Category: ಇತರೆ

ಇತರೆ

ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು

ಲೇಖನ ಏನಿರದಿದ್ದರೂ ಸೂಕ್ಷ್ಮಮನಸ್ಸಿರ ಬೇಕು ನೂತನ ದೋಶೆಟ್ಟಿ ಅವಳು ಸ್ವೇಹಿತೆಯರ ಸಹಾಯದಿಂದ ಡಿಗ್ರಿ ಮುಗಿಸಿದಳು. ತರಗತಿಯ ಸಮಯದಲ್ಲಿ ಲಕ್ಷ್ಯ ಕೊಟ್ಟು ಕೇಳುತ್ತಿದ್ದರೂ ಬರೆದುಕೊಳ್ಳಲು ಅವರ ನೆರವು ಬೇಕಾಗುತ್ತಿತ್ತು. ಪರೀಕ್ಷೆಯ ಸಮಯದಲ್ಲಿ ಅವರು ಅವಳಿಗೆ ಇಡಿಯ ಪುಸ್ತಕವನ್ನು, ನೋಟ್ಸುಗಳನ್ನು ಓದಿ ಹೇಳುತ್ತಿದ್ದರು. ತಮ್ಮ ಪರೀಕ್ಷೆಯ ಸಿದ್ಧತೆಯ ಜೊತೆಗೆ ಅವಳ ಪರೀಕ್ಷೆಯ ಸಿದ್ಧತೆಯನ್ನು ಮಾಡುವ/ಮಾಡಿಸುವ ಜವಾಬ್ದಾರಿ ಅವಳ ಸ್ನೇಹಿತೆಯರದು. ಅದನ್ನು ಅವರೆಲ್ಲ ಮನಃಪೂರ್ವಕವಾಗಿ ಮಾಡುತ್ತಿದ್ದರು. ಪರಿಕ್ಷೆ ಮುಗಿದ ಮೇಲೆ ಸ್ನೇಹಿತೆಯರೆಲ್ಲ ಸೇರಿ ಪಿಕ್ಚರ್ ಪ್ರೋಗ್ರ‍್ರಾಂ ಹಾಕುತ್ತಿದ್ದರು. ಅದಕ್ಕೆ ಅವಳು ನಾನು […]

ನಾ ಮೆಚ್ಚಿದ ನಾಟಕ

ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ.   ಸುಮಾರು ಒಂದುವರೆ ವರ್ಷದ ಹಿಂದೆ  ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು […]

ಕೊಂಕಣಿ ಕವಿ ಪರಿಚಯ

ಲೇಖನ ಕೊಂಕಣಿ ಕವಿ ಪರಿಚಯ  ಮೆಲ್ವಿನ್ ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್. ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ. ಕೊಂಕಣಿ ಭಾಷಾ ಮಂಡಲ್ ಗೋವಾ (1989) ಕೊಂಕಣಿ ಕುಟುಂಮ್, ಬೆಹರೈನ್ (2006) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006). ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮ‌ಕೊಂಕಣಿ ಪುಸ್ತಕ ಪ್ರಶಸ್ತಿ.(2009) ಸಾಹಿತ್ಯ […]

ಮಕ್ಕಳಿಗೆ ಬದುಕಿನ ಪಾಠ

ಲೇಖನ ಮಕ್ಕಳಿಗೆ ಬದುಕಿನ ಪಾಠ ನಿಖಿಲ ಎಸ್. ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ […]

ಪ್ರತಿಭಾ ಪಲಾಯನ ನಿಲ್ಲಲಿ

ಲೇಖನ ಪ್ರತಿಭಾ ಪಲಾಯನ ನಿಲ್ಲಲಿ ಭಾರತ ದೇಶವು ಇಡೀ ಜಗತ್ತಿನ ಭೂಪಟದಲ್ಲಿಯೇ ರಾರಾಜಮಾನವಾಗಿರಲು ಕಾರಣ ನಮ್ಮ ದೇಶದ  ಕಲೆ,ಸಾಹಿತ್ಯ,ಸಂಸ್ಕೃತಿ,ನಾಗರಿಕತೆ,ಸಹಬಾಳ್ವೆ, ಸಹಮತ, ಸಿರಿ ಸಂಪತ್ತು, ವಾಯುಗುಣ, ಅನೇಕಾನೇಕ ಸಂಪನ್ಮೂಲಗಳ ಆಗರವಾಗಿದ್ದರಿಂದಲೇ ಭಾರತ ಹೆಮ್ಮೆಯ ರಾಷ್ಟ್ರವಾಗಿ ಕಂಗೊಳಿಸುತ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿರುವ ಶ್ರೇಷ್ಠ ಪ್ರತಿಭೆಗಳಿಂದ ದೇಶವು ಅನಾದಿಕಾಲದಿಂದಲೂ ಜಗದ್ವಿಖ್ಯಾತಿ ಪಡೆಯುತ್ತಾ ಬಂದಿದೆ.ಆರ್ಯಭಟ, ಶ್ರೀನಿವಾಸ ರಾಮಾನುಜನ್, ಸಿ.ವಿ.ರಾಮನ್,ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ರಂತಹ ಅನೇಕಾನೇಕ ಅಪ್ರತಿಮ ಪ್ರತಿಭೆಗಳು ಈ ದೇಶದ ಮಣ್ಣಿನ ಹೆಮ್ಮೆ.ಇವರಂತಹ ಲಕ್ಷಾಂತರ ಪ್ರತಿಭೆಗಳಿಗೆ ಭಾರತಮಾತೆ ದಿನೇ ದಿನೇ ಜನ್ಮಕೊಡುತ್ತಿದ್ದಾಳೆ.ಆದರೆ ಆ ಪ್ರತಿಭೆಗಳ […]

ಇತರೆ

ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು […]

ನಮ್ಮ ಮಕ್ಕಳು ಮಕ್ಕಳಲ್ಲ

ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, […]

ವರ್ಧಮಾನ ಸಾಹಿತ್ಯ ಪ್ರಶಸ್ತಿ

ವರ್ಧಮಾನ ಸಾಹಿತ್ಯ ಪ್ರಶಸ್ತಿ ಡಾಕ್ಟರ್ ಬಾಳಾ ಸಾಹೇಬ ಲೋಕಾಪುರ ಮತ್ತು ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ೨೦೧೯ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಅಥಣಿಯ ಡಾ ಬಾಳಾಸಾಹೇಬ ಲೋಕಾಪುರ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಉಜಿರೆಯ ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ . ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ […]

ಕೊಂಕಣಿ ಕವಿಗಳ ಪರಿಚಯ

ಕೊಂಕಣಿ ಕವಿಗಳ ಪರಿಚಯ ಪರಿಚಯಿಸಿದವರು ಶ್ರೀಯುತ ಗುರುದತ್ ಬಂಟ್ವಾಳಕಾರ್.(ಗುರು ಬಾಳಿಗಾ) ಕರ್ನಾಟಕದ ಕೊಂಕಣಿ ಕವಿಗಳನ್ನು ಪರಿಚಯಿಸುವ ಒಂದು ಜವಾಬ್ದಾರಿಯನ್ನು ಸಂಗಾತಿ ಪತ್ರಿಕೆ ನನಗೆ ಕೊಟ್ಟಿದೆ. ಮೊದಲಿಗೆ ನಾನು ಪರಿಚಯಿಸಲು ಇಚ್ಛಿಸುವ ಕವಿ ಶ್ರೀಯುತ ಗುರುದತ್ ಬಂಟ್ವಾಳಕಾರ್. ಗುರು ಬಾಳಿಗಾ ಎಂಬ ಕಾವ್ಯನಾಮದಿಂದ ಬರೆಯುವ ಇವರ ಕವಿತೆಗಳು ಸರಳ ಶಬ್ದಗಳಲ್ಲಿ ಆಳವಾದ ವಿಚಾರಗಳನ್ನು ಮಂಡಿಸುವುದರಲ್ಲಿ ಯಶಸ್ವಿಯಾಗುತ್ತವೆ. ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿರುವ “ವಿಶ್ವ ಕೊಂಕಣಿ ಕೇಂದ್ರ” ದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುದತ್ ಬಂಟ್ವಾಳಕಾರ್ ಅವರು ಅಲ್ಲಿನ ಕೊಂಕಣಿ ಭಾಷಾ […]

ಕ್ಷಮಯಾ ಧರಿತ್ರೀ …

ಕ್ಷಮಯಾ ಧರಿತ್ರೀ … ಲಕ್ಷ್ಮಿ ನಾರಾಯಣ ಭಟ್ ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ […]

Back To Top