ಗಜಲ್

ಗಝಲ್

ರಜಿಯಾ ಬಳಬಟ್ಟಿ

ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಲೇಬೇಕೀಗ.
ಬಂದ ಹಿಸಾಬು ಮುಗಿಯದಿದ್ದರೂ ಮರಳಲೇಬೇಕೀಗ.

ಅರಿತವರಾರೋ ತಿರುಗಿಬಿದ್ದವರಾರೋ ಬಂಧ ದೂರಾದಾಗ,
ಎಲ್ಲ ಕೊಂಡಿಗಳ ಕಳಚಿ ಹೊರಳಲೇ ಬೇಕೀಗ.

ನನ್ನ ನಿನ್ನ ಮಾತು ಅದೆಷ್ಟು ಬಾಕಿ ಉಳಿದರೇನೀಗ,
ಗಾಡಿಯ ಪೆಟ್ರೋಲು ತೀರಿದಾಗ ನಡೆದು ಹೋಗಲೇಬೇಕೀಗ.

ಅದೆಷ್ಟು ಕಸ ಮುಸುರೆಯ ತಾಣವಾದರೇನೀಗ,
ಮೂಗು ಮುಚ್ಚಿ ಕೈ ಬಿಡಿಸಿ ಹೆಜ್ಜೆ ಹಾಕಲೇಬೇಕೀಗ.

ನಿನ್ನ ಪ್ರೀತಿಯ ಹಂಬಲಿಸಿ ಅದೆಷ್ಟು ಮಿಡಿದರೇನೀಗ,
ಅಗಲಿಕೆಯನು ಬೆನ್ನಿಗಂಟಿಸಿ ರಾಜಿ ಚಡಪಡಿಸುವ ದಿನಗಳೇ ಎಲ್ಲ ಈಗ

******************************************

Leave a Reply