ಕಾವ್ಯಯಾನ

ಹೆಣ್ಣಿನಂತರಾಳ

Woman Carrying Baby at Beach during Sunset

ವಾಣಿ ಮಹೇಶ್

ಮಮತೆಯ ಮಡಿಲಲ್ಲಿ
ಮಮತೆಯ ಕಾಣದೆ
ಮರುಗುವುದ ಕಲಿತೆ
ಮರುಳ ಮನಸು
ಅರಿಯದೆಲೆ ಆಸೆಗಳು
ಕಂಗಳ ತುಂಬಿವೆ /

ಕೊರಳುಬ್ಬಿ ಕಂಗಳ
ಕಂಬನಿ ಜಾರಲು..
ಹೆದರಿ ಅಲ್ಲೇ ಅವಿತು
ತನ್ನಿರವ ಸೂಚಿಸಿದೆ /

ಪ್ರೇಮಮಯಿ ಮಾತೆ
ತನ್ನಿರವ ಮರೆತಳು
ನಾ ಬರೆದ ರಾಗಕೆ
ಸ್ವರವೇ ಇಲ್ಲವಾಗಿಸಿಹಳು
ತಂತಿ ಕಡಿದು ಜೀವವೀಣೆ
ಜೀವಚ್ಛವವಾಗಿದೆ/

ರಾಗಾಲಾಪಗಳು ಶೋಕದಿ
ಬಿಕ್ಕುತಿವೆ
ಬಯಸಿದ ಮಮತೆ ದೂರ
ಸಾಗಿ ಹೋಗಿದೆ.. ಕಾಣದಾ ಲೋಕಕೆ
ನೆನಪು ಹಚ್ಚ ಹಸಿರಾಗಿ ಬೊಬ್ಬಿಡುತಿದೆ /

ಮೌನ ಕೆಣಕಿದೆ ಕಾಮನಬಿಲ್ಲಂತೆ
ಕಂಗೊಳಿಸುವ ವಯಸ್ಸಿನಲ್ಲೇ…
ಚಿವುಟಿದ ಕಾರಣ ಅರಿಯದಾಗಿದೆ../

ಅವಿತಿದ್ದ ಭಾವನೆಗಳು
ಪ್ರೀತಿಯ ಪ್ರಣಯಕೆ
ಜೋತು ಬಿದ್ದಿದೆ
ಬೇಕು ಬೇಡದ ಭಾವನೆಗಳೆಲ್ಲಾ
ಚಿಗುರೊಡೆದು
ಬದುಕೇ ಇಷ್ಟೆನಿಸಿದೆ /

ಮಾತೆಯ ಮಡಿಲಿನ ಮಹಿಮೆ
ಆಕಾಂಕ್ಷೆ ಕೊನೆಗೂ ಕರುಣಿಸದೆ
ಕನಸಾಗಿಸಿದೆ /

*************

6 thoughts on “ಕಾವ್ಯಯಾನ

  1. ಮನುಷ್ಯ ಜನ್ಮ ಉತ್ಕೃಷ್ಟ ವಾದದು. ನಕಾರವಾಗಿ ತೆಗೆದುಕೊಳ್ಶದೆ,
    ಸಕಾರವಾಗಿ ಅನುಭವಿಸಿದಲ್ಲಿ ಆಗ ಹೊರಹೊಮ್ಮುವ ಕಾವ್ಯವಾಗಲೀ ಗದ್ಯವಾಗಲೀ ಇನ್ನೂ ರಂಜನೀಯವಾಗಿರುತ್ತದೆ.

  2. ಚೆನ್ನಾಗಿದೆ ವಾಣಿಯವರೆ, ಅಭಿನಂದನೆಗಳು.

Leave a Reply

Back To Top