Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಬಂಧಿ ಎನಿಸಿಲ್ಲ ಬಂಧನದಲ್ಲಿ ಜಿ.ಲೋಕೇಶ್ ನಿನ್ನ ನೆನಪುಗಳಲ್ಲಿ ಬಂಧಿಯಾದ ನನಗೆ ಗೃಹ ಬಂಧನವು ಕಷ್ಟವೇನು ಅನಿಸುತ್ತಿಲ್ಲ ಏಳಿ, ಮಲಗಲು,.ನಾಲಿಗೆ ಎದೆಯ ಹೆಸರನ್ನು ಸಾರಿ ಸಾರಿ ಹೇಳುವಾಗ ಬಂಧನವು ಬಂಧಿ ಎನಿಸಿಲ್ಲ ಪ್ರತಿ ಮೂಲೆ ಮೂಲೆಯಲ್ಲಿ ನಿನ್ನೂರಿನ ನೆನಪುಗಳು ಜೊತೆಯಿರುವಾಗ ಬಂಧನವು ಬಂಧಿ ಎನಿಸಿಲ್ಲ ***** ಕೊಡಿಸಿದ ಅಷ್ಟು ವಸ್ತುಗಳು ಹೋದ ಪ್ರತಿ ಜಾಗಗಳಿಗೆ ಕರೆದೊಯ್ಯುತಿರುವಾಗ ಬಂಧನವು ಬಂಧಿ ಎನಿಸಿಲ್ಲ ಎಷ್ಟೋ ಭಾವಗಳನ್ನು ಪದಗಳಲ್ಲಿ ಕವಿತೆಯಾಗಲು ಪೋಣಿಸುತಿರುವಾಗ ಬಂಧನವು ಬಂಧಿ ಎನಿಸಿಲ್ಲ ****

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ. ಸರಿರಾತ್ರಿಯ ನಿದಿರೆಯನ್ನು ಕಸಿದು ಮನವು ಕೇಳುತ್ತದೆ ನಿನ್ನನ್ನೆ ಒತ್ತಿದರು ಮುಚ್ಚದ ರೆಪ್ಪೆಯೊಳಗೆ ಕಂಗಳು ಅರಸುತ್ತವೆ ನಿನ್ನನ್ನೆ ಸಂತೆಯೊಳಗಿದ್ದರು ಏಕಾಂತದ ಭಾವ ಕವಿದು ವಿರಹ ಕಾಡಿದೆ ಬಂದಪ್ಪಿ ಬಿಡು ದಾಹ ತೀರುವಷ್ಟು ಬೆಳಗೊಳಗೆ ಬೇಡುತ್ತದೆ ನಿನ್ನನ್ನೆ ಹೃದಯದೊಳಗೆ ಅಡಗಿಸಿಟ್ಟ ಒಲವು ಹೊರಗಿಣುಕಿ ನೋಡುತ್ತಿದೆ ಎಲ್ಲಾದರು ಮಿಡಿಯಬಹುದೇ ಅಂತರಂಗ ತುಡಿತ ಕಾಯುತ್ತದೆ ನಿನ್ನನ್ನೆ ಸೆರೆಮನೆಯ ಬದುಕು ಸ್ವಚ್ಛಂದ ಹಾರಾಡಲು ಹಾತೊರೆಯುತ್ತಿದೆ ವಂಚನೆಯಿಂದ ನ್ಯಾಯ ಬಯಸಿ ನಂಬಿಕೆಯಲ್ಲಿ ಹಂಬಲಿಸುತ್ತದೆ ನಿನ್ನನ್ನೆ ಪ್ರತಿ ಇರುಳು ಹೊಂಗನಸಿನೊಡನೆ ಹತಾಶೆಗೊಳ್ಳುತ್ತಿವೆ […]

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನನ್ನೆದೆಯ ಒಳಗ ನೋವು ತಂದಿರುವೆ ಹೇಳಿ ಹೋಗುಕಾರಣ ಸತ್ತ ಕನಸುಗಳ ಹೊತ್ತು ಹರದಾರಿ ನಡೆದಿರುವೆ ಹೇಳಿಹೋಗುಕಾರಣ ಜೀವ ಪ್ರೀತಿಯ ಒಡಲೊಳಗೆ ತುಂಬಿಕೊಂಡಿದ್ದೆನೆ ಗಂಜಿಯಾದರು ಕುಡಿದು ಬದುಕಿಸುವೆ ಹೇಳಿ ಹೋಗುಕಾರಣ ಸಂದುಕದಲ್ಲಿದ್ದ ಒಂಕಿ ಡಾಬು ಜೂಲ್ಪಿಹೂ ತೋಳ್ ಬಂದಿ ತೊಡಿಸಿರುವೆ ರೇಶ್ಮಿ ಇಳಕಲ್ಲ ಜರತಾರಿ ಸಿರೆ ಉಡಿಸಿರುವೆ ಹೇಳಿ ಹೋಗುಕಾರಣ ನನ್ನೊಂದಿಗೆ ಒಮ್ಮೆಯೂ ಮಾತನಾಡಲಿಲ್ಲ ಮೌನ ಮುರಿದು ನಿನ್ನೊಳಗೆ ಎನು ತುಂಬಿಕೊಂಡಿರುವೆ ಹೇಳಿ ಹೋಗುಕಾರಣ ಅನುಮಾನಗಳಿದ್ದರೆ ಬಿಡು ಅಗ್ನಿ ಪರಿಕ್ಷೆಯ ನೇಪ ಮಾತ್ರ ಬೇಡ […]

ಕಾವ್ಯಯಾನ

ಪ್ರಕೃತಿ ಆಚರಿಸುತಿದೆ ಹಬ್ಬ ಶಾಲಿನಿ ಆರ್. ಮಾನವನ ತಗ್ಗು ದಿಬ್ಬಗಳ ಲೀಲೆಗೆ, ನಲಿದಿದೆ  ಪ್ರಕೃತಿ ಈ ಸೋಜಿಗೆ, ಹಲವು ಜೀವನವ ಕಸಿದ ಕರೋನಾ, ಪ್ರಕೃತಿಗೆ ಇದುವೇ ವರವಾಯಿತೇನಾ? ಮನುಜನ ವಿಪರೀತಗಳನ್ನೆಲ್ಲ ಅಳಿಸಿ ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ, ಹಾಡುವ ಹಕ್ಕಿಗಳೆಲ್ಲ ಹಾರುತಿವೆ ಮನಸಾರೆ ಖುಷಿಯಾಗಿ, ನಭದ ನೀಲಿಯಲಿ ನೀಲವಾಗಿ, ಬೀಸುವ ತಂಪೆಲರಿಗು ಬಂದಿದೆ ಅಭಿಮಾನ, ನಾ ನಾಗಿಹೆನೆಂಬ ಸಮ್ಮಾನ, ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ, ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ ಸಡಗರಿಸುತಿಹದಂತೆ, ಪ್ರಾಣಿ […]

ಕಾವ್ಯಯಾನ

ಕನಸು ಶ್ವೇತಾ ಮಂಡ್ಯ ದಿಟ್ಟಿಸುತ ನೀ ನನ್ನ ತುಸುವೇ ಒತ್ತರಿಸಿ ಬಂಧಿಸಿ ಬಾಹುವಿನೊಳು … ನಿನ್ನೊಲವಿನ ಗಾಳಿಯೊಳು ಸುಳಿದಾಡಿದ ಮುಂಗುರಳ ಮೆಲ್ಲನೆ ಸರಿಸಿ…. ರವಾನಿಸಿ ಎನ್ನೆದೆಗೆ ನಿನ್ನೊಲುಮೆ ನಿಂತ ನೆಲವನೆ ಮರೆಸಿ ಹರಸಿ ಅನೂಹ್ಯ ಪ್ರೀತಿ… ಭಾವದ ಮಳೆಯಲಿ ನೆನೆ ನೆನಸಿ ಅವಿಚ್ಛಿನ್ನ ಅನುಭಾವದ ಸಾಂಗತ್ಯ ಕನಸಲಷ್ಟೇ ನಿನ್ನೊಂದಿಗೆ ಒಂದಾಗಿಸಿದೆ. ******

ಕಾವ್ಯಯಾನ

ಗಝಲ್ ಕೆ.ಮಹದೇವನಾಯಕ ನವಿರಾಗಿ ಬಾ ಬಾ ನನ್ನುಸಿರ ಬಾರಕ್ಕೆ ಜೀವ ರಸ ತುಂಬಿ ನಗು ನಗುತ ಬಾಡಿರುವ ಹೃದಯಕ್ಕೆ ಭಾವ ತುಂಬು ದಿಕ್ಕುತಪ್ಪದಂತೆ ಮೆಲ್ಲನೆ ನಗುತ ಕಮರಿದ ಕನಸಿಗೆ ನೆನಪುಗಳ ಸೂರು ಮುಗಿಲಗಲ ಬೆಳಕಿನ ಪಥದಂತೆ ಬಾ ಕಲ್ಪನೆಗಳ ಸ್ವಾರ್ಥದ ದುಃಖ ಸವೆಸಿ ಜೊತೆ ಜೊತೆಯಾಗು ನಗುತ ಮಲೆತು ಮರೆಯಾದ ನೊರಜು ನೆನಪ ನೆಲಬಾನಿನಂಚಿನಲಿ ಹೂತುಬಿಡು ಒಡಲಾಳದ ಸಾಗರದ ಅಲೆಯಲ್ಲಿ ತೂಗಿ ಗಗನ ಚುಂಬನದಂತೆ ನಗುತ ಕಾನನದ ಸೊಬಗು ನಿನ್ನ ಸರಸವಿಲ್ಲದೆ ಬೀಕೋ ಎಂದು ಗಾಳಿ ತೂರಿದೆ […]

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಬಿಂದುವೊಂದು ಸರಳ ರೇಖೆಯಮುಂದೆ ಸಾಗುತ್ತಿದೆ ಎಂದರೇನರ್ಥ ಲೋಕದೊಳಗೆ ಸಕಲವೂ ಸನ್ಮಾರ್ಗ ನೀಗುತ್ತಿದೆ ಎಂದರೇನರ್ಥ ಲೋಭ,ಮೋಹಾದಿಗಳೊಳಗೆ ಬಂಧಿಯಾಗುವೆವು ಈ ಭವದೊಳಗೆ ಬಾಳಿನರ್ಥವ ಸಾರಿದವನ ತ್ಯಾಗವೇ ಸಂಶಯವಾಗುತ್ತಿದೆ ಎಂದರೇನರ್ಥ ಲೋಕ ಬಿಡಲೂ ಬೇಕು, ಅಳಲೂ ಬೇಕು ಅಂತರಂಗವು ಕದಡಿ,ಅವನೆಲ್ಲಿ ಮುಕ್ತ ಮೆಚ್ಚಿ ಆಡಿದ,ಅಚ್ಚೊತ್ತಿದ ಅಭಿನಯವೇ ಮರೆಯುತ್ತಿದೆ ಎಂದರೇನರ್ಥ. ಒಬ್ಬನೇ ನಿರ್ಗಮಿಸುವಾಗ ಯಾರೂ ಹತ್ತಿರವಿರೆ,ಇಲ್ಲದಿರೆ ಏನು ಅಂತರ? ಮುಗಿಯಲಾರದ್ದು,ಮುಗಿಯಾಬಾರದ್ದು,ಮುಗಿದಂತೆ ತೋರುತ್ತಿದೆ ಎಂದರೇನರ್ಥ ಅಗಲಿಕೆಯ ಸಂಕಟವ ಹೆಚ್ಚಿಸುವುದು ಜೊತೆಯಾದ ಬಂಧ ಏಕಾಂಗಿ ಬಯಲಿನಲಿ ಮರವೊಂದು ರೋದಿಸುತ್ತಿದೆ ಎಂದರೇನರ್ಥ . […]

ಕಾವ್ಯಯಾನ

ಗಝಲ್ ಡಾ.ಸುಜಾತ ಲಕ್ಷ್ಮೀಪುರ. ಕತ್ತಲೆ ಗರ್ಭ ಸೀಳಿ ಅರಿವಿನ ಬೆಳಕು ತಂದ ಈ ಭೀಮ ಅಸ್ಪರ್ಶ ಕೊಳಕು ತೊಳೆಯುವ ಜಲವಾಗಿ ಬಂದ ಈ ಭೀಮ ಬಡತನ ಹಸಿವು ನಮ್ಮ‌ನ್ನು ರೂಪಿಸುತ್ತದೆಯಂತೆ ಗುಡಿಸಿಲಿನಿಂದಲೇ ಅಸಮಾನತೆಯಲ್ಲೇ ಮೂಡಿದ ಈ ಭೀಮ ಕೊರೆತೆಯಲ್ಲೆ ಕೊರಗಿ ಕೂತವರು ಏನು ಸಾಧಿಸುವರು ಅಸಮಾನತೆ ವಿಷಗಾಳಿಯಲಿ ಸಮಾನತೆಯ ಉತ್ತಿ ಬೆಳೆದ ಈ ಭೀಮಾ ಜ್ಣಾನವೊಂದೆ‌ ಮುಕ್ತಿಗೆ ಮಾರ್ಗ ವೆಂಬುದು ಸತ್ಯವಲ್ಲವೆ ಅಜ್ಞಾನದ ಆಲಯದಿ ಬೆಳಕಿನ ಬಯಲು ಸುರಿದ ಈ ಭೀಮಾ ನನ್ನ ಜನ ನನ್ನ ನಾಡು […]

ಕಾವ್ಯಯಾನ

ಹೌದು ; ನಿನಗಾಗಿ… ನಾಗರಾಜ ಹರಪನಹಳ್ಳಿ ನೀ ಮನೆಯೊಳಗೆ ಹೋದ ಮೇಲೆ ನಾವಾಡಿದ ಮಾತುಗಳನ್ನೇ ನೆನಪಿಸಿಕೊಳ್ಳುತ್ತಿದ್ದೆ…. ಎಷ್ಟೊಂದು ಕನಸುಗಳು.. ನೂರಾರು ಬಯಕೆಗಳು ಸಾವಿರಾರು ರೆಕ್ಕೆ ಕಟ್ಟಿಕೊಂಡು ಹಾಡುವ, ಹಾರುವ ಮನಸುಗಳು ಒಂದೊಂದು ಮಾತಿಗೂ ಸಹಿ ಸವಿ ನೆನಪು ಪ್ರತಿಮಾತು ಒಂದೊಂದು ವರ್ಷ ನಮ್ಮ ಆಯಸ್ಸು ಹೆಚ್ಚಿ ಅದೇ ಕಾಲಕ್ಕೆ ನಾವು ಯುವ ಜೋಡಿಗಳಾಗುವ ಹುಮ್ಮಸ್ಸು … ಬರೆಯುವ ,ಓದುವ ಹೆಬ್ಬಯಕೆ ಜೊತೆಗೊಂದಿಷ್ಟು ಪ್ರೇಮ ಬದುಕಿಗೆ ಉಸಿರಿಗೂ ಈಗ ಕನಸಿನ ಕಾಲ ಬಂಧನವೂ ಬಿಡುಗಡೆಯೂ ಏಕಕಾಲಕ್ಕೆ ಇನ್ನೂ ಕಾಯುವುದೋ […]

ಕಾವ್ಯಯಾನ

ಸಾಹಿತ್ಯ ಶ್ವೇತಾ ಮಂಡ್ಯ ಸಾಹಿತ್ಯ, ಒಳಿತ ಉಣಿಸಿ ಕೆಡುಕ ಅಳಿಸಿ ಮನವ ಅರಳಿಸಿ ಸರ್ವರ ಹಿತ ಬಯಸುವ ಸಾಹಿತ್ಯ; ಅಂತ:ಕರಣವ ತಟ್ಟಿ ಮಾನವೀಯತೆಯ ಮುಟ್ಟಿ ಕರ್ತವ್ಯಪ್ರಜ್ಞೆಯ ಎಚ್ಚರಿಸಿ ಬದುಕಿನುದ್ದ ದಾರಿದೀಪವಾಗುವ ಸಾಹಿತ್ಯ, ಸರ್ವಜನ ಸರ್ವ ಭಾವಗಳ ಶುದ್ದೀಕರಿಸಿ ಮನುಕುಲದ ಕಲ್ಮಶಗಳ ತೊಳೆಯುವ ಸಾಹಿತ್ಯ; ನಿನ್ನ ಮೆಚ್ಚಿ ನಿನ್ನಪ್ಪಿ ಕೊಂಡವರೆಲ್ಲಾ ನಡೆಯುತ್ತಿದ್ದರೆ ನಿನ್ನಾಶಯದಂತೆಯೇ ಬದುಕುತ್ತಿದ್ದರೆ ತಾವು ಬರೆಯುವಂತೆ…..!!! ********

Back To Top