ಗಾಂಧಿ ವಿಶೇಷ

  ಗಾಂಧಿ ಮತ್ತು ನಾವು


ನೀನು ನಶೆಯಲ್ಲಿ ಬಿದ್ದುದು ಒಂದೇ ಸಲ
ಮೇಲೆದ್ದೆ ಇನ್ನೆಂದೂ ಬೀಳದ ಹಾಗೆ….
ಸಾಮಾನ್ಯತೆಯಿಂದ ಏರಿದೆ ಅಸಾಮಾನ್ಯತೆಯೆಡೆಗೆ
ಆತ್ಮಶಕ್ತಿಯ ಮೇರುವನ್ನೇರುತ್ತ ಮಹಾತ್ಮನಾದೆ…
ನಿತ್ಯ ತಾರಕ ಮಂತ್ರವಾಯಿತು ರಾಮನಾಮ ನಿನಗೆ
ಸತ್ಯಾಗ್ರಹ,ಅಹಿಂಸೆ,ಅಪರಿಗ್ರಹ ಮಂತ್ರದಂಡಗಳು
ಬಿದ್ದವರನ್ನೆತ್ತಿದೆ,ಸ್ವತಂತ್ರ ಭಾರತದಿ ಉಸಿರಾಡಿದೆವು

ನಶೆಯಲ್ಲಿ ನಾವೂ ಹಲವು ಸಲ ಬಿದ್ದೆವು….
ಮತ್ತೆ ಮತ್ತೆ ಬಿದ್ದೆವು ಮತ್ತೆಂದೂ ಏಳದ ಹಾಗೆ!
ಮಾಣಿಕ್ಯದ ಬೆಲೆಯರಿಯದ ನಮಗೆ…
ಸ್ವಾತಂತ್ರ್ಯವೂ ಮತ್ತೇರಿಸುವ ವಸ್ತುವಾಯಿತು
ಅಮಲಿನಲಿ ಕಳೆದುಕೊಂಡಿದ್ದೇವೆ ನಮ್ಮನ್ನು ನಾವೇ
ಗಾಂಧಿ,ಕಲಿಯಲಿಲ್ಲ ಪಾಠ ತಪ್ಪುಗಳಿಂದ ನಾವೆಂದೂ
ಗಾಂಧೀಜಿ ಪೆಟ್ಟಿಗೆ ತತ್ತರಿಸಿತು ಅಂಗ್ರೇಜಿ ಸಾಮ್ರಾಜ್ಯ
ಅವ್ಯಕ್ತ ಅಸ್ತ್ರ ಪ್ರಯೋಗಕ್ಕೆ ಶರಣಾದದ್ದೇ ವಿಸ್ಮಯ
ಮನುಷ್ಯನಿಗೆ ಮನುಷ್ಯನಾಗಿ ಸ್ಪಂದಿಸಿದರೀತಿಅನನ್ಯ
ಕೋಟಿ ಭಾರತೀಯರ ಬಯಕೆಗೆತುಡಿವದನಿಯಾದೆ
ನಿನ್ನ ಸಾಧನೆಗಳಿಗೆ ತವರಾಯಿತು ದಕ್ಷಿಣ ಆಫ್ರಿಕಾ!!
ಹೆಜ್ಜೆ ಹೆಜ್ಜೆಗೆ ತೊಡರಿದ ಅಪಮಾನಗಳ ಸರಮಾಲೆ
ಮುಂದಿನ ಶ್ರೇಷ್ಠ ಗೆಲುವಿಗೆ ಮೆಟ್ಟಿಲಾಯಿತು ಸೋಲೆ
ಮಹಾತ್ಮನಾಗುವ ಹಾದಿಯ ಕಲ್ಲು ಮುಳ್ಳುಗಳ
ಎಡಹಿದ್ದು ಇಲ್ಲೇ, ಅಪಾರ ಸಹನೆ ತೋರಿದ್ದು ಇಲ್ಲೇ!
ಬರಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ವಸಿದ್ಧತೆ
ಸ್ವಾರ್ಥವಿನಿತಿಲ್ಲ, ನಿಷ್ಕಾಮ ದಳಗಳ “ಹೊಂದಾವರೆ”
ಇರುವಲ್ಲಿಂದ ಇಲ್ಲಿವರೆ ಹೊರಳಿ ನೋಡದಿರು ತಂದೆ
ಸ್ವಾರ್ಥದ ಹುಳುಗಳಾಗಿದ್ದೇವೆ ಎನ್ನಲು ಮನನಾಚಿದೆ
ಹಣದ ಝಣ ಝಣ ಝಣತ್ಕಾರ ಕುಣಿಸುತಿದೆ
ಅವನಿವನ,ಇವನವನ ಕಾಲೆಳೆಯುವುದೇ ದಂಧೆ
ಪ್ರಕೃತಿ ಗೆ ಎದುರಾಗಿ ನಡೆದೀಗ ಫಲವುಣ್ಣುತ್ತಿದ್ದೇವೆ
“ಕರೋನ”ಮಾರಣಹೋಮ ತಡೆಯಿಲ್ಲದೆಸಾಗಿದೆ
ರಾಮರಾಜ್ಯದ ಸುಂದರಕನಸುಗಳ ಕಟ್ಟಿ ಕೊಟ್ಟೆ!!
ನನಸಾಗಿಸುವ ಕಸುವು ನಮಗಿರಲಿಲ್ಲ ತಂದೆ!!!
ಆಗಿದೆ ಅವ್ಯವಸ್ಥೆಯಗೂಡು,ಮನುಜನೆದೆಬೆಂಗಾಡು

*******************************************

ಗಿರಿಜಾ ರಾಜ್

4 thoughts on “

  1. Very nice. You can also watch Relevance of Ghandi on healthy life style by prof CV Venugopal of dharwad university today at 6 pm on face book

Leave a Reply

Back To Top