Category: ಕಥಾಗುಚ್ಛ

ಕಥಾಗುಚ್ಛ

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, […]

ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ […]

ಕಾರ್ಮಿಕ ದಿನದ ವಿಶೇಷ-ಕಥೆ

ಕಾರ್ಮಿಕ ದಿನದ ವಿಶೇಷ-ಕಥೆ ತಿಥಿ ಟಿ. ಎಸ್.‌ ಶ್ರವಣ ಕುಮಾರಿ. ತಿಥಿ “ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್‌ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್‌ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ […]

ಕಾರ್ಮಿಕ ದಿನದ ವಿಶೇಷ-ಕಥೆ

ಕಥೆ ಕರ್ಮ ಮತ್ತು ಕಾರ್ಮಿಕ!  ಪೂರ್ಣಿಮಾ ಮಾಳಗಿಮನಿ ಕರ್ಮ ಮತ್ತು ಕಾರ್ಮಿಕ!  ಎಲ್ಲರ ಮನೆಯ ದೋಸೆಯೂ ತೂತೇ, ಹಾಗಂತ ತೂತಿಲ್ಲದ ದೋಸೆಗಾಗಿ ಹಾತೊರೆಯುವುದನ್ನು ರಾಗಿಣಿ ಬಿಟ್ಟಿರಲಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಜಗಳಗಳಿಗೆ, ಮೂವತ್ತೈದು ವರ್ಷಕ್ಕೇ ಜೀವನವೇ ಸಾಕಾಗಿ ಹೋಗಿದೆ, ಎಂದು ಕೈ ಚೆಲ್ಲಿ ಕುಳಿತ ಹೆಂಡತಿ ರಾಗಿಣಿಯನ್ನು ಮ್ಯಾರೇಜ್ ಕೌನ್ಸಲರ ಬಳಿ ಕರೆದೊಯ್ಯುವ ವಿಚಾರ ಮಾಡಿದ್ದು ಪ್ರಶಾಂತನೇ. ಮಕ್ಕಳೂ ಆಗಿಲ್ಲವೆಂದ ಮೇಲೆ ನಿಮ್ಮ ಹೆಂಡತಿ ಟೈಮ್ ಪಾಸ್ ಮಾಡುವುದಾದರೂ ಹೇಗೆ ಎಂದು  ದಬಾಯಿಸಿ, ಕೌನ್ಸಲರ ಒಂದು ನಾಯಿ ಮರಿ […]

ಕಥಾಯಾನ

ಈಗೊಂದು ಉತ್ತರ ಸಿಗದಾ ಪ್ರಶ್ನೆ ಸುಮಂತ್ ಎಸ್ ಅದೊಂದು ಸಂಜೆ, ನನ್ನ ಕೈಯಲ್ಲಿ ಆಕೆಯ ಕೈ ಇತ್ತು. ಕಣ್ ಮಿಟುಕಿಸದೆ, ಚಂದ್ರ ನಕ್ಷತ್ರಗಳನು ಎಣಿಸುವ ಹಾಗೆ ಆಕೆ ನನ್ನನ್ನೇ ನೋಡುತ್ತಿದ್ದಳು, ನಾನು ಆಕೆಯನ್ನು.ಸೂರ್ಯಾಸ್ತಮಾನದ  ಮೋಡಗಳಂತಾಗಿದ್ದ ಕಣ್ಣುಗಳು ನನಗೆ ಏನನ್ನೊ ಹೆಳಬೇಕೆಂದು ಚಟಪಡಿಸುತಿದ್ದನ್ನು ಕಂಡೆ. ಇದೇನು ಮೊದಲಬಾರಿಯಲ್ಲ, ಅದೆಷ್ಟೋ ಬಾರಿ ಹೀಗೆ ಏನನ್ನೊ ಹೇಳಬೇಕೆಂದು ಪ್ರಯತ್ನಿಸಿ ಸೂತಿದ್ದು ಗೂತ್ತಿದೆ ನನಗೆ,  ಅದೇ, ಅನಿಶ್ಚಿತತೆ, ನಾಚಿಕೆ,ಭಯ,ಗೂಂದಲ ಇಂದಿಗೂ ಅವಳ ಕಣ್ಣಾ ಪರದೆ ಹಿಂದಿನಿಂದ ಇಣುಕುತ್ತಲೇಯಿತ್ತು. ಎಲ್ಲಾ ನದಿಗಳು ಸೇರಿದರೂ ಒಂದೇತರನಾಗಿರುವ […]

ಕಥಾಯಾನ

ಮಕ್ಕಳ ಕಥೆ ಗರುಡನ ಆದರ್ಶ ರಾಜ್ಯ ಮಲಿಕಜಾನ ಶೇಖ     ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ […]

ಕಥಾಯಾನ

ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ   ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ  ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ  ಮರೆಯಲಾಗದ ಮೃದುಲ ಮುಖವದು.  ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ  ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ  ಸುಮಧುರ ಸಮಾರಾಧನೆ. ಅವಳನ್ನು  ಅದೆಷ್ಟು ಬಾರಿ ಭೆಟ್ಟಿ ಮಾಡಿ,  ಅವಳೊಂದಿಗೆ ಮಾತಾಡಿ, ಜೀವಹಗುರ  ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು  ಮುಗಿಯುವ ಮುಜೇತಿ… ಅವಳ ನನ್ನ  ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ  ಕುತೂಹಲ ನನಗೆ. ಆದರೆ ಅವಳು  ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ  ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. […]

ಕಥಾಯಾನ

ಬಣ್ಣಾತೀತ ಅಶ್ವಥ್ ಅವತ್ತೊಂದು ದಿನ ಭಟ್ರಿಗೆ ಶ್ಯಾವಿಗೆ ಪಾಯಸ ಮಾಡುವ ಮನಸ್ಸಾಯಿತು. ಆಹಾ, ಸಿಹಿ… ಎಂಥಾ ಆಲೋಚನೆ, ರುಚಿರುಚಿಯಾದ ಶ್ಯಾವಿಗೆ ಪಾಯಸ, ಮನೆಯೆಲ್ಲ ಘಮಘಮ ಎಂದುಕೊಳ್ಳುತ್ತಲೇ ಪದಾರ್ಥಗಳ ಪಟ್ಟಿ ಮಾಡಿಕೊಳ್ಳುತ್ತಿರುವಾಗ…. ಬೆಲ್ಲ? ಸಕ್ಕರೆ? ಸದ್ಯಕ್ಕೆ ಸಿಗುವಂಥಾದ್ದು ಯಾವುದು? ಅಗ್ಗದ ಬೆಲೆಯಲ್ಲಿ ಸರಳವಾಗಿ ಸಿಗುವಂಥಾದ್ದು ಯಾವುದು? ಅನ್ನುವ ಯೋಚನೆ ಕೊರೆಯತೊಡಗಿತು. ಬೆಲ್ಲವಾದರೆ ಶ್ಯಾವಿಗೆಯ ಮಹತ್ತೇ ಹೊರಟುಹೋಗಿಬಿಡುತ್ತೆ. ಸಕ್ಕರೆಯಾದರೆ ಬಣ್ಣ ಅಷ್ಟಿಲ್ಲದ್ದರಿಂದ ಶ್ಯಾವಿಗೆ ನಳನಳಿಸುತ್ತಾ ರುಚಿಯ ಜೊತೆಗೆ ನೋಟವೂ ಅಂದ… ಹಾಗಾಗಿ ಸಕ್ಕರೆ ಬಣ್ಣಾತೀತ ಅಂದುಕೊಳ್ಳುತ್ತಿರುವಾಗ, ಇಲ್ಲೊಂದು ಕತೆಯೇ ಉಂಟಲ್ಲ […]

ಕಥಾಯಾನ

ಕು.ಸ.ಮದುಸೂದನರವರ ಕಥೆ ಲಾರಿಯಿಂದ ಲಾರಿಗೆ ಯನ್ನು ಪ್ರತಿಲಿಪಿಯವರುಆಡೀಯೊ ರೂಪದಲ್ಲಿ ಹೊರತಂದಿದ್ದಾರೆ ನೀವೂ ಈ ಕಥೆ ಕೇಳಿ ಚಿತ್ರದ ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಕಥೆ ಕೇಳಿ https://kannada.pratilipi.com/audio/ಲಾರಿಯಿಂದ-ಲಾರಿಗೆ-pdrylv2au9op?utm_campaign=Shared&utm_source=Link ಲಾರಿಯಿಂದ ಲಾರಿಗೆ ಕಥೆ

ಮಹಿಳಾದಿನದ ವಿಶೇಷ

ಮುಖಾಮುಖಿ ಟಿ.ಎಸ್.ಶ್ರವಣಕುಮಾರಿ ಮುಖಾಮುಖಿ ಸುಜಾತ ಊರಿಗೆ ಬಂದು ನಾಲ್ಕು ದಿನವಾಗಿತ್ತಷ್ಟೆ.  ಅವಳ ಗಂಡನಿಗೆ ಕಲ್ಕತ್ತೆಗೆ ವರ್ಗವಾಗಿ ಹೋದಮೇಲೆ ಇದೇ ಮೊದಲಸಲ ತವರಮನೆಗೆ ಬಂದಿರುವುದು. ಬೆಂಗಳೂರಿನಲ್ಲಿದ್ದಾಗ ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ ಬಂದು ಹೋಗುತ್ತಿದ್ದವಳಿಗೆ ಈಗೆರಡು ವರ್ಷದಿಂದ ಬರಲು ಆಗಿರಲಿಲ್ಲ. ಮಕ್ಕಳೂ ಅಮ್ಮ ವಾಪಸ್ಸು ಹೋಗುವುದಕ್ಕೆ ವಾರದ ಮುಂಚೆ ಬಂದು ಸೇರಿಕೊಳ್ಳುತ್ತೇವೆ, ಅಲ್ಲಿಯವರೆಗೆ ಏನೇನೋ ಕ್ಲಾಸುಗಳಿವೆ ಎಂದು ಹೇಳಿ ಇವಳೊಂದಿಗೆ ಬರುವುದನ್ನು ತಪ್ಪಿಸಿಕೊಂಡಿದ್ದರು. ದೊಡ್ಡ ಹುಡುಗರಾದ್ದರಿಂದ ಇವಳೂ ಒತ್ತಾಯಿಸಲು ಹೋಗಿರಲಿಲ್ಲ. ಎಷ್ಟೇ ಫೋನಲ್ಲಿ ಅಮ್ಮನ ಹತ್ತಿರ ಮಾತಾಡುತ್ತಿದ್ದರೂ ಎದುರೆದುರು ಕೂತು […]

Back To Top