Category: ಅಂಕಣ

ಅಂಕಣ

. ಇಂದಿನ, ಯುವಜನಾಂಗ ಗಾಂಧೀ ಮಾದರಿಯ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿರುವುದು ಆಶಾದಾಯಕವಾಗಿದೆ. ಇದಕ್ಕೆ ಪ್ರಸ್ತುತ ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಜ್ವಲಂತ ಉದಾಹರಣೆಯಾಗಿದೆ

ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…

ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.

ಹನ್ಸಾ ಜೀವರಾಜ್ ಮೆಹ್ತಾರವರು ಒಬ್ಬ ಸಾಮಾಜಿಕ ಕಾರ್ಯಕರ್ತೆ, ಶಿಕ್ಷಣತಜ್ಞೆ, ಸುಧಾರಣಾವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಕೂಡ ಆಗಿದ್ದರು

ಅಂಕಣ ನೆಲಸಂಪಿಗೆ ಈ ಹಕ್ಕಿ ಮರಳಿ ಕಾಡಿಗೆ ಹೋಗಿ ಬದುಕಲಾರದು…! ಮನೆಗೆ ಬೇಕಾದ ಕೆಲ ಅಗತ್ಯದ ವಸ್ತುಗಳು ಮತ್ತು ಬಟ್ಟೆ ಖರೀದಿಸಲೆಂದು ಆವತ್ತು ಪೇಟೆಗೆ ಹೋಗಿದ್ದೆವು. ಮಾರ್ಚ್ ತಿಂಗಳ ಸುಡುಬಿಸಿಲು, ಧೂಳು. ಬಿಡುವು ಕೊಡದೆ ಧಾವಿಸುವ ವಾಹನಗಳ ಕರ್ಕಶ ಸದ್ದು. ಎಲ್ಲದರ ನಡುವೆ ರೋಸಿ ಹೋಗಿ ಬಟ್ಟೆಯಂಗಡಿಯ ಬಳಿ ತಲುಪಿದಾಗ ಆಗಲೇ ಆಯಾಸವಾಗಿತ್ತು. ಅಂತಹ ಹೊತ್ತಿನಲ್ಲಿ ಗುಬ್ಬಚ್ಚಿಯೊಂದು ಉರಿಬಿಸಿಲಿಗೆ ಕುದಿಯುತ್ತಿದ್ದ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಅಲ್ಲೇನೂ ಕಾಣಲಿಲ್ಲ. ಅದು ಬಾಯಾರಿಕೆ, ಹಸಿವಿನಿಂದ ಕಂಗೆಟ್ಟಂತೆ […]

ತಮ್ಮ ಹೃದಯದ ಬೆಚ್ಚಗಿನ ಗೂಡಿನಲ್ಲಿ ಗಜಲ್ ಕನಕಾಂಗಿಯನ್ನು ಕಾಪಿಡುತ್ತಿರುವ ಗಜಲ್ ಕಾರರೊಂದಿಗೆ ಪ್ರತಿ ವಾರ ರುಬರು ಆಗುವ ಸದಾವಕಾಶ ದೊರಕಿದೆ. ಪ್ರತಿ ಗುರುವಾರ ಒಬ್ಬ ಗಜಲ್ ಗಾರುಡಿಗರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ…!!

ಹೀಗೆ ಗಾಂಧೀಜಿಯವರಿಗೂ ಕರ್ನಾಟಕಕ್ಕೂ ಒಂದು ಧೃಡವಾದ ನೆಂಟು ಇತ್ತು. ಅವರ ಚಳುವಳಿಗಳಲ್ಲಿ ಕರ್ನಾಟಕದ ಕಾರ್ಯಕರ್ತರೂ ಸಹ ಸಕ್ರೀಯವಾಗಿ ತಮ್ಮ ನೆರವನ್ನು ಕೊಟ್ಟರು.

‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ.

Back To Top