ಗಾಂಧಿ ವಿಶೇಷ
ಗಾಂದೀಜಿ
“ಸತ್ಯ, ಅಹಿಂಸೆ, ಸರ್ವೋದಯ, ಸತ್ಯಾಗ್ರಹ”
ನಿಮ್ಮ ಈ ತತ್ವ ಗಳು ಇಂದಿಗೂ ಪ್ರಸ್ತುತ
ಎಷ್ಟು ಸಲ ತಿಳಿ ಹೇಳಿದರೂ ಸಹ,
ಕಲಿಯಲಿಲ್ಲ ಆದರೆ ಮಾನವ
ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು
ತನಗಿಷ್ಟಬಂದಂತೆ ತಿರುಚುವನು ವಾಸ್ತವವನ್ನು
ಆಗಬೇಕಿಲ್ಲ ಅವನಿಗೆ ಸರ್ವೋದಯ
ಇಲ್ಲದಿದ್ದವರ ಕರೆ ಬರೀ ಅರಣ್ಯ ರೋದನ
ಅಹಿಂಸೆ ಪದಕ್ಕೀಗ ಅರ್ಥವೇನು
ಹಿಂಸೆಯಲ್ಲೇ ನಡೆಯುತ್ತಿದೆ ಪ್ರಪಂಚ
ಮನಸ್ಸು ಇರಬೇಕು ತಿಳಿಬಾನಿನಂತೆ
ಪಡೆಯಬೇಕು ಶಾಂತಿಯಿಂದ, ಸತ್ಯಾಗ್ರಹದಿಂದ
ತಿಳಿಹೇಳುವುದು ಹೇಗೆ, ಈಗಿನ ಬುದ್ದಿಜೀವಿಗಳಿಗೆ
ಬರೀ ಅಕ್ಟೋಬರ್ ಅಲ್ಲಿ ನೆನೆದರೆ ಸಾಲದು
ಗಾಂಧೀಜಿ ಹಾಗು ಅವರ ತತ್ವಗಳನ್ನು
ಅಳವಡಿಸಿಕೊಳ್ಳಿ ಬದುಕಲ್ಲಿ, ಮತ್ತದು ಮರಳಿ ಬಾರದು
****************************
ಡಾ. ಸಹನಾ ಪ್ರಸಾದ್
Very nice
Nice poem Sahana