಉಂಡ ಜೀವ ವಿಷವ ಉಣಿಸಬಹುದೇ ಹೇಮ?ಕೊನೆ […]

ಗಝಲ್

ಗಝಲ್ ಅಮೃತ ಎಂ ಡಿ ನೋವಲ್ಲೂ ನಲಿವಿನ ಟಾನಿಕಿನ ಗುಟುಕುಂಟು ಗಾಲಿಬ್ಬದುಕೆಲ್ಲವು ಹಗದ ಮೇಲೆ ನಡೆದ ಕುರುಹುಂಟು ಗಾಲಿಬ್ ಹೇಳತಿರದ ಬೇಗೆಯೋದು ಸಜೀವ ದಹನ ಮಾಡಿದೆನಗುವಿನ ಮುಖವಾಡ ಧರಿಸಿ ಜೀವಿಸಿದ್ದುಂಟು ಗಾಲಿಬ್ ನನ್ನೊಳಗಿನ ಸಾಮರ್ಥ್ಯವನ್ನೆಲ್ಲಾ ಈ ಪ್ರೀತಿಯು ಕೊಂದಿದೆಗೈರುಹಾಜರಿಯಲ್ಲೂ ನಿರ್ಲಿಪ್ತ ಹಾಜರಿಯುಂಟು ಗಾಲಿಬ್ ನನ್ನರಸ ಮಧುಶಾಲೆಯಲ್ಲೇ ಜೀವನಪೂರ್ತಿ ಕಳೆದುಬಿಟ್ಟಬಾಳ ನೊಗಕ್ಕೆ ಹೆಗಲ್ಕೊಟ್ಟು ಹೈರಾಣಾಗಿದ್ದುಂಟು ಗಾಲಿಬ್ ಅಮ್ಮುವಿನ ನಸೀಬು ಬ್ರಹ್ಮಂಗು ಕಾರುಣ್ಯ ಪರಿಚಯಿಸಿದೆಅನುಗಾಲದ ಹೋರಾಟವು ಚಿರನಿದ್ರೆಯಲ್ಲುಂಟು ಗಾಲಿಬ್ *****************************************

ಮನಿಷಾಗೊಂದು ಗಝಲ್

ಮನಿಷಾಗೊಂದು ಗಝಲ್ ಅರುಣಾ ನರೇಂದ್ರ ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆಅಂಗಾಂಗಗಳ […]

ಗಝಲ್

ಗಝಲ್ ಸುಜಾತಾ ರವೀಶ್ ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು ನಾಳಿನ ಕನಸಿನ  ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು  ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ  ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ? ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು ನಂಬಿದ ದೈವದ […]

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ || ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋಒಪ್ಪಿತ ನಿರ್ಧಾರಗಳಿವೆ || ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ || ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ […]

Back To Top