ಗಝಲ್
ಅಮೃತ ಎಂ ಡಿ
ನೋವಲ್ಲೂ ನಲಿವಿನ ಟಾನಿಕಿನ ಗುಟುಕುಂಟು ಗಾಲಿಬ್
ಬದುಕೆಲ್ಲವು ಹಗದ ಮೇಲೆ ನಡೆದ ಕುರುಹುಂಟು ಗಾಲಿಬ್
ಹೇಳತಿರದ ಬೇಗೆಯೋದು ಸಜೀವ ದಹನ ಮಾಡಿದೆ
ನಗುವಿನ ಮುಖವಾಡ ಧರಿಸಿ ಜೀವಿಸಿದ್ದುಂಟು ಗಾಲಿಬ್
ನನ್ನೊಳಗಿನ ಸಾಮರ್ಥ್ಯವನ್ನೆಲ್ಲಾ ಈ ಪ್ರೀತಿಯು ಕೊಂದಿದೆ
ಗೈರುಹಾಜರಿಯಲ್ಲೂ ನಿರ್ಲಿಪ್ತ ಹಾಜರಿಯುಂಟು ಗಾಲಿಬ್
ನನ್ನರಸ ಮಧುಶಾಲೆಯಲ್ಲೇ ಜೀವನಪೂರ್ತಿ ಕಳೆದುಬಿಟ್ಟ
ಬಾಳ ನೊಗಕ್ಕೆ ಹೆಗಲ್ಕೊಟ್ಟು ಹೈರಾಣಾಗಿದ್ದುಂಟು ಗಾಲಿಬ್
ಅಮ್ಮುವಿನ ನಸೀಬು ಬ್ರಹ್ಮಂಗು ಕಾರುಣ್ಯ ಪರಿಚಯಿಸಿದೆ
ಅನುಗಾಲದ ಹೋರಾಟವು ಚಿರನಿದ್ರೆಯಲ್ಲುಂಟು ಗಾಲಿಬ್
*****************************************