ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಸಿನೆಮಾ

‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’

‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’
ಹಾಸ್ಯ ಕಲಾವಿದರು ಮೈಸೂರು ರಮಾನಂದರು. ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಇವರು ರಂಗ ಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಬುದ್ಧ ನಟರು.

‘ಹಾಸ್ಯ ನಟರು ಸಿನಿಮಾ ರಂಗದ ಮೈಸೂರು ರಮಾನಂದ’ಗೊರೂರು ಆನಂತರಾಜು’ Read Post »

ಇತರೆ

ಕನ್ನಡ ಸಾಹಿತ್ಯ” aನಡೆದು ಬಂದ ದಾರಿ” ತೋರಿಸಿದಕೀರ್ತಿನಾಥ ಕುರ್ತಕೋಟಿಯವರು-ಎಲ್. ಎಸ್. ಶಾಸ್ತ್ರಿ

ಕನ್ನಡ ಸಾಹಿತ್ಯ” aನಡೆದು ಬಂದ ದಾರಿ” ತೋರಿಸಿದಕೀರ್ತಿನಾಥ ಕುರ್ತಕೋಟಿಯವರು-ಎಲ್. ಎಸ್. ಶಾಸ್ತ್ರಿ
ಕುರ್ತಕೋಟಿಯವರು ಮನೋಹರ ಗ್ರಂಥಮಾಲೆ ಯ ಸಲಹೆಗಾರರಾಗಿ ಉತ್ತಮ ಗುಣಮೌಲ್ಯದ ಗ್ರಂಥಗಳು ಹೊರಬರುವಂತೆ ಮಾಡಿದರು

ಕನ್ನಡ ಸಾಹಿತ್ಯ” aನಡೆದು ಬಂದ ದಾರಿ” ತೋರಿಸಿದಕೀರ್ತಿನಾಥ ಕುರ್ತಕೋಟಿಯವರು-ಎಲ್. ಎಸ್. ಶಾಸ್ತ್ರಿ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!

ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!
ಕಳೆಗಟ್ಟಿದ್ದ ಗಂಡನ ತಲೆ
ಇಂದು ಕೂದಲುದುರಿ
ಪೂರ್ಣ ಬಟಾಬಯಲು.!

ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.! Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಅವರ ಕವಿತೆಬನ್ನಿ ಬಂಗಾರವಾಗದು

ಹನಮಂತ ಸೋಮನಕಟ್ಟಿ ಅವರ ಕವಿತೆಬನ್ನಿ ಬಂಗಾರವಾಗದು
ಬನ್ನಿಯ ಜೊತೆಗಿದ್ದ ಮುಳ್ಳು
ಇರುವ ಬಂಧುತ್ವ ಗಟ್ಟಿಗೊಳಿಸುವುದು
ನೋವುಕೂಡ ನಲಿವನ್ನು ಹಂಚಬಹುದು

ಹನಮಂತ ಸೋಮನಕಟ್ಟಿ ಅವರ ಕವಿತೆಬನ್ನಿ ಬಂಗಾರವಾಗದು Read Post »

ಇತರೆ

ಕಾವ್ಯ ಸಂಗಾತಿ ಸಂಗಾತಿಯ ತಿಂಗಳಕವಿ ಜಯಂತಿ ಸುನೀಲ್ ಕವಿ ಪರಿಚಯ ಜಯಂತಿ ಸುನಿಲ್ ರವರು  ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆಯ ಮಿಟ್ಟಿಗಾನಹಳ್ಳಿ ಗ್ರಾಮದಲ್ಲಿ ನಾರಾಯಣಪ್ಪ ಮತ್ತು ರತ್ನಮ್ಮ ದಂಪತಿಗಳ ಮಗಳಾಗಿ  2-10-1985 ರಂದು ಜನಿಸಿದರು. ಇವರ ಪತ್ನಿ ಸುನಿಲ್, ಮಕ್ಕಳು ಯತಿನ್ ಕಾರ್ತಿಕ್ ಮತ್ತು ರುತ್ವಿಕ್ ವಿಷ್ಣು ಪ್ರಸ್ತುತ ಇವರು ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನೆಲೆಸಿದ್ದು, ಎಂ. ಎ ಪದವೀಧರರಾದ ಇವರು ಪ್ರಸ್ತುತ  ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಸಮೂಹ ಸಂಪನ್ಮೂಲವ್ಯಕ್ತಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. ನಲಿ-ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ  ಶಿಕ್ಷಕರಿಗೆ ವೃತ್ತಿನಿರತ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಇವರ ಕವನ ಸಂಕಲನ ಹಾಗೂ ಗಜಲ್ ಸಂಕಲನಗಳು ಮುದ್ರಣಕ್ಕೆ ಸಿದ್ಧವಾಗುತ್ತಿದ್ದು.. ಇವರು ಮಾಲೂರು, ಕೋಲಾರ, ಬಂಗಾರಪೇಟೆ, ಹೊಸಕೋಟೆ, ತಾಲ್ಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು, ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು  ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ. ಶೖಕ್ಷಣಿಕ ಮತ್ತು ಸಾಹಿತ್ಯಿಕವಾಗಿ ರಾಜ್ಯಮಟ್ಟದ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುತ್ತಾರೆ. ಕಾಡುವ ಕಿ. ರಂ ಹೊಸಕಾವ್ಯ,ಸೇರಿದಂತೆ ಹಲವು ದಿನಪತ್ರಿಕೆ, ಶೖಕ್ಷಣಿಕ ಮ್ಯಾಗಝಿನ್ ಗಳಲ್ಲಿ ಇವರ ಲೇಖನ ಹಾಗೂ  ಕವಿತೆಗಳು ಪ್ರಕಟವಾಗಿವೆ. ಹಾಗೂ ಸಾಹಿತ್ಯದ ಬಹುತ್ವದ ನೆಲೆಗಳು ಸಂಗಾತಿ ಸಾಹಿತ್ಯ ಬ್ಲಾಗ್ ಮುಂತಾದವುಗಳಲ್ಲಿ ಇವರ ಕವಿತೆ, ಗಜಲ್ ಗಳು ಪ್ರಕಟಗೊಂಡು ಸಹೃದಯರ ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ** ಜಯಂತಿ ಸುನೀಲ್ ಅವರ ಕವಿತೆಗಳು ನಗಣ್ಯ ಕುಲದ ಬೇರು ಕದಡಲಿಲ್ಲಾಭುವಿಯಡಿಯಲ್ಲಿ ಜಾತಿ ಧರ್ಮವೆಂಬತಾಯಿ ಬೇರುಗಳ ಹಾವಳಿ..ಅಸಮಾನತೆ, ಅಧರ್ಮವೆಂಬ ತಂತುಬೇರಿನ ತಾಂಡವ..ಪುನಃ ಪುನಃ ಚಿಗುರೊಡೆವ ಅರಾಜಕತೆಯ ಪ್ರಳಯ..!! ಬುದ್ಧ ಬಂದು ಬೆಳಕೆನಿಸಿದಬಸವ ಬಂದು ಶರಣನೆನಿಸಿದಅಂಬೇಡ್ಕರ್ ಬಂದು ಸಮಾನತೆಯ ಸಾರಿದಯಾರೇ ಬಂದರು, ಹೋದರೂ ಬದಲಾಗದ ಜನಕೊನೆಮುಟ್ಟದ ಅಜ್ಞಾನ..!! ಬುದ್ಧನ ಶಾಂತಿಬೀಜ ಬೇರು ಬಿಡಲೇ ಇಲ್ಲಾ..ಬಸವನ ಕಾಯಕ ತತ್ವದ ಬೀಜ ಮಣ್ಣಲ್ಲಿ ಬೆರೆತು ಮೊಳಕೆಯೊಡೆಯಿತು.. ಸಸಿಯಾಗಲಿಲ್ಲಾಬಾ ಬಾ ಸಾಹೇಬ್ನ ಸಮಾನತೆಯ ಬೀಜಮಣ್ಣಲ್ಲಿ ಅಂಕುರವಾಯಿತುಹೆಮ್ಮರವಾಗಲಿಲ್ಲಾ..!! ಪುಸ್ತಕಗಳ ಒಳಗೆ ಹಲವರುಮಹಾತ್ಮರು, ಯೋಗಿಪುರುಷರುದೖವೀ ಸಂಭೂತರುಅವರ ಆದರ್ಶಗಳು ಓದಲಿಕ್ಕಷ್ಟೇ,ಪುಸ್ತಕದಿಂದಾಚೆಗಿನ ಪ್ರಪಂಚಸುಡುವ ಬಿಸಿಲುಬೀಸುವ ಬಿರುಗಾಳಿಎಲ್ಲವೂ ಇಲ್ಲಿ ನಗಣ್ಯ..!! *** ತವರಿನ ಸಿರಿ ಒಂದು ಹಾಲು ಇರುಳಿನಲಿಆಗಸವ ನೋಡುತ್ತೇನೆಹಾಲುಂಡ ತವರು ನೆನಪಾಗಿಮತ್ತೆ ಮತ್ತೆ ಮರಗುತ್ತೇನೆಅಪ್ಪನ ಮಾಸಿದ ಹರಕುಬಟ್ಟೆಅವ್ವನ ಉಪವಾಸಗಳ ಖಾಲಿಹೊಟ್ಟೆಎಲ್ಲವೂ ನೆನಪಾಗುತ್ತದೆಕಣ್ಣಲಿ ಹನಿಯೊಂದು ಜಿನುಗುತ್ತದೆ.!! ಅಪ್ಪನ ಹರಿತವಾದ ಒಳನೋಟಅವ್ವನ ತುಳುಕುವ ಆತ್ಮವಿಶ್ವಾಸದ ಪಾಠಕೂಡಿಟ್ಟ ನಾಳೆಗಳಿಗೆ ಬಚ್ಚಿಟ್ಟ ಭವಿಷ್ಯದ ಗುಟ್ಟುಗಳುನೇತುಬಿದ್ದ ಹಕ್ಕಿಗಳಂತೆ ಹೆತ್ತವರ ಪಾಡುಗಳುಎಲ್ಲವೂ ನೆನಪಾಗುತ್ತದೆಗುರುತುಗಳ ಹೊಗೆಯಾಡುತ್ತದೆ..!! ಮುರಿದ ಪೆನ್ನಲಿ ಬರೆದಿದ್ದುನಿದ್ದೆಯಲು ಅಮ್ಮನ ಕೖತುತ್ತು ಸವೆದದ್ದುಕಷ್ಟಗಳ ನಿಗಿ ನಿಗಿ ಕೆಂಡ ತುಳಿದದ್ದುಕನಸುಗಳ ಸೆರಗೊದ್ದಿ ಮಲಗಿದ್ದುಎಲ್ಲವೂ ನೆನಪಾಗುತ್ತದೆನಿನ್ನೆಗಳು ಮರುಕಳಿಸುತ್ತದೆ..!! ಒಮ್ಮೆ ಹುಲ್ಲುಹಾಸಿನ ಮೇಲೆಕಣ್ಣುಚ್ಚಿ ಕುಳಿತೆದೀಪದಡಿ ಕುಳಿತ ಅಪ್ಪ ನೆನಪಾದಅವನ ಸುತ್ತಲೆಲ್ಲಾ ಕತ್ತಲುಬೆಳಕನ್ನು ನಮಗೆ ಬಿಟ್ಟುಹೋದಮತ್ತೊಮ್ಮೆ ಕಣ್ಮುಚ್ಚಿ ಕುಳಿತೆಅವ್ವ ನೆನಪಾಗಿ ನನ್ನೂರಿನ ಬೆಟ್ಟಗಳಂತೆ ಕಂಡಳುನಾನೀಗ ಶಿಲೆಯಾಗಲೂ ಅಣಿಯಾಗುತ್ತೇನೆ..!! ತವರೆಂದರೆ ನಾಲ್ಕುಗೋಡೆ ಒಂದು ಬಾಗಿಲಿನ ಕೋಣೆಯಲ್ಲಾ..ಅಲ್ಲೇನೋ ತುಡಿತವಿದೆಭಾಷೆಗೂ ನಿಲುಕದ ಮಿಡಿತವಿದೆಅವ್ವನ ಕೂಗಿದೆಅಪ್ಪನ ನೋವಿದೆಬೀಜ-ವೃಕ್ಷಗಳ ಪಳೆಯುಳಿಕೆ ಅಲ್ಲಿಯೇ ಅಡಗಿದೆತವರಲ್ಲಿ ಯಾರೂ ಕದಿಯದ ಸಿರಿಯಿದೆ..!! *** ನಿನ್ನದೇ ನೆರಳ ಹಿಡಿದು ಭ್ರಮೆಯ ಮೋಡದಿ ಕೂತುನನಸಾಗದ ಕನಸ ಜೋಪಾನ ಮಾಡುತ್ತಾ, ಮಾಡುತ್ತಾಅದೆಷ್ಟು ಹಗಲುಗಳು ದಣಿದವುನನ್ನ ಕನಸಿನಲ್ಲಿ ನಿನ್ನ ಮುಖನನ್ನದೇ ಉಸಿರಿನಲ್ಲಿ ಈಜುತ್ತಾ ಈಜುತ್ತಾ…ಹೆಸರಿಲ್ಲದ ಊರ ದಡ ಮುಟ್ಟುತ್ತದೆನನ್ನೊಳಗೆ ಹೊರಳಿ ನರಳಿಸುವ ನೋವು..ಆ ಬೆಟ್ಟದ ತುದಿಯ ಬಿಂದಿಗೆಯ ಹೂಎರಡೂ ಒಂದೇ ಇರಬೇಕುಸುಲಭವಾಗಿ ಯಾರಿಗೂ ದಕ್ಕುವುದಿಲ್ಲಾ..!! ಒಡೆದ ಕನ್ನಡಿಯಲ್ಲಿಹಾರಾಡುವ ಗಾಜಿನ ಚೂರುಗಳುಮಳೆಮೋಡವನ್ನು ಹಿಂಬಾಲಿಸುವ ಮಿಂಚುಗಳು ನಿನ್ನಲ್ಲಿಗೆ ಹಾರಿ ಬರಬಹುದು..ಹಿಂತಿರುಗಿ ನೋಡಬೇಡನಿನ್ನ ನಾಲಿಗೆಯಲಿ ನನ್ನೆಸರ ಜಪಿಸಲುಬೇಡಕದ್ದು ಆಲಿಸಿದರೆ…?ಗೋರಿಯ ಮೇಲೆ ಸೂರ್ಯ ಮೂಡುವುದಿಲ್ಲಾ..ಗುಲ್ಮೊಹರ ಅರಳುವುದಿಲ್ಲಾ..!! ಈ ಮೋಹಾನುರಾಗದ ಹಾಳೆಯ ಮೇಲೆಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆಪ್ರತಿಪದವೂ ನಾಟಕವೆಂದು ಇರುಳಿಗೆ ತಿಳಿಯುತ್ತಿಲ್ಲಾ..ಹಕ್ಕಿಯನ್ನು ಒಪ್ಪಿಕೊಳ್ಳದ ಆಗಸಕಲ್ಲುಮಳೆ ಸುರಿಸುವುದು ನಿಲ್ಲಿಸುತ್ತಿಲ್ಲಾ..!! ನೀನೀಗ ಕನಸಿಗೆ ಎದುರಾಗಬೇಡಕಣ್ಣಿಗೂ ಕಾಣದಂತೆ ನನ್ನೊಳಗೆ ಪುನಃ ಹೂ ಅರಳಬಹುದುಆಕಾಶಕ್ಕೆ ಕೖ ಚಾಚಿ ನಿಂತ ಭೂಮಿಹಡಗನ್ನು ಅಪ್ಪಿಕೊಳ್ಳುವ ಸಾಗರಅವುಗಳ ಛಾಯೆಯಲಿ ನಮ್ಮ ಕಥೆಗಾಳಿ ಪದರದಲಿ ತೇಲುವ ನಿನ್ನ ನೆರಳು…ಮತ್ತೆ ನನ್ನ ಕಾಡಬಹುದುಇಂಚಿಂಚೇ ಕೊಲ್ಲಬಹುದು..!! ಜಯಂತಿ ಸುನಿಲ್ *

Read Post »

You cannot copy content of this page

Scroll to Top