ಹರಿಯುವ ನೀರು
ಆದರೆ ಕೆಲವು ಸಲ ಸಾಮಾಜಿಕ ಬದಲಾವಣೆಗಳು ಭಾವನಾತ್ಮಕ ಬದಲಾವಣೆಗೆ, ಮೌಲ್ಯಗಳ ಬದಲಾವಣೆಗೆ ಎಡೆಮಾಡಿ ಕೊಡುತ್ತವೆ. ಪ್ರಾಚೀನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬದ ವ್ಯವಸ್ಥಗೆ ವಿಶೇಷ ಸ್ಥಾನವಿದ್ದಿತು. ಸಂಬಂಧಗಳು ನಿಕಟವಾಗಿದ್ದವು. ಉದ್ಯೋಗಗಳು ಕುಟುಂಬಕ್ಕೆ ಸೀಮಿತವಾಗಿದ್ದವು, ಸ್ಥಳೀಯವಾಗಿದ್ದವು. ಮಕ್ಕಳು ತಾಯಿಯಿಂದ ದೂರವಾಗುವ ಕಾರಣಗಳಿರಲಿಲ್ಲ. ಹೆಣ್ಣು ಮಗುವನ್ನು ಕುಲಕ್ಕೆ ಹೊರಗೆ ಎನ್ನುತ್ತ ಚಿಕ್ಕಂದಿನಿಂದಲೇ ಮಾನಸಿಕವಾಗಿ ದೂರವಿಡಲಾಗುತ್ತಿತ್ತು.
ವಿದ್ಯಾರ್ಥಿಗಳೆಂಬ ಮರುಜವಣಿಗಳು
ಲೇಖನ ವಿದ್ಯಾರ್ಥಿಗಳೆಂಬ ಮರುಜವಣಿಗಳು ಕಾಂತರಾಜು ಕನಕಪುರ ಒಬ್ಬ ಅಧ್ಯಾಪಕನಾಗಿ, ಖಾಲಿಯಾದ ಕಾಲೇಜು ಆವರಣಗಳು, ವಿದ್ಯಾರ್ಥಿಗಳ ಕಲರವವಿರದ ನೀರವ ಮೊಗಸಾಲೆಗಳು, ಧೂಳು ತಿನ್ನುತ್ತಿರುವ ಬೆಂಚು-ಡೆಸ್ಕ್ ಗಳನ್ನು ನೋಡುವ ಸಂದರ್ಭ ಮತ್ತೆ ಯಾವತ್ತಿಗೂ ಬಾರದಿರಲಿ ಎಂದು ಆಶಿಸುತ್ತೇನೆ. ಕೋವಿಡ್-19ರ ಕಾರಣಕ್ಕಾಗಿ ವಿದ್ಯಾರ್ಥಿಗಳು ಆಗಮಿಸದಂತಾಗಿ ಈಗ ಕಾಲೇಜು ಕೇವಲ ನಿಸ್ತೇಜ ಕಟ್ಟಡವಾಗಿದೆ, ಅದಕ್ಕೆ ಜೀವ ಸಂಚಾರವಾಗುವುದು ವಿದ್ಯಾರ್ಥಿಗಳೆಂಬ ಮರುಜವಣಿಗಳ ಪ್ರವೇಶವಾದಾಗ ಮಾತ್ರ. ಈ ಸಂದರ್ಭದಲ್ಲಿ ಶ್ರೀಪಾದರಾಯರ “ಕಂಗಳಿದ್ಯಾತಕೋ ಕಾವೇರಿರಂಗನ ನೋಡದ” ಗೀತೆಯನ್ನು ಅವರ ಕ್ಷಮೆಕೋರಿ ಬದಲಾಯಿಸಿಕೊಂಡು“ಕಾಲೇಜಿದ್ಯಾತಕೋ ವಿದ್ಯಾರ್ಥಿಗಳೇ ಇರದ|ಶಿಕ್ಷಣದೊಳಗೆ ಮುಖ್ಯ ಮೂರುತಿ […]
ಬ್ರಹ್ಮ ನ ಸಮಸ್ಯೆ
ಮಕ್ಕಳ ಕಥೆ ಬ್ರಹ್ಮ ನ ಸಮಸ್ಯೆ ಸಂತೆಬೆನ್ನೂರು ಫೈಜ್ನಟ್ರಾಜ್ ಜೀವನದಲ್ಲಿ ಎಲ್ಲವೂ ಸರಿ ಇರುವುದಿಲ್ಲ ಅಂತ ನಮ್ಮೆಲ್ಲರಿಗೂ ಗೊತ್ತು. ಒಮ್ಮೊಮ್ಮೆ, ಒಂದೊಂದು ಹೇಗೋ ಎಡವಟ್ಟಾಗಿರುತ್ತೆ. ನಾವೇ ಸರಿ ಮಾಡ್ಕೋಬೇಕಪ್ಪ ಅನ್ನೋ ಅಮ್ಮನ ಮಾತು ನಮ್ಮ ಪುಟಾಣಿ ಮಗಳು ನಂಬ್ತಾನೇ ಇಲ್ಲ? ಅವಳು ಆಡುವ ನೂರಾರು ತರದ ಆಟದ ಸಾಮಾನುಗಳೆಲ್ಲಾ ಎಷ್ಟು ನೀಟಾಗಿವೆ ಅನ್ನುವ ಅರ್ಥದಲ್ಲಿ ಅವಳು ಅಮ್ಮನ ಬಳಿ ವಾದ ಮಾಡುತ್ತಿದ್ದಾಳೆ. ಅದೆಂಗ್ ಸರಿ ಇರಲ್ಲ? ದೇವರು ತಪ್ಪು ಮಾಡುತ್ತಾನಾ? ಭೂಮಿ, ಆಕಾಶ, ಮರಗಿಡ ಬಳ್ಳಿ, ಮಳೆ, […]
ಬೇಕಾದರೆ ಕಡಲ ತೀರದ
ತೆರೆಗಳಂತೆ ಬಂದು
ಅಪ್ಪಳಿಸು ನನ್ನ
ಶಾಲೆಯ ಹೆಡ್ ಬಾಯೋರು ಬಳಸಿದ ಹಳೆಯ ಕರಿ ಬಣ್ಣದ ಮೊಬೈಲನ್ನು ಸಾಳೂಗೆ ಕೊಟ್ಟಿದ್ದರು. ಅದೇ ಮೊಬೈಲು ರ‍್ಸಿನಿಂದ ತೆಗೆದು ಘಂಟೆ ಎಷ್ಟಾಯಿತೆಂದು ನೋಡಿದಳು. ಏಳು ಗಂಟೆಯಾಗುತ್ತಾ ಬಂತು ಬೇಗ ಮುಟ್ಟಬೇಕು ಎಂದುಕೊಳ್ಳುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕಲು ಶುರು ಮಾಡಿದಳು. ಆದರೆ ಈಗೀಗ ಸಾಳೂಗೆ ನಡೆಯಲು ತುಂಬಾ ತ್ರಾಸು ಆಗುತ್ತಿತ್ತು
‘ಅಯ್ಯೋ, ನೀವು ಇಷ್ಟೆಲ್ಲ ಕಥೆ ಹೇಳಿದ ಮೇಲೆ ಇನ್ನು ಬೇರೇನು ನಿರ್ಧರಿಸಲಿಕ್ಕಾಗುತ್ತದೆ ಗುರೂಜಿ? ಹೇಗೆ ಹೇಳುತ್ತೀರೋ ಹಾಗೆ ಮಾಡುವ. ಆದರೂ ಒಂದು ಮಾತು ನೋಡಿ, ಇನ್ನು ಮುಂದೆ ನೀವೂ ನನ್ನೊಟ್ಟಿಗಿದ್ದುಕೊಂಡು ಸಹಕರಿಸುತ್ತೀರಿ ಎಂದಾದರೆ ಮಾತ್ರ ನಾನೂ ಈ ವಿಷಯದಲ್ಲಿ ಮುಂದುವರೆಯುತ್ತೇನೆ!’ ಎಂದೆನ್ನುತ್ತ ಅವರನ್ನು ಮೆಚ್ಚಿಸುವ ವಿನಯತೆ ನಟಿಸಿದ.
ಉತ್ತರ ಕರ್ನಾಟಕದ ಸಡಗರದ ಹಬ್ಬ ಕಾರಹುಣ್ಣಿಮೆ
ಹೀಗೆ ಮಳೆ ಬೆಳೆ ತಿಳಿಸುವ ಮುಂಭವಿಷ್ಯದ ಹಬ್ಬವಾಗಿದೆ ಕಾರಹುಣ್ಣಿಮೆ
“ಬೆರಳ ತುದಿಯಲ್ಲೇ ಇದೆ ಭದ್ರತೆ “
ಬಡತನ,ನೋವು,ಹತಾಶೆ, ಅವಮಾನಗಳ ನಡುವೆ ಬದುಕು ಕಟ್ಟಿ ಕೊಟ್ಟ ಮತ್ತು ಬದುಕಲು ಕಲಿಸಿದ, ಬೆರಳ ತುದಿಯಲ್ಲೇ ಭದ್ರ ಭಾವ ಕೊಡುವುದು ಕೇವಲ ಅಪ್ಪನಿಂದ ಮಾತ್ರ ಸಾಧ್ಯ
ಹೀಗಿದ್ದರು ನನ್ನಪ್ಪ…!
ನನ್ನಪ್ಪನೆಂದರೆ ಊರಿನವರೆಲ್ಲರಿಗೂ ಅಕ್ಕರೆ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಅವರಿದ್ದ ರೀತಿಯೇ ಹಾಗೆ. ನೋವು ಮಾಡಿದವರಿಗೂ ಕೇಡು ಬಯಸುತ್ತಿರಲಿಲ್ಲ. ಅವರು ಲಾಭ ನಷ್ಟಗಳ ಬಗ್ಗೆ ಲೆಕ್ಕಾಚಾರವನ್ನು ಇಟ್ಟುಕೊಳ್ಳದೆ, ಜೀವನದ ವಾಸ್ತವತೆಯನ್ನು ಅರಿತುಕೊಂಡವರು.
ತನ್ನ ಕೋಳಿಗಳು ಸುಮಿತ್ರಮ್ಮನ ಅಂಗಳದಲ್ಲಿ ಹರಡಿದ ಕೊಳಕನ್ನು ತೊಳೆದುಕೊಟ್ಟ ರಾಧಾ ಅವುಗಳ ಮೇಲೆ ಬೇಸರಗೊಂಡು ಮನೆಗೆ ಹೊರಟಳು. ಅವಳ ಸ್ವಚ್ಛತಾ ಅಭಿಯಾನ ಮುಗಿಯುವವರೆಗೆ ತಮ್ಮ ಆವರಣದ ಹೊರಗೆಯೇ ನಿಂತುಕೊಂಡು ಗಮನಿಸುತ್ತಿದ್ದ ಸುಮಿತ್ರಮ್ಮನಿಗೆ ಅವಳು ಹೊರಟು ಹೋಗುತ್ತಲೇ ರಪ್ಪನೆ ಒಂದು ವಿಷಯವು ನೆನಪಾಯಿತು.