ವಿಶ್ವ ಅಭಿಯಂತರರ ದಿನಾಚರಣೆ.

ಲೇಖನ

ವಿಶ್ವ ಅಭಿಯಂತರರ ದಿನಾಚರಣೆ.

ಜಯಶ್ರೀ.ಭ.ಭಂಡಾರಿ.

ಮೋಕ್ಷಗುಂಡ ವಿಶ್ವೇಶರಯ್ಯನವರ ಜನ್ಮದಿನವನ್ನು ಇಂಜನೀಯರ್ಸ ಡೇಯಾಗಿ ಆಚರಿಸಲಾಗುತ್ತದೆ.

ಇಂದು (ಸಪ್ಟಂಬರ 15) ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ನದಿನ. ಇದನ್ನು ಭಾರತದಲ್ಲಿ ಇಂಜನೀಯರ್ಸ ಡೇ ಯನ್ನಾಗಿ ಆಚರಿಸಲಾಗುತ್ತಿದೆ.ಇಂಜನೀಯರಿಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಅವರ ಜನ್ಮ ದಿನವನ್ನು ‘ಇಂಜನೀಯರ ದಿನ’ವನ್ನಾಗಿ ಆಚರಿಸಲಾಗುತ್ತದೆ.ಭಾರತ ಜನನಿಯ ತನುಜಾತೆ ಕರ್ನಾಟಕಕ್ಕೆ ವಿಶ್ವೇಶ್ವರಯ್ಯನವರು ದೊಡ್ಡ ಕೊಡುಗೆ.ಸಪ್ಟಂಬರ 15 1860 ರಂದು ಜನಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನೀಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು.1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದರು.   ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ.ಪುಣೆ,ಕೊಲ್ಲಾಪುರ,ಸೋಲಾಪುರ, ವಿಜಾಪುರ ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ವಿಲಾಸ ಮತ್ತು ಈಡನ ನಗರಗಳಿಗೆ ಭೇಟ್ಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು. ಮುಂಬೈ ರಾಜ್ಯದಲ್ಲಿ ಅವರು ಸೇವೆಯಲ್ಲಿದ್ದಾಗ ಪುಣೆ ನಗರದಲ್ಲಿ ಆಗಿನ ಮಹಾನ ನಾಯಕರಾಗಿದ್ದ ಲೋಕಮಾನ್ಯ ತಿಲಕ,ರಾನಡೆಯವರು ಮತ್ತು ಗೋಪಾಲಕೃಷ್ಣ ಗೋಖಲೆಯವರಿಂದ ದೇಶಪ್ರೇಮವನ್ನು ಬೆಳೆಯಿಸಿಕೊಂಡರು.ಈ ಧೀಮಂತ ನಾಯಕರುಗಳ ಸಂಪರ್ಕದಿಂದ ರಾಷ್ಟ್ರಕ್ಕಾಗಿ ಯಾವ ರೀತಿಯಿಂದ ಸೇವೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು.1902 ರಲ್ಲಿ ವಿಶ್ವೇಶ್ವರಯ್ಯನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Pಡಿeseಟಿಣ Sಣಚಿಣe oಜಿ ಇಜuಛಿಚಿಣioಟಿ iಟಿ ಒಥಿsoಡಿe” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು.

ಮುಂಬೈ ರಾಜ್ಯದಲ್ಲಿ ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ ಸಂಸ್ಥಾನದ ನಿಜಾಮರ ಕರೆ ಮೇರೆಗೆ ಹೈದ್ರಾಬಾದ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು

.

ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು.ಹೈದ್ರಾಬಾದ ನಗರವನ್ನು ನವೀಕರಿಸಿ ಆಧುನೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿತ್ತು.

ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು ಮೈಸೂರ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ,ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು.ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಠಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು.

ವಿಶ್ವೇಶ್ವರಯ್ಯನವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜೀಯರ ಆಗಿ ಸೇವೆ ಸಲ್ಲಿಸುತ್ತಿದ್ದರೂ,ಇವರು ತಮ್ಮ ವ್ಯಾಪ್ತಿಯನ್ನು ಮುಖ್ಯ ಇಂಜನೀಯರ ಹುದ್ದೆಗೆ ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ರೂಪಿಸುವಲ್ಲಿ ಕಾರಣೀಭೂತರಾದರು.ಇವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ 1911 ರಲ್ಲಿ ಸಂಪದಭಿವೃದ್ಧಿ ಸಮ್ಮೇಳನ ವನ್ನು ಪ್ರಾರಂಭಿಸಿ ಸಂಸ್ಥಾನದ ಪ್ರಮುಖರೆಲ್ಲರನ್ನು ಸೇರಿಸಿ ರಾಜ್ಯದ ಸಂಪನ್ಮೂಲಗಳು,ಕೈಗಾರಿಕೆಗಳು ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ಅಧ್ಯಯನ ಕೈಗೊಂಡರು.ತಂತ್ರಜ್ಞಾನ ಇಷ್ಟೊಂದು ಆಧುನಿಕರವಾಗಿರದ ಅಂದಿನ ಕಾಲದಲ್ಲಿಯೇ ಅವರು ನಿರ್ಮಿಸಿದ ಕರ್ನಾಟಕದ ಕೃಷ್ಣರಾಜ ಸಾಗರ ಆಣಿಕಟ್ಟು,ಬೃಂದಾವನ ಗಾರ್ಡನ,ಭದ್ರಾವತಿಯ ಉಕ್ಕಿನ ಕಾರ್ಖಾನೆ,ಮೈಸೂರು ಗಂಧದೆಣ್ಣೆ ಕಾರ್ಖಾನೆ ಮುಂತಾದವುಗಳ ಮೂಲಕ ವಿಶ್ವೇಶ್ವರಯ್ಯನವರು ಕರ್ನಾಟಕ್ಕೆ ಸರ್ವಾಂಗೀಣ ಪ್ರಗತಿಗೆ ಕಾರಣರಾದರು.ತಂತ್ರಜ್ಞಾನದ ಅದ್ಭುತಗಳನ್ನು ಭಾರತಕ್ಕೆ ಕೊಟ್ಟ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ ಸರಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ‘ನೈಟಹುಡ್’ ಪ್ರಶಸ್ತಿ ನೀಡಿತ್ತು. 1955 ರಲ್ಲಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆಂಗ್ಲರು ಭಾರತದ ಸಂಪತ್ತನ್ನು ದೋಚಿ ತಮ್ಮ ದೇಶಕ್ಕೆ ರವಾನೆ ಮಾಡಿ,ಅಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ಭಾರತಕ್ಕೆ ಮಾರಾಟ ಮಾಡಿ, ಭಾರತೀಯ ಗುಡಿ ಕೈಗಾರಿಕೆಗಳನನು ಸಂಪೂರ್ಣ ನಾಶಮಾಡಿ ತಮ್ಮ ಸರಕುಗಳಿಗೆ ಭಾರತವನ್ನು ಮಾರುಕಟ್ಟೆ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಸರ ಎಂ.ವಿ. ಬ್ರಿಟಿಷರ ವಿರೋಧದ ನಡುವೆಯೂ ಭಾರತೀಯ ಕೈಗಾರಿಕೆಗಳನ್ನು ಉಳಿಸಿ,ಬೆಳೆಸುವ ಹಲವಾರು ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಉಕ್ಕಿನ ಕಾರ್ಖಾನೆಯಂತಹ ಬೃಹತ್ ಕೈಗಾರಿಕೆಗಳಿಗೆ ವಿಶ್ವ ಮಾನ್ಯತೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಇಂತಹ ಮಾನವ ಕುಲ ಈ ದಿನವನ್ನು “ವಿಶ್ವ ಅಭಿಯಂತರ ದಿನ” ಎಂದೆ ಪರಿಗಣಿಸಿ ಅವರನ್ನು ಅವರ ಕಾಯಕ ನಿಷ್ಠತೆಯನ್ನು ನೆನಪಿಸಿಕೊಳ್ಳುತ್ತದೆ.ಆ ಮೂಲಕ ವಿಶ್ವದ ಮಹಾನ ಚೇತನಕ್ಕೆ ಈ ದಿನದ ಗೌರವ ಸಮಪಿರ್ತವಾಗಿದೆ.ಕನ್ನಡಿಗರ ಆರಾಧ್ಯ ದೈವ ಈ ಅಭಿಯಂತರರು ವಿಶ್ವೇಶ್ವರಯ್ಯನವರು.

ನಾವೆಲ್ಲರೂ ಮಾಡುವ ಕಾಯಕದಲ್ಲಿ ಶಿಸ್ತು, ಸ್ವಯಮ,ಆದರ್ಶಗಳನ್ನು ಅಳವಡಿಸಿಕೊಂಡು ಅವಿರತವಾಗಿ ದುಡಿದು ಅವರ ಪಥದಲ್ಲಿ ಸಾಗೋಣ ಈ ಮೂಲಕ ಅವರಿಗೆ ಗೌರವ ನಮನಗಳನ್ನು ಸಲ್ಲಿಸೋಣ.  ಜಗತ್ತು ಸುತ್ತಿಕೊಂಡ ಮಹಾಮಾರಿಗೆ

ಎಲ್ಲ ಉತ್ಸವ, ಹಬ್ಬ-ಹರಿದಿನಗಳು, ಜಾತ್ರೆ ನಿಬ್ಬಣಗಳು, ದಿನಾಚರಣೆ, ಜಯಂತಿಗಳು ಬೆರಳೆಣಿಕೆಯಷ್ಟು ಜನರ‌ ನಡುವೆ ಅತೀ ಸರಳವಾಗಿ ನಡೆಯುತ್ತಿವೆ.ಇದು ಇಂದಿನ ಕಾಲಘಟ್ಟದಲ್ಲಿ ತುಂಬಾ ಅನಿವಾರ್ಯ ಕೂಡ. ವಿಶ್ವಮಾನ್ಯ ವಿಶ್ವೇಶ್ವರಯ್ಯ ನವರ ದಿನಾಚರಣೆ ಕೂಡ ಸರಳವಾಗಿ ಆಚರಿಸಿ ಪುನೀತರಾಗೋಣ.ಎಲ್ಲರಿಗೂ ವಿಶ್ವ ಅಭಿಯಂತರ ದಿನಾಚರಣೆ ಶುಭಾಶಯಗಳು.

***************************************

One thought on “ವಿಶ್ವ ಅಭಿಯಂತರರ ದಿನಾಚರಣೆ.

Leave a Reply

Back To Top