ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು.

Hand Touching Glass

ಪ್ರಮೀಳಾ ಎಸ್.ಪಿ.

ಕರೊನಾಕ್ಕೆ ಕಾರಣವಂತೆ
ಶಾಂಗ್ಲಿ ಮತ್ತವಳ ಬಾವಲಿ
ನರಳುತ್ತಿರೋದು ಮಾತ್ರ
ಇಟಲಿಯ ಇಲಿ.

ಸತ್ತರಂತೆ ಅಮೆರಿಕಾದಲ್ಲಿ
ಅಷ್ಟೊಂದು ಜನ.
“ಹೊಯ್” ! ಟೀವಿಯಲ್ಲಿ ಮಾರಾಯ…
ಎಂದು ಅಡ್ಡಾಡಿದರು ನಮ್ಮೂರ ಜನ .

ಸುರರೇ ಕುಡಿಯುತ್ತಿದ್ದರು
ಎಂಬ ನೆಪ ಕುಡುಕರದ್ದು
ಕೇಳದಿದ್ದರೂ ನೀಡಿದವರು
ಹೇಳಲಾರದ ನೆಪ ‘ಗಲ್ಲ’ದ್ದು.

ಕಂಠ ಪೂರ್ತಿ ಕುಡಿದು
ಅಪ್ಪ ಅಮ್ಮನಾದರು
ಬೆತ್ತಲು
ಕಣ್ಣು ಬಿಟ್ಟ ಮಗುವಿನ
ಮನದಲ್ಲೀಗ ಕತ್ತಲು.

ಕೇಳುವರೆಲ್ಲ ತೆರೆಯಲೆಂದು
ಅವರವರ ಆದಾಯದ
ಬಾಗಿಲು
ತೆರೆಯಿರಿ ಎಂದು
ಕೇಳುವುದೇ ಇಲ್ಲ ಮಕ್ಕಳು
ಶಾಲೆಯ ಬಾಗಿಲು.

***********************

Leave a Reply

Back To Top