ಗಾಂಧಿ ವಿಶೇಷ
ಹೇ ರಾಮ್
ಹೇ ರಾಮ್…..
ಬಿಕ್ಕುತಿದೆ ನೋಡಲ್ಲಿ ಸತ್ಯ
ಅಹಿಂಸೆ, ವಿಷಾದದ ಕತ್ತಲಲಿ
ಎಲ್ಲಿಯೋ ಕೇಳುತಿದೆ ಹೇ ರಾಮ್……
ಗರಿಗರಿ ನೋಟುಗಳೆಣಿಕೆಯೊಳಗೆ
ಹೂತು ಹೋದ ಸತ್ಯಕೆ ಕಂಬನಿ ಮಿಡಿದು
ಕೂಗುತಿದೆ ಧನಿಯೊಂದು ಹೇ ರಾಮ್
ಭಗವದ್ಗೀತೆ ಹಿಡಿಯುವ
ಕಳಂಕಕರಗಳಿಗೆ ಬೆಚ್ಚಿದೆ ನ್ಯಾಯ ದೇವತೆ
ಮತ್ತಷ್ಟೂ ಕೇಳುತಿಹುದು ಹೇ ರಾಮ್……
ಬಲ್ಲಿದವರ ದಾಸ್ಯ ಸಂಕೋಲೆಯಲಿ
ಬಡವರ ಸ್ವಾತಂತ್ರ್ಯ ನರಳಿಹುದು
ಕೇಳಿ ಬರುತಿದೆ ದನಿಯೊಂದು ಹೇ ರಾಮ್…..
ಹೊರಟಿಹುದು ಹಿಂಸೆಯ ಮೆರವಣಿಗೆ
ಶಾಂತಿ ಧೂತನ ಅಹಿಂಸಾ ಮುಖವಾಡ ಹೊತ್ತು
ಕನಸೊಳಗೂ ದನಿ ಕೇಳಿದೆ ಹೇ ರಾಮ್…..
ರಾಮರಾಜ್ಯದ ಕನಸು ಹುಸಿಯಾದುದಕೆ
ವಿಷಾದ ನಗೆ ಚೆಲ್ಲಿದೆ
ಗೋಡೆ ಮೇಲಿನ ಗಾಂಧಿ ಚಿತ್ರ
ಮತ್ತೆ ಕೇಳುತಿದೆ ಹೇ ರಾಮ್……
********************************
ಕೆ.ಟಿ. ಜಯಶ್ರೀ