Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ […]

ಕಾವ್ಯಯಾನ

ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು […]

ಮಾತೃ ದೇವೋಭವ

ಮಾತೃ ದೇವೋಭವ ಸಂಮ್ಮೋದ ವಾಡಪ್ಪಿ ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು ಹಸಿರ ಚಿಗುರೊಡೆದು ಮೇಲೇಳಲೆಂದು ಬಸಿರ ಭೂತಾಯಿಯ ಒಡಲ ಹೊರಬಂದು ಉಸಿರ ಬೆಸೆದು ನಸು ನಗುವ ಬೀರಲೆಂದು ಇದು ಜನುಮ ಅಗೋಚರ ಶಕ್ತಿಯಿಂದ ಅಳುವ ದ್ವನಿಯ ಕೇಳುವ ತವಕದಿಂದ ಹುಟ್ಟು ನವಮಾಸದ ತಪದ ದಾರಿಯಿಂದ ಪಯಣ ಆ ಮಾತೆಯ ಲಾಲಿ ಹಾಡಿನಿಂದ ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ ಸುಪಥವ ಹಿಡಿದು ನಡೆಸಲು ಹರಸಾಹಸ ಯಶೋದೆಯ ಪರಿಶ್ರಮವೇ ಅವನ ವಿಕಾಸ ಭವದ […]

ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು. ಪ್ರಮೀಳಾ ಎಸ್.ಪಿ. ಕರೊನಾಕ್ಕೆ ಕಾರಣವಂತೆ ಶಾಂಗ್ಲಿ ಮತ್ತವಳ ಬಾವಲಿ ನರಳುತ್ತಿರೋದು ಮಾತ್ರ ಇಟಲಿಯ ಇಲಿ. ಸತ್ತರಂತೆ ಅಮೆರಿಕಾದಲ್ಲಿ ಅಷ್ಟೊಂದು ಜನ. “ಹೊಯ್” ! ಟೀವಿಯಲ್ಲಿ ಮಾರಾಯ… ಎಂದು ಅಡ್ಡಾಡಿದರು ನಮ್ಮೂರ ಜನ . ಸುರರೇ ಕುಡಿಯುತ್ತಿದ್ದರು ಎಂಬ ನೆಪ ಕುಡುಕರದ್ದು ಕೇಳದಿದ್ದರೂ ನೀಡಿದವರು ಹೇಳಲಾರದ ನೆಪ ‘ಗಲ್ಲ’ದ್ದು. ಕಂಠ ಪೂರ್ತಿ ಕುಡಿದು ಅಪ್ಪ ಅಮ್ಮನಾದರು ಬೆತ್ತಲು ಕಣ್ಣು ಬಿಟ್ಟ ಮಗುವಿನ ಮನದಲ್ಲೀಗ ಕತ್ತಲು. ಕೇಳುವರೆಲ್ಲ ತೆರೆಯಲೆಂದು ಅವರವರ ಆದಾಯದ ಬಾಗಿಲು ತೆರೆಯಿರಿ ಎಂದು ಕೇಳುವುದೇ […]

ಕಾವ್ಯಯಾನ

ಹೆಣ್ಣಿನಂತರಾಳ ವಾಣಿ ಮಹೇಶ್ ಮಮತೆಯ ಮಡಿಲಲ್ಲಿ ಮಮತೆಯ ಕಾಣದೆ ಮರುಗುವುದ ಕಲಿತೆ ಮರುಳ ಮನಸು ಅರಿಯದೆಲೆ ಆಸೆಗಳು ಕಂಗಳ ತುಂಬಿವೆ / ಕೊರಳುಬ್ಬಿ ಕಂಗಳ ಕಂಬನಿ ಜಾರಲು.. ಹೆದರಿ ಅಲ್ಲೇ ಅವಿತು ತನ್ನಿರವ ಸೂಚಿಸಿದೆ / ಪ್ರೇಮಮಯಿ ಮಾತೆ ತನ್ನಿರವ ಮರೆತಳು ನಾ ಬರೆದ ರಾಗಕೆ ಸ್ವರವೇ ಇಲ್ಲವಾಗಿಸಿಹಳು ತಂತಿ ಕಡಿದು ಜೀವವೀಣೆ ಜೀವಚ್ಛವವಾಗಿದೆ/ ರಾಗಾಲಾಪಗಳು ಶೋಕದಿ ಬಿಕ್ಕುತಿವೆ ಬಯಸಿದ ಮಮತೆ ದೂರ ಸಾಗಿ ಹೋಗಿದೆ.. ಕಾಣದಾ ಲೋಕಕೆ ನೆನಪು ಹಚ್ಚ ಹಸಿರಾಗಿ ಬೊಬ್ಬಿಡುತಿದೆ / ಮೌನ […]

ಕಾವ್ಯಯಾನ

ಅಂತಃಶುದ್ಧಿಯ ಸಮಯ…!! ಅರ್ಚನಾ ಹೆಚ್ ಜಾತಿ ಧರ್ಮಗಳ ಸುಳಿಯಲರಳಿದ ಕುಸುಮಗಳಿಂದು‌ ಶಿವಪೂಜೆಗೊದಗದೆ ಬರಿದೆ ಬಾಡಿದ ಬೆರಗು..!! ಹೆತ್ತ ಮಡಿಲಲಿ ಮತ್ತೆ ಕೂಸುಗಳು..! ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!! ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!?? ಮತ್ತೆ ಮೇಲಿಹನಾಗ್ರಹ..! ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..! ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ ಮರುಳ ಮಾನವರಿಗಿದೇಟು! ರಣತಂತ್ರ!! ವಿಕೃತ ಮನಸ್ಥಿತಿಗಳಾಟ! ವಿಶ್ವವ್ಯಾಪಿ ಬೀಸಿ ಚಾಟಿಯೇಟು..!! ಧನವೋ! ಋಣವೋ!?? ಶಕ್ತಿಯಾಟದಲಿ ಸತ್ತವರ ಲೆಕ್ಕಗಳು ಸರ್ವವ್ಯಾಪಿ! ಮೃತ್ಯು ಕಡುಕೋಪಿ..!! ಮಾತೃಭೂಮಿಯ ಸೊಗಡು ಭಕ್ತಿ ಮರೆತವಗೆ […]

ಕಾವ್ಯಯಾನ

ಗಝಲ್ ವೆಂಕಟೇಶ ಚಾಗಿ ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ || ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ ನೋಡುತಿರು ಅಪ್ಪ || ಹಸಿವಿನ ಆಟವನು ನೋಡಲು ನೆರೆಯುವರು ನಾಟಕದ ಮಂದಿ ನಿನ್ನಾಟದ ಗತ್ತು ಗಮ್ಮತ್ತುಗಳ ತೋರಿಸುವುದ ಮರೆಯದಿರು ಅಪ್ಪ || ಚಂದ್ರಮನ ತೋರಿಸಿ ಅಮ್ಮ ತುತ್ತು ಉಣಿಸುವಳು ಅಷ್ಟೇ ತುತ್ತುಗಳ ಕೂಡಿಡಲು ನನ್ನ ಎಂದಿಗೂ ಕಡೆಗಣಿಸದಿರು ಅಪ್ಪ || […]

ಕಾವ್ಯಯಾನ

ಗಝಲ್ ಪ್ರತಿಮಾ ಕೋಮಾರ ಕಹಿಯೂರಲ್ಲೊಂದು ಸಿಹಿ ಗಿಡವ ನೆಡುವ ಸಹಕರಿಸು ಬಂದು ನೆಟ್ಟ ಗಿಡಕೆ ಜೀವ ಜಲ ಕೊಟ್ಟು ಪೊರೆಯುವ ಸಹಕರಿ‌‌ಸು ಬಂದು ಬಾಗಿ ಬಸವಳಿದು ಉರುಳಿದ ಜೀವಕೆ ಸಾಂತ್ವನವೇ ಮದ್ದು ಮಾನವತೆಯ ನೆಲೆಯಲ್ಲಿ ಮಮತೆಯನು ಹನಿಸುವ ಸಹಕರಿಸು ಬಂದು ಕೋಟೆಗಳ  ಕಟ್ಟಿ ಹಕ್ಕಿಯೆಂದಾದರೂ ತನ್ನ ಬಂಧಿಸಿಕೊಂಡೀತೇ? ಮನಗಳ ನಡುವೆ ಹಬ್ಬಿರುವ ಬೇಲಿಯನು ಕಡಿಯುವ ಸಹಕರಿಸು ಬಂದು ಸ್ವಾಥ೯ದ ಮಾರುಕಟ್ಟೆಯಲ್ಲಿ ಬಿಕರಿಯಾಗುವವು ಬರೀ ಸ್ವಾಥ೯ಗಳೇ ನಿಸ್ವಾಥ೯ತೆಯ ದೀಪ ಹಚ್ಚಿ ಬದುಕ ಬೆಳಗುವ ಸಹಕರಿಸು ಬಂದು ಗಂಧಕ್ಕೆ ಮುಚ್ಚಿ,ಬಿಚ್ಚಿ,ಬೊಬ್ಬೆ ಹೊಡೆವ […]

ಕಾವ್ಯಯಾನ

ಪ್ರಿಯ ಸಖ H. ಶೌಕತ್ ಆಲಿ  ಬೆಳದಿಂಗಳಲ್ಲಿ ತಂಪು ತಂಗಾಳಿಯಲ್ಲಿ ನಮ್ಮ ಮಿಲನ ಆಲಿಂಗನ ಅರಳಿದ ನೈದಿಲೆಯ ಚಂದಿರನ ಚುಂಬನ ಪ್ರಶಾಂತವಾದ ಹೃದಯ ಮನಸೆಲ್ಲಾ ಅವನಲ್ಲೇ ಲೀನಾ ಆಧ್ಯಾತ್ಮವೂ ಅಮರ ಪ್ರೇಮವೂ ಬುದ್ಧ ನನ್ನ ಪ್ರಿಯ ಸಖ ಬೆಳಕಾಗಬೇಕು ಈ ಭೂಮಿಯು ಈ ಸುಂದರ ಪ್ರಕೃತಿ ನೆನಪಿರಲಿ ಶ್ವೇತ ಮೋಡಗಳು ಆಗಸದಲ್ಲಿ ಹೃನ್ಮನಗಳು ಏಕಾಂತವಾಗಿ ಭಾವನೆಗಳು ಹೂವಂತೆ ಅರಳಿ ಸುಖದ ಸೆಲೆಯಾಗಿ ಅವ ನಿಂತ ಬುದ್ಧ ನನ್ನ ಪ್ರಿಯ ಸಖ ನೋಟದಲ್ಲಿ ಸಾವಿರ ಅರ್ಥ ಜನ್ಮಜನ್ಮಾಂತರ ಪುನೀತ […]

ಕಾವ್ಯಯಾನ

ಪೂರ್ಣವಾಗದ ಸಾಲುಗಳು ಶೀಲಾ ಭಂಡಾರ್ಕರ್ ಮನಸ್ಸು ಒಮ್ಮೊಮ್ಮೆತೊಟ್ಟಿಕ್ಕುತ್ತಾ ಶಬ್ದಗಳಾಗಿ, ಹಾಳೆಯ ಮೇಲೆ ಒಂದೊಂದಾಗಿ ಬಿದ್ದು ಹರಡಿಕೊಳ್ಳುತ್ತಾ…. ಶುರುವಿಟ್ಟುಕೊಳ್ಳುತ್ತದೆ ಆಡಲು ಶಬ್ದಗಳ ಆಟ. ಹೊಂದಿಕೊಳ್ಳಲು ಹೆಣಗುವ ಭಾವನೆಗಳ ಮಾಟ. ಕವಿತೆಯಾಗಲು ಹೊರಟ ನಿಶ್ಶಬ್ದ ಶಬ್ದಗಳ ಅರ್ಧಂಬರ್ಧ ಸಾಲುಗಳು. ನೋಡಲು ಯಾವುದೋ ನಿರ್ಭಾವುಕ ಚಹರೆಯಂತಹ ಉಲ್ಲೇಖಗಳು. ಹಿಂದೊಮ್ಮೆ ಮುಂದೊಮ್ಮೆ ನಿಲ್ಲಲು ಸೆಣಸಾಟ. ಅರ್ಥವಿಲ್ಲದವುಗಳ ಮೂಲೆಗೆ ತಳ್ಳಾಟ ಮನುಷ್ಯರಲ್ಲಿ ಮಾತ್ರವಲ್ಲ ಶಬ್ದಗಳಿಗೂ ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು ಎಂದರೆ ಒಪ್ಪುವಿರಾ? *********

Back To Top