ವರುಣರಾಗ
ಕವಿತೆ ಅರುಣ್ ಕೊಪ್ಪ ಹಸಿರು ಚಿಮ್ಮುವ ಬುವಿಯೊಳು….ವರುಣನ ಹನಿಗಳ ಸದ್ದು.!ಕವಿದ ಮೋಡಗಳು…ಎಲ್ಲೋ ಸೇರಿಹೋದವು…ಹನಿಯೊಂದೇ …..ಕೂಗುತ್ತಾಕ್ರಮಿಸುತ್ತಿದೆ….ಭೂ ಗರ್ಭವ!ಆಳ ಆಳವನು ಸೇರುವಾಸೆ….ಎಲ್ಲ ಕಡೆ ನರ್ತನ ಮಾಡುವಾಸೆ…ನಿನ್ನ ಹಾಡಿಗೆ ದ್ವನಿಗೂಡುವಹಿಂಡೇ ಈ ಪ್ರಪಂಚ!!ನೀ ಇದ್ದರೆ ಜೀವವೇ ಸಂಗೀತಮಯ…ಹಸಿರು…,ಹಸೀವು…,ಒಲವು ಎಲ್ಲ…..ನೀ ನರಿಯದಿಹ ಮಿಂಚು!!ಬಿರುಗಾಳಿ ಬೆನ್ನಟ್ಟಿ ಬಂದಾಗಆಗುವ ಭಯ!!ನೀ ಕಾಣದಾದಾಗ ಆಗುವ ವ್ಯಥೆ …..ಬಣ್ಣಿಸಲಾಗದಷ್ಟು ಭಾವಪೂರಿತ…ನೀ ಸುರಿವ ಸದ್ದೆ ಚಂದನೀ ಬೆರೆವ ಸಾಲು ಸಾಲುನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??ನೀ ಮಳೆಯ ಮಗು,ನಗು,ಮಡದಿ,ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ **************
ಬಂದಿಯಾಗಿಹ ರವಿ
ಕವಿತೆ ನೀ.ಶ್ರೀಶೈಲ ಹುಲ್ಲೂರು ಉದಯಿಸುವ ರವಿಯ ದಿನದೋಟಕೆಅಡ್ಡಿಯಾಗಿದೆ ಕುರಿಮೋಡ ಕರಿಸಾಲುಕುರಿಗಾರ ಪವನನೆದ್ದು ಬರುವನಕಹಿಂಡು ಕುರಿಗಳ ನಡುವೆ ರವಿ ಕಂಗಾಲು ಮಳೆಗಾಲದೀಗಿನೀ ಹಗಲ ಹೊತ್ತುಮೋಡಗಳದು ನಿಲದ ನಿತ್ಯ ರಂಪಾಟಕೆಂಪಾದವನಿಗದೇನೋ ಮಮಕಾರಮೋಡಗಳೊಂದಿಗವನದೂ ತುಂಟಾಟ ಶುಕಪಿಕಗಳ ಇನಿದನಿಯ ಗಾಢಮೌನಮಂಕಾದ ಮನಗಳಲಿ ಗೌಣ ಸೊಗಸುಅವನೆದ್ದರೆ ಬೆಳಗು ಏಳುವರು ಎಲ್ಲಹೊದಿಕೆಯಡಿಯಲೆ ಕಾಣುವರು ಕನಸು ಸುರಿವ ವರುಣನ ನಡುವೆ ನೆಲದ ಗಾನಝರಿ ತೊರೆ ನದಿಗಳಲಿ ರಭಸದೋಟತಡೆವರಾರಿಲ್ಲ ತಿಮಿರದಾಲಿಂಗನವಮೋಡಗಳಡಿಯೆ ರವಿಯ ಮಿಲನ ಕೂಟ ಕಡಲಿನೊಡಲಿಗದೇನೋ ಸಡಗರರವಿಯ ಚುಂಬನವು ಮರೆತ ಗೀತಅಮ್ಮನೊಡಲಲಿ ನದಿಗೆ ಧನ್ಯ ಭಾವಕಡಲ ಕುಡಿಗಳಲದೋ ನವ […]
ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ
ಕವಿತೆ ನಾಗರಾಜಹರಪನಹಳ್ಳಿ ಪ್ರತಿಕ್ಷಣದ ಉಸಿರುನನ್ನೆದೆಯಲ್ಲಿ ಬಿಸಿರಕ್ತವಾಗಿದೆಕೈ ಬೆರಳ ಸ್ಪರ್ಶಹಾಡಿದ ರಾಗ ಅನುರಣಿಸುತ್ತಿದೆಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲಒಲವ ಒಳಹರಿವು ……..** ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿಮಲಗಿರುವ ಬೆಟ್ಟಸಾಲುಗಳೇಬಯಲು ಕಣಿವೆ ಮುದ್ದಿಸಿ ಸಾಗುವಮಂಜು ಮೋಡಗಳೇಆಕೆಗೆಮುಗಿಲ ಸಂದೇಶವ ಅನುವಾದಿಸಿ ಬಿಡಿ ಈಗೀಗಪ್ರತಿ ಮಾತು ಒಲವಿನ ಸಂದೇಶಹೊತ್ತು ತರುತ್ತಿದೆಬದುಕು ಹಿತವೆನಿಸುತ್ತಿದೆಹಕ್ಕಿಯ ಇಂಚರಮಳೆಯ ಧ್ಯಾನಕ್ಕೂಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….** ನಿನ್ನ ಬೆರಳಸ್ಪರ್ಶದಿಂದಕವಿತೆಗೆ ಹೊಸಅರ್ಥ ದಕ್ಕಿತುನಿನ್ನ ಹೆರಳಪರಿಮಳ ನನ್ನೆದೆಯಲ್ಲಿಹೊಸ ತರಂಗಗಳಅಲೆ ಎಬ್ಬಿಸಿತು
ಅರಮನೆ
ಕವಿತೆ ಕೃಷ್ಣಮೂರ್ತಿ ಕುಲಕರ್ಣಿ. ಅರಮನೆಗಳು ಎಂದರೆಹಾಗೇಯೆ ಸ್ವಾಮಿ,ಒಂದಿಲ್ಲ ಒಂದುದಿನಅವು ತಮ್ಮದಿಮಾಕು ದೌಲತ್ತುಕಳೆದುಕೊಳ್ಳುತ್ತವೆ!ಬದುಕಿನಲ್ಲಿ ಬರುವಸುಖ ದುಃಖಗಳಂತೆ,ದುಃಖದ ನೋವಿಗೆ ನರಳದೆ,ಸುಖದ ಸಡಗರಕ್ಕೆ ಹಿಗ್ಗದೆ,ಅಲ್ಲಿರುವ ಬಾಗಿಲು ಕಿಟಕಿಗೋಡೆಯಲಿ ಹೂತಿರುವ ಗೂಟಗಳು ಮಾತ್ರ ನಿರಂಬಳವಾಗಿಉಳಿಯಲು ಸಾಧ್ಯ,ಅಲ್ಲಿಯೇ ಹುಟ್ಟಿಬೆಳೆದಇರುವೆಗಳು ಸಾಗಿಹೋಗುತ್ತವೆ,ಅರಮನೆ ಇರುವ ಮನೆಯಲ್ಲ,ಅದೊಂದು ಸ್ಮಾರಕ ಎಂಬುದು ಅವುಗಳ ಗಮನಕ್ಕೆ ಬಂದಿರಬೇಕು,ತಾವು ಕಟ್ಟುವ ಗೂಡಿಗೆಗೆದ್ದಿಲೊ ಹಾವೋ ಬರುವಹಾಗೆ,ದುಃಸ್ವಪ್ನ ಕಂಡಿರಲೂಬೇಕು,ವಿಶಾಲವಾದ ಸೌಧ ಕಟ್ಟಿದವರು,ವಿಶಾಲ ಮನೋಭಾವ ಬೆಳೆಸಲಿಲ್ಲ,ಅರಮನೆಯ ಅಂಗಳದಲ್ಲಿ,ಭಿನ್ನತೆಯ ಕರ್ಕಿ ಆಳಕ್ಕೆಬೇರುಗಳ ಇಳಿಬಿಟ್ಟು ದಟ್ಟವಾಗದಿದ್ದರೂ,ದಿಟ್ಟವಾಗಿಯೇ ಹಬ್ಬಿಹರಡಿದ್ದು,ಕಟ್ಟಿದವರ ಗಮನಕ್ಕೆ ಬರಲೇಇಲ್ಲ,ಸಂಕುಚಿತ ಮನೋಭಾವಗಳಸಂತೆ ಜರುಗಿದಾಗ,ಅರಮನೆ ಆಡಂಬರ ಕಳೆದುಕೊಂಡು ಬರಡಾಯಿತು,ಏಕಾಂಗಿ ಸ್ಮಾರಕದ ಸುತ್ತಲೂ,ಬೀಸುವ […]
ಗಝಲ್
ಗಝಲ್ ಅನ್ನಪೂರ್ಣಾ ಬೆಜಪ್ಪೆ ಇದ್ದರೂ ನೋವುಗಳು ಹಲವಾರು ನಗುತಿರು ಸಖೀಬಿದ್ದರೂ ಧೃತಿಗೆಡದೆ ಪುಟಿದೆದ್ದು ಸಾಗುತಿರು ಸಖೀ ವಿಶಾಲ ಜಗವಿದು ಅವಕಾಶಗಳಿಗಹುದೇನು ಕೊರತೆವಿಷಮ ಭಾವಗಳಳಿಸಿ ಹೊಸತನಕೆ ತೆರೆಯುತಿರು ಸಖೀ ಮುಂದೆ ಸರಿದಂತೆಲ್ಲ ಜಗ್ಗಲೆತ್ನಿಸುವ ಮನವೆ ಬಹುವಿಲ್ಲಿಹಿಂದೆ ಜಾರದಂತೆ ಸಮಸ್ಥಿತಿಯ ಕಾಯುತಿರು ಸಖೀ ಸೋಲು ಬಂತೆನಲು ಕೊರಗಿ ಹತಾಶೆ ತೋರುವುದೇಕೆಗೆಲುವು ಪಡೆಯುವ ತನಕವೂ ಬಿಡದೆ ಓಡುತಿರು ಸಖೀ ಕ್ಲೇಶ ಕಳೆಯಲು ಅನುವಿಗೆ ವಿಶ್ವಾಸವೇ ಬಲವಲ್ಲವೇನುತೋಷಕಾಗಿ ಕರ್ಮ ಸಾಧನೆಯ ಕಡೆ ನಡೆಯುತಿರು ಸಖೀ ********
ಮಾರುವವಳು
ಕವಿತೆ ಮಾಂತೇಶ ಬಂಜೇನಹಳ್ಳಿ ಮೂರನೇ ತಿರುವಿನ ಬಾನೆತ್ತರದ ದೀಪದ ಕಂಬದ ಅಡಿ ನಿಂತ ಆಗಸದಗಲ ಛತ್ರಿಯ ಕೆಳ ಮಲ್ಲಿಗೆ ತುರುಬಿನ ಎಳವೆ ಮಲ್ಲೆಗೆ, ರಾಶಿಯೋಪಾದಿ ಕೋರೈಸುವ ಹೂಗಳ ಸ್ಪರ್ಶ ಗೆಳೆತನ. ಉದುರಿದ ದಿನಗಳು ಈಗೀಗ ಒಗ್ಗುತ್ತಿವೆ, ಬಿರಿದ ಚೆಂಗುಲಾಬಿ ಮುಡಿದು, ಸೂರ್ಯನಿಳಿವ ಹೊತ್ತಿಗೆ ಮುದುಡಿದ ದೇಹ, ಕತ್ತಲೆಯಾಗುತ್ತಲೇ ಹೊರಡುವ ತರಾತುರಿ.. ಒಣಗಿ ಮಬ್ಬೇರಿದ ಕಂದು ಹೂಗಳ ನೆತ್ತಿಯಿಂದೆ ಸುತ್ತಿದಾಕೆ, ತಾನು ಒಪ್ಪದ ವರನ ವರಿಸದ್ದಕ್ಕೆ, ಹಿಂದೆ ಬಿದ್ದವರ ಸಲಹಲು, ಭವಿಷ್ಯ ಪಕ್ಕಕ್ಕೆ ಎತ್ತಿಟ್ಟವಳು. ಈಗೀಗ ಮುಂಜಾನೆ ಅರಳಿ, […]
ಜುಮುರು ಮಳೆ
ಫಾಲ್ಗುಣ ಗೌಡ ಅಚವೆ. ನಿನ್ನ ಕೆನ್ನೆ ಹೊಳಪಿಗೆಮೋಡನಕ್ಕಿತು ಬೆಳ್ಳಕ್ಕಿಗಳುದಂಡೆಗೆ ಬಂದುಪಟ್ಟಾಂಗಹೊಡೆದಿವೆ.! ಮಗು ಎದ್ದುನಕ್ಕಾಗಬೆಳಕಾಯಿ ದಿನವಿಡೀ ನಕ್ಕಹೂ ಬಾಡಿಮೊಗ್ಗಾಯಿತು ಮಣ್ಣ ಗಂಧಕುಡಿದುಮಿಂಚಿದೆನೆಲ ಸಂಪಿಗೆ ಬಾಡುವಹಂಗಿಲ್ಲದಗುಲ್ ಮೋಹರ್ಮನಮೋಹಕ! ನಿನ್ನ ತುಟಿಯಲ್ಲಿನಕ್ಕ ಮಳೆನನ್ನ ಕಣ್ಣಲ್ಲಿಹೊಳೆ! ಇಡೀ ರಾತ್ರಿಮೋಡನಿನ್ನ ಮನೆಸುತ್ತುತ್ತಿದ ನಿನ್ನ ಹಾಡುಕೇಳಲುಬೆಳದಿಂಗಳುಕಾದಿದ ನಿನ್ನ ಹುಬ್ಬಿಗೆನಾಚಿದೆಮಳೆಬಿಲ್ಲು ಮುಳ್ಳುಮರೆಮಾಚಿಗುಲಾಬಿನಿನಗೆ ಕಳಿಸಿದೆ ಲಂಗರುತಗೆದ ಹಡಗುದಂಡೆಯಲ್ಲಿಹೊರಟಿದೆ!
ಭಾವ ಚಿತ್ರ
ಶಾಂತಾ ಕುಂಟಿನಿ ಮೇಲಿನಿಂದ ನೋಡಿದರೇತಿಳಿದೀತೇ ಅವಗುಣವೂಕೆಳಗಿಳಿದು ನೋಡಿದಾಗಒಳಗೆಲ್ಲ ಅಪಸ್ವರವೂ//೧// ಹೊರಗೆಲ್ಲಾ ನಗುಮೊಗವುಒಳಗೆಲ್ಲಾ ಬೈಗುಳವೂಅರಿತಾಗಲೆ ಮನಸುಗಳಆಂತರ್ಯ ಕಾಣುವವೂ// ಕಣ್ಣಿದ್ದರು ಕುರುಡರಂತೆನಮ್ಮದೆಲ್ಲ ವರ್ತನೆಯೂಇದು ಎಲ್ಲವು ನಮಗೇಕೆಅನ್ನುಂತಹ ಶೈಲಿಯೂ ನಿರ್ಮಲದ ಮನಸುಗಳಹುಡುಕಾಟವು ದುರ್ಲಭವುಏನಿದ್ದರು ಇಲ್ಲಿ ಎಲ್ಲವುಹೊಳಹುಗಳೇ ತೇಲಿದವು// ************* ಅದೆ ಸತ್ಯ ಎಂದಂದೂನಂಬಿರುವಾ ಜನರಿರಹರೂಪರದೆಯನು ನೀ ಸರಿಸಲುಕಂಡಿಹುದೇ ಕೆಸರೂ// ನಾಟಕವನೆ ಮಾಡುತಲೀವೇಷವನ್ನೇ ತೊಡುವರೂನಂಬಿ ನೀನು ಹೋದರಲ್ಲಿಹಳ್ಳವನೇ ತೋಡುವರೂ//
ಗಝಲ್
ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ […]
ಮನುಜ ಮತ
ಕವಿತೆ ರೇಶ್ಮಾಗುಳೇದಗುಡ್ಡಾಕರ್ ಗೆಲ್ಲ ಬೇಕಿದೆ ಕ್ಷಣ ಕ್ಷಣಕ್ಷಣಕೂಹೊಸ ಅವತಾರದಿದಂದ ಮರಳುಮಾಡುವಹನಿ ವಿಷಕೂ ಹೆಣದ ಹೊಳೆಹರಿಸುವಅಂತರಂಗದ ಯುದ್ದವ ನೆಡ ಬೇಕಿದ ಮಾನವೀಯತೆ ಸಸಿಯಬೆಳಸಿ ಉಳಿಸ ಬೇಕಿದೆ ಮನದರಹದಾರಿಯತುಂಬಾ ಪ್ರೀತಿಯನೆರಳ ಪಡೆಯಲು ಬದುಕಿನಲ್ಲಿ ಒತ್ತರಿಸಿ ಬರುವ ದುಃಖ ವ ಹತ್ತಿಕುವಬದಲು ಒರೆಸುವ ನೊಂದ ಕಣ್ಣುಗಳನುಮರೆಯುವ ನಮ್ಮೊಡಲ ಬೇನೆಯನುನಿಸ್ವಾರ್ಥ ದ ತೊಡೆತಟ್ಟಿ ಆಖಾಡಕೆಇಳಿಯುವ “ನಾನು “ಎಂಬ ಅಹಂಗೆಲ್ಲುತ ಸಾಗುವ ಬಾಳ ಪಯಣವ ಊರು ಯಾವುದಾದರೇನು ದಾರಿಯಾವುದಾದರೇನು ನಾನು ನನ್ನೋಳಗೆ ಇರುವ ನೀವು ಒಂದೇ ಅಲ್ಲವೇನು?ನಾಲಿಗೆಯ ಬಂದೂಕು ಮಾಡಿಬದುಕಿದರೆ ಮನುಷ್ಯ ತ್ವ ಉಳಿಯುವದೇನು? […]