ಕಾರ್ಮಿಕ ದಿನದ ವಿಶೇಷ-ಲೇಖನ
ನಾವು ಬಾಲ ಕಾರ್ಮಿಕರು. ಗೌರಿ.ಚಂದ್ರಕೇಸರಿ ನಾವು ಬಾಲ ಕಾರ್ಮಿಕರು. ಹೌದು. ನಾವು ಕೂಲಿ ಮಾಡುವ ಮಕ್ಕಳು. ನಮ್ಮನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಾರೆ. ನಮ್ಮೆಲ್ಲರ ಕನಸುಗಳು ಹೆಚ್ಚೂ ಕಮ್ಮಿ ಒಂದೇ ತೆರನಾಗಿರುತ್ತವೆ. ಬೇರೆ ಬೇರೆ ಬಣ್ಣದ ಬಟ್ಟೆ ತೊಟ್ಟಿರುತ್ತವೆ. ಆದರೆ ಕನಸಿನ ಪರಿಧಿ ಭಿನ್ನ. ಅವು ಕೈಗೂಡಲಾರದ ಕನಸುಗಳೆಂದು ನಮಗೆ ಗೊತ್ತು. ಆದರೆ ಕನಸುಕಾಣಲು ಹಣವನ್ನೇನೂ ಕೊಡಬೇಕಿಲ್ಲವಲ್ಲ.ಸೈಕಲ್ ಶಾಪ್ ಒಂದರಲ್ಲಿ ಪಂಕ್ಚರ್ ಹಾಕುತ್ತ ನಾನೊಬ್ಬಸೈಕ್ಲಿಸ್ಟ್ ಆಗಬೇಕೆಂದೋ, ಹೋಟೆಲ್ ಒಂದರಲ್ಲಿ ಎಂಜಲುಹೊದ್ದು ಮಲಗಿದ ಟೇಬಲ್‌ನ್ನು ಶುಚಿಗೊಳಿಸುತ್ತ, ಗ್ರಾಹಕರ ಜೊತೆ […]
ಕಾರ್ಮಿಕ ದಿನದ ವಿಶೇಷ
ಅರಿವು ಬಹು ಮುಖ್ಯ..! ಕೆ.ಶಿವು ಲಕ್ಕಣ್ಣವರ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕ ದಿನದ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕರ ದಿನಾಚರಣೆಯ ದಿನ. ಇದು ಮಹತ್ವದ ದಿವಾಗಿದೆ. ಮೇ ದಿನ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ ದಿನಕ್ಕೆಂಟು ಗಂಟೆಗಳ ನಿಗದಿತ ಕೆಲಸಕ್ಕಾಗಿ ಆರಂಭವಾದ ಹೋರಾಟವನ್ನು ಸ್ಮರಿಸುವ ಈ ದಿನವನ್ನು ಕಾರ್ಮಿಕರು ಇಡೀ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟದ ದಿನವನ್ನಾಗಿ ಆಚರಿಸುತ್ತಾರೆ. ಈ ಆಚರಣೆಗೆ ಒಂದು ಶತಮಾನಕ್ಕೂ ಮೀರಿದ ಸುದೀರ್ಘ […]
ಕಾರ್ಮಿಕ ದಿನದ ವಿಶೇಷ-ಲೇಖನ
ಪ್ರತಿಯೊಬ್ಬರೂ ಕಾರ್ಮಿಕರೇ ಶೃತಿ ಮೇಲುಸೀಮೆ ಪ್ರತಿಯೊಬ್ಬರೂ ಕಾರ್ಮಿಕರೇ ಇಂದು ಮೇ ಒಂದು, ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಇದನ್ನು 1886, ಮೇ 4 ರಂದು ಚಿಕಾಗೋದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಖಂಡಿಸಿದ ಪ್ರತೀಕದ ಕುರುಹುವಾಗಿ ಆಚರಿಸುತ್ತಾ ಬರಲಾಗುತ್ತದೆ. ಈ ಕಾರ್ಮಿಕ ದಿನದ ಮೂಲ ಕುರುಹು ಇರುವುದು ಅಮೆರಿಕದಲ್ಲಿ, ಅಲ್ಲಿ ಕಾಲರಾಡೋ ರಾಜ್ಯ 1887ರಲ್ಲಿ ಮಾರ್ಚ್ 15 ರಂದು ಕಾರ್ಮಿಕ ದಿನ ಆಚರಣೆಗೆ ಕಾನೂನನ್ನು ಮಾನ್ಯ ಮಾಡಿತು. ಭಾರತದಲ್ಲಿ ಈ ದಿನವನ್ನು 1927ರಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದು […]
ಕಾರ್ಮಿಕ ದಿನದ ವಿಶೇಷ -ಲೇಖನ
ಲೇಖನ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಚಂದ್ರು ಪಿ ಹಾಸನ್ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ರ ಸನ್ನುಡಿ ಗಳಂತೆ ಭೂಮಿಯ ಪ್ರತಿಯೊಂದು ಜೀವಿಯು ಜನಿಸಿದ ಮೇಲೆ ತನ್ನದೇ ಆದ ನಿತ್ಯಕರ್ಮ ಗಳಿಂದ ಜೀವನ ನಡೆಸಬೇಕಾಗುತ್ತದೆ ಕಾರ್ಮಿಕ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿದೆ . ಕರ್ಮಯೋಗಿ ಕಾರ್ಮಿಕ ಅವನು ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಕೊಂಡು ತನಗಾಗಿ, ತನ್ನವರಿಗೆ, […]
ಬಸವ ಜಯಂತಿ
ಬಸವ ಜಯಂತಿ ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..! ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ… ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು… ಬಸವಣ್ಣನವರು ೧೧೩೪ […]
ಅಪ್ಪಟ ಕನ್ನಡದ ವಿನಯ
ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು […]
ಪ್ರಸ್ತುತ
ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ […]
ಭೂಮಿ ದಿನ
ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ […]
ಪ್ರಸ್ತುತ
ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ. ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ ಎಂಬ ಭಾವನೆ […]
ಚರ್ಚೆ
ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ […]