Category: ಇತರೆ

ಇತರೆ

ಗಾಂಧಿ ವಿಶೇಷ ಗಾಂಧಿ‌ ನೆನಪಲ್ಲಾ‌… ನೀಲ ಆಗಸದ ಮನಸುಬೇರುಬಿಟ್ಟ ಹೂ ಹಣ್ಣು ಕನಸುಪ್ರೀತಿ ಪ್ರೇಮ ಕರುಣೆಯೇಮೈವೆತ್ತಿ ಬಂದಂತೆ ಸೊಗಸು. ತಾನು ತನ್ನದೆಂಬ ಹಂಗು ಹರಿದುಎಲ್ಲರನ್ನೂ ತನ್ನ ಪ್ರೇಮತೆಕ್ಕೆಯಲಿ ಸೆಳೆದುಸ್ವತಂತ್ರ ಸ್ವದೇಶದ ಮುನ್ನುಡಿ ಬರೆದುಊರಿಕೊಂಡು ಊರುಗೋಲುಬಾರಿಸದೆಯೇ ಬಗ್ಗಿಸಿದಮೌನದಲಿ ಅಸಹಕಾರದಲಿಹಿಡಿ ಕಡಲೆಕಾಯಿ ಜಗಿದು. ಕೂಡಿಟ್ಟು ಕೊಟ್ಟೆ ಸ್ವಾತಂತ್ರ್ಯಸಹನೆ,ಅಹಿಂಸೆಯ ಪಥದಲಿಬೀದೀಲಿ ಚೆಲ್ಲಿ ರಕ್ತಧೋಕುಳಿಕೊಂದು ಸತ್ಯ ಮತ್ತು ಮಹಾತ್ಮನನಡೆಸಿದ್ದೇವೆ‌ ಪ್ರಜಾಪ್ರಭುತ್ವ. ಗಾಂಧಿ‌,ನೋಟಿನಲಿ ಕನ್ನಡಕದಲಿಟೋಪಿ ಚೇರಿನಲಿ ಪಟದಲ್ಲೂ ಕೂಡಿಸಿ ಹಾರಹಾಕಿದ್ದೇವೆ.ಸತ್ಯ ಅಹಿಂಸೆಯ ಕತ್ತು ಹಿಚುಕಿಶಾಂತಿ ನೆಮ್ಮದಿ ಹಣಕ್ಕೆ ಮಾರಿಯಂತ್ರ ತಂತ್ರ ಕುತಂತ್ರದಿಅಭಿವೃದ್ಧಿ ಕಂಡೂ ಕಂಡೂಉದ್ದಾರವಾಗಿಬಿಟ್ಟಿದ್ದೇವೆ.!? […]

ಗಾಂಧಿ ವಿಶೇಷ ಮಹಾತ್ಮನಾದ ಗಾಂಧಿ ಮೋಕ್ಷ ಕಂಡಿತು,ಭರತ ಖಂಡಗಾಂಧಿ ಕನಸಿನ ಭಾರತಬಿಳಿ ತೊಗಲುಗಳ ದಬ್ಬಾಳಿಕೆಯಲಿನರಳಿತು ಪ್ರಜೆಗಳ ಹಿತ ಆಂಗ್ಲರ ನಿರಂಕುಶ ಪ್ರಭುತ್ವತೆರೆಯೆಳೆದ ಗಾಂಧಿ ಮಹಾತ್ಮನೋವು,ತ್ಯಾಗ,ಬಲಿದಾನಬಳಲಿದ ಜೀವಾತ್ಮ ಸತ್ಯಾಗ್ರಹ,ಚಳವಳಿ,ಅವಿರತ ಹೋರಾಟ,ಬಾನೆತ್ತರದಲಿ ತ್ರಿವರ್ಣ ರಂಗಿನ ಬಾವುಟರಾಷ್ಟ್ರಪಿತನ ನೆನಪುಸೇರಿತು ಇತಿಹಾಸ ಪುಟ ಹರಿದು ಛಿದ್ರವಾದ ಬದುಕು,ಬಿಕರಿಯಾದನಮ್ಮ ಮೌಲ್ಯಗಳುಸಂಕುಚಿತ ಭಾವನೆಗಳುಕಿತ್ತು ತಿನ್ನುವ ವಿಚಾರಗಳು ಹರಿದ ರಕ್ತದ ಕೋಡಿಕಮಟು ವಾಸನೆ ಬೀರಿದೆನೆಲ,ಜಲ,ಗಲ್ಲಿಗಲ್ಲಿ ಗಳಲಿಉಸಿರುಕಟ್ಟಿ ಹೆಪ್ಪುಗಟ್ಟಿದಭಾವನೆಗಳು ,ಸಿಡಿದ ಕಿಡಿಸರ್ವ ಸ್ವತಂತ್ರದ ಒಂದೇ ಮಂತ್ರ,ನಮ್ಮ ಸ್ವಾತಂತ್ರ್ಯಬತ್ತಿದ ನಮ್ಮ ಆಸೆಗಳುಸ್ವಹಿತದ,ದೇಶದ ಕನಸುಗಳಿಗೆ ಬೆತ್ತಲಾದಮೋಹನದಾಸ ಕರಮ ಚಂದ ಗಾಂಧಿ ತುಳಿದ […]

ಮಕ್ಕಳ ಕವಿತೆ  ಗಾಂಧಿತಾತ   ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧|| ಶಾಲೆಯಲ್ಲಿ ಜಾಣನಲ್ಲ ನೀತಿಯಲ್ಲಿ ಜಗವಬಲ್ಲ ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨|| ಬಡವ ನನ್ನ ದೇಶ ಕೋಟು ಸೂಟು ಬೇಡ ಪಂಚೆವುಟ್ಟು ಸಾಗಿಬಿಟ್ಟ…|| ೩|| ಅಸ್ತ್ರ ಎಂದು ಹಿಡಿಯಲಿಲ್ಲ ಹನಿ ರಕ್ತ ಚೆಲ್ಲಲಿಲ್ಲ ಯುದ್ಧ ಮಾತ್ರ ಗೆದ್ದುಬಿಟ್ಟ….|| ೪|| ಸತ್ಯಾಗ್ರಹ ಶಸ್ತ್ರದಿಂದ ಅಹಿಂಸೆ ಮಾರ್ಗದಲ್ಲಿ ಬ್ರಿಟಿಷರನ್ನು ನಡುಗಿಸಿಟ್ಟ…|| ೫|| ಮಾಡು ಇಲ್ಲ […]

ಗಾಂಧಿ ವಿಶೇಷ ಗಾಂಧಿ ಎಂಬ ಶಕ್ತಿ! ಗಾಂಧೀಜಿ ‘ – ಎಂಬುದು ಒಂದು ವ್ಯಕ್ತಿಯೇ, ಒಂದು ಸಂಸ್ಥೆಯೇ,  ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನೈತಿಕ  ಚಿಂತನೆಗಳ ಮೊತ್ತವೇ? ಹೇಗೆ ಅರ್ಥೈಸಬೇಕು ? ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲಿ ಹೋದರೂ ಜನರನ್ನು ಆಯಸ್ಕಾಂತದಂತೆ ಸೆಳೆಯುತ್ತಿದ್ದರು. ನಿಸ್ವಾರ್ಥ, ನಿರ್ಭೀತಿ, ಆಧುನಿಕ ಮನೋಭಾವ ಹಾಗೂ ಪಾರಂಪರಿಕ ನಿಷ್ಠೆ, ಸಮುದಾಯ ನಿಷ್ಠೆ, ಸರಳತೆ ಮೊದಲಾದವನ್ನು ಉಸಿರಾಡುತ್ತ ಜಾತಿ-ಮತಗಳಲ್ಲಿ ಸಮಭಾವ ಕಂಡವರು. ಗೀತೆ ಮತ್ತು ಉಪನಿಷತ್ತಿನ ಆರಾಧಕರು. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಇಂದಿನ […]

ಗಾಂಧಿ ವಿಶೇಷ   ಗಾಂಧಿ ಮತ್ತು ನಾವು ನೀನು ನಶೆಯಲ್ಲಿ ಬಿದ್ದುದು ಒಂದೇ ಸಲಮೇಲೆದ್ದೆ ಇನ್ನೆಂದೂ ಬೀಳದ ಹಾಗೆ….ಸಾಮಾನ್ಯತೆಯಿಂದ ಏರಿದೆ ಅಸಾಮಾನ್ಯತೆಯೆಡೆಗೆಆತ್ಮಶಕ್ತಿಯ ಮೇರುವನ್ನೇರುತ್ತ ಮಹಾತ್ಮನಾದೆ…ನಿತ್ಯ ತಾರಕ ಮಂತ್ರವಾಯಿತು ರಾಮನಾಮ ನಿನಗೆಸತ್ಯಾಗ್ರಹ,ಅಹಿಂಸೆ,ಅಪರಿಗ್ರಹ ಮಂತ್ರದಂಡಗಳುಬಿದ್ದವರನ್ನೆತ್ತಿದೆ,ಸ್ವತಂತ್ರ ಭಾರತದಿ ಉಸಿರಾಡಿದೆವು ನಶೆಯಲ್ಲಿ ನಾವೂ ಹಲವು ಸಲ ಬಿದ್ದೆವು….ಮತ್ತೆ ಮತ್ತೆ ಬಿದ್ದೆವು ಮತ್ತೆಂದೂ ಏಳದ ಹಾಗೆ!ಮಾಣಿಕ್ಯದ ಬೆಲೆಯರಿಯದ ನಮಗೆ…ಸ್ವಾತಂತ್ರ್ಯವೂ ಮತ್ತೇರಿಸುವ ವಸ್ತುವಾಯಿತುಅಮಲಿನಲಿ ಕಳೆದುಕೊಂಡಿದ್ದೇವೆ ನಮ್ಮನ್ನು ನಾವೇಗಾಂಧಿ,ಕಲಿಯಲಿಲ್ಲ ಪಾಠ ತಪ್ಪುಗಳಿಂದ ನಾವೆಂದೂಗಾಂಧೀಜಿ ಪೆಟ್ಟಿಗೆ ತತ್ತರಿಸಿತು ಅಂಗ್ರೇಜಿ ಸಾಮ್ರಾಜ್ಯಅವ್ಯಕ್ತ ಅಸ್ತ್ರ ಪ್ರಯೋಗಕ್ಕೆ ಶರಣಾದದ್ದೇ ವಿಸ್ಮಯಮನುಷ್ಯನಿಗೆ ಮನುಷ್ಯನಾಗಿ ಸ್ಪಂದಿಸಿದರೀತಿಅನನ್ಯಕೋಟಿ […]

ಗಾಂಧಿ ವಿಶೇಷ ಗಾಂದೀಜಿ “ಸತ್ಯ, ಅಹಿಂಸೆ, ಸರ್ವೋದಯ, ಸತ್ಯಾಗ್ರಹ”ನಿಮ್ಮ ಈ ತತ್ವ ಗಳು ಇಂದಿಗೂ ಪ್ರಸ್ತುತಎಷ್ಟು ಸಲ ತಿಳಿ ಹೇಳಿದರೂ ಸಹ,ಕಲಿಯಲಿಲ್ಲ ಆದರೆ ಮಾನವ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳುತನಗಿಷ್ಟಬಂದಂತೆ ತಿರುಚುವನು ವಾಸ್ತವವನ್ನುಆಗಬೇಕಿಲ್ಲ ಅವನಿಗೆ ಸರ್ವೋದಯಇಲ್ಲದಿದ್ದವರ ಕರೆ ಬರೀ ಅರಣ್ಯ ರೋದನ ಅಹಿಂಸೆ ಪದಕ್ಕೀಗ ಅರ್ಥವೇನುಹಿಂಸೆಯಲ್ಲೇ ನಡೆಯುತ್ತಿದೆ ಪ್ರಪಂಚಮನಸ್ಸು ಇರಬೇಕು ತಿಳಿಬಾನಿನಂತೆಪಡೆಯಬೇಕು ಶಾಂತಿಯಿಂದ, ಸತ್ಯಾಗ್ರಹದಿಂದ ತಿಳಿಹೇಳುವುದು ಹೇಗೆ, ಈಗಿನ ಬುದ್ದಿಜೀವಿಗಳಿಗೆಬರೀ ಅಕ್ಟೋಬರ್ ಅಲ್ಲಿ ನೆನೆದರೆ ಸಾಲದುಗಾಂಧೀಜಿ ಹಾಗು ಅವರ ತತ್ವಗಳನ್ನುಅಳವಡಿಸಿಕೊಳ್ಳಿ ಬದುಕಲ್ಲಿ, ಮತ್ತದು ಮರಳಿ ಬಾರದು […]

ಗಾಂಧಿ ವಿಶೇಷ ಹೇ ರಾಮ್ ಹೇ ರಾಮ್…..ಬಿಕ್ಕುತಿದೆ ನೋಡಲ್ಲಿ ಸತ್ಯಅಹಿಂಸೆ, ವಿಷಾದದ ಕತ್ತಲಲಿಎಲ್ಲಿಯೋ ಕೇಳುತಿದೆ ಹೇ ರಾಮ್……ಗರಿಗರಿ ನೋಟುಗಳೆಣಿಕೆಯೊಳಗೆಹೂತು ಹೋದ ಸತ್ಯಕೆ ಕಂಬನಿ ಮಿಡಿದುಕೂಗುತಿದೆ ಧನಿಯೊಂದು ಹೇ ರಾಮ್ಭಗವದ್ಗೀತೆ ಹಿಡಿಯುವಕಳಂಕಕರಗಳಿಗೆ ಬೆಚ್ಚಿದೆ ನ್ಯಾಯ ದೇವತೆಮತ್ತಷ್ಟೂ ಕೇಳುತಿಹುದು ಹೇ ರಾಮ್……ಬಲ್ಲಿದವರ ದಾಸ್ಯ ಸಂಕೋಲೆಯಲಿಬಡವರ ಸ್ವಾತಂತ್ರ್ಯ ನರಳಿಹುದುಕೇಳಿ ಬರುತಿದೆ ದನಿಯೊಂದು ಹೇ ರಾಮ್…..ಹೊರಟಿಹುದು ಹಿಂಸೆಯ ಮೆರವಣಿಗೆಶಾಂತಿ ಧೂತನ ಅಹಿಂಸಾ ಮುಖವಾಡ ಹೊತ್ತುಕನಸೊಳಗೂ ದನಿ ಕೇಳಿದೆ ಹೇ ರಾಮ್…..ರಾಮರಾಜ್ಯದ ಕನಸು ಹುಸಿಯಾದುದಕೆವಿಷಾದ ನಗೆ ಚೆಲ್ಲಿದೆಗೋಡೆ ಮೇಲಿನ ಗಾಂಧಿ ಚಿತ್ರಮತ್ತೆ ಕೇಳುತಿದೆ ಹೇ […]

ಗಾಂಧಿವಿಶೇಷ ಸರ್ವೋದಯ ಪ್ರತಿಯೊಬ್ಬರ ಅಗತ್ಯಗಳನ್ನು  ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ. ಇದು  ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು. ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ  ಆನಂತರದ ದಿನಗಳ ರಾಜಕೀಯ ಶಿಕ್ಷಣ  ಆರ್ಥಿಕತೆ ಕೃಷಿ  ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ              ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು. ರಾಷ್ಟೀಯ ಏಕತೆಯು ಸಾಮಾಜಿಕ  ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ […]

ಗಾಂಧಿ ವಿಶೇಷ ಹೇ ರಾಮ್ !! ಸಣಕಲು ಕಡ್ಡಿರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದಅಮಲುಕೈಯಲ್ಲೊಂದು ಊರುಗೋಲುಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲುಕಣ್ಣಿಗಂಟಿದ ಚಷ್ಮಮೊಣಕಾಲ ಮೇಲೆ ಪಂಚೆಸುತ್ತ ನೆರೆದ ಒಂದಷ್ಟು ಜನರ ಸಂತೆ !ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !ಸತ್ಯಕ್ಕಲ್ಲ; ಶಾಂತಿಗಲ್ಲ !ಹೋಗಲಿ ಬೇಕಾಗಿದ್ದೇನೆಂದುಆತ ತೂರಿದ ಗುಂಡಿಗೂ ಅರಿವಿಲ್ಲ !ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !ನನ್ನ ಕೊಂದದ್ದಷ್ಟೆ –ಆತ ತಿರುಗಿ ನೋಡಲಿಲ್ಲ !ನಿರ್ಭಾವುಕನಾದನೇ, ಗಳಗಳ ಅತ್ತನೇತಪ್ಪಿತಸ್ಥ ಮನೋಭಾವವಿತ್ತೇಅಥವಾ ಸೆಟೆದು […]

ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ :   ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ?  ಪಾಶ್ಚಾತ್ಯ ನಾಗರಿಕತೆ […]

Back To Top