ಕಾರ್ಮಿಕ ದಿನದ ವಿಶೇಷ-ಲೇಖನ

ಪ್ರತಿಯೊಬ್ಬರೂ ಕಾರ್ಮಿಕರೇ

ಶೃತಿ ಮೇಲುಸೀಮೆ

ಪ್ರತಿಯೊಬ್ಬರೂ ಕಾರ್ಮಿಕರೇ

Mayday wedding logo by Lisa Leonard on Dribbble

ಇಂದು ಮೇ ಒಂದು, ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಇದನ್ನು 1886, ಮೇ 4 ರಂದು ಚಿಕಾಗೋದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಖಂಡಿಸಿದ ಪ್ರತೀಕದ ಕುರುಹುವಾಗಿ ಆಚರಿಸುತ್ತಾ ಬರಲಾಗುತ್ತದೆ.

ಈ ಕಾರ್ಮಿಕ ದಿನದ ಮೂಲ ಕುರುಹು ಇರುವುದು ಅಮೆರಿಕದಲ್ಲಿ, ಅಲ್ಲಿ ಕಾಲರಾಡೋ ರಾಜ್ಯ 1887ರಲ್ಲಿ ಮಾರ್ಚ್ 15 ರಂದು ಕಾರ್ಮಿಕ ದಿನ ಆಚರಣೆಗೆ ಕಾನೂನನ್ನು ಮಾನ್ಯ ಮಾಡಿತು. ಭಾರತದಲ್ಲಿ ಈ ದಿನವನ್ನು 1927ರಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದು ವಿಶ್ವದ ಅನೇಕ ಕಡೆಗಳಲ್ಲಿ ಮೆರವಣಿಗೆ, ಪ್ರದರ್ಶನ,ಭಾಷಣ,ಕ್ರೀಡೆಗಳ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಬಲಾಢ್ಯರು ದುರ್ಬಲರ ಮೇಲೆ ಅನಾದರ ತೋರುತ್ತಾ, ತುಳಿತಕ್ಕೀಡು ಮಾಡುತ್ತಾ ಬಂದಿದ್ದಾರೆ. ಈ ದಬ್ಬಾಳಿಕೆಯು ಪ್ರಾಚೀನ ಕಾಲದ ಶೂದ್ರರು, ಮಧ್ಯಯುಗದಲ್ಲಿ ಗುಲಾಮರನ್ನು, ಆಧುನಿಕ ಯುಗದ ಆರಂಭದಲ್ಲಿ ಕಾರ್ಮಿಕರನ್ನು ಒಳಗೊಂಡಂತೆ ಮುಂದುವರೆದಿದೆ. ಯುಕ್ತಿ ಮತ್ತು ಶಕ್ತಿ ಇದ್ದರೆ ಇಡೀ ಜಗತ್ತನ್ನೇ ಆಳಬಹುದು ಎಂಬ ನಿದರ್ಶನಗಳು ಸಾಕಷ್ಟಿವೆ.

ಪ್ರಸ್ತುತತೆಯನ್ನು ಗಮನಿಸುವುದಾದರೆ ಬಡವ ಬಲ್ಲಿದರ ನಡುವಿನ ಅಂತರ ಇಂದೆಂದಿಗಿಂತಲೂ ಹೆಚ್ಚುತ್ತಿದೆ. ಕೂಲಿ ಎಂಬ ಬಿಡಿಗಾಸು ನೀಡಿ,ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮನ್ನು ನಮ್ಮೆದುರೇ ಸದ್ದಿಲ್ಲದೆ ಶೋಷಿಸುತ್ತಿದ್ದರೆ. ನಮ್ಮ ಹಿಟ್ಟಿನ ಚೀಲಕ್ಕೆ ಕಲಬೆರಿಕೆಯಂತಹ ವಿಷದ ಪುಡಿ ಬೆರೆಸಿ ಕೊಡುತ್ತಿದ್ದರೂ ಕಾಣದಂತೆ ಕುರುಡಾಗಿವೆ ನಮ್ಮ ಕಣ್ಣುಗಳು.

ಇಂತಹ ಸ್ಥಿತಿಯಲ್ಲಿರುವ ಸಮಾಜವನ್ನು ನಾವು ಉತ್ತಮ ಗೊಳಿಸಿಕೊಳ್ಳಬೇಕಿದೆ, ನಮ್ಮ ಮುಂದಿನ ಸಮಾಜಕ್ಕೆ ಬದುಕು ಎಂದರೆ ಕೇವಲ ದುಡಿತ, ಸಂಪಾದನೆ ಎಂದು ತಿಳಿಸದೆ, ಬದುಕಿರುವುದು ಬದುಕಲಿಕ್ಕೆ ವಿನಃ ಹಣ ಸಂಪಾದನೆಯೊಂದೇ ನಮ್ಮ ಗುರಿಯಾಗಬಾರದು ಎಂದು ತಿಳಿ ಹೇಳಬೇಕಿದೆ.

ಒಂದಲ್ಲಾ ಒಂದು ವೃತ್ತಿ ಮಾಡುತ್ತಿರುವ ಪ್ರತಿಯೊಬ್ಬರು ಇಲ್ಲಿ ಕಾರ್ಮಿಕರೇ,ಯಾವುದೇ ಕೆಲಸ ಇರಲಿ ಅದರಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲಾ ಕೆಲಸನೂ ಸಮವಾದದ್ದು, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಭರದಿಂದ, ಕೈ ಮೀರಿದ ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿಸಿ ಏನೋ ಸಾಧಿಸುವ ಛಲದಿಂದ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರದೆ ಅವರ ಬಾಲ್ಯವನ್ನು ಕಿತ್ತುಕೊಳ್ಳದೆ, ಅವರಿಗೂ ಅವರ ಬದುಕಿನಲ್ಲಿ ಸೋಲು-ಗೆಲುವು ಮೆಟ್ಟಿ ನಿಂತು ಮೇರು ಪರ್ವತ ಏರಲು ಬಿಡಿ. ಜೊತೆಗಿದ್ದು ಬದುಕಿನ ದಡ ಸೇರಿಸಿ, ಆದರೆ ಅವರ ಜೀವನವನ್ನು ನೀವೇ ಜೀವಿಸಬೇಡಿ!!

One thought on “ಕಾರ್ಮಿಕ ದಿನದ ವಿಶೇಷ-ಲೇಖನ

Leave a Reply

Back To Top