ಎರಡು ಕವಿತೆಗಳು
ಕವಿತೆ ಧನಪಾಲ ನಾಗರಾಜಪ್ಪ ಧನ ನಿನ್ನದನಿಕೇಳರಾರೂನಿನ್ನಪಾಡುನೋಡರಾರೂನೆಲ, ಜಲಜನ, ಮನಅಂತೆಲ್ಲಾ ಯಾಕೆ ಬಡಬಡಿಸುವೆ?ಧನವೇ ಇಂಧನಧನವೇ ಪ್ರಧಾನಜಮಾನ ಇದರ ದೀವಾನನಿನಗೆ ಅರ್ಥವಾಗದೆ ಧನು? ಜಾಡ್ಯ ಇಲ್ಲಿಯ ತನಕಏಡ್ಸ್ ಒಂದರ ಹೊರತುಬಹುತೇಕ ಜಾಡ್ಯಗಳಿಗೆಇಲಾಜು ಮಾಡಬಲ್ಲರುಈಗಿನ ವೈದ್ಯರುಶ್ಲಾಘನೀಯ ಸಾಧನೆಯೇ ಸರಿ ಜಾತಿಯ ಅಹಂ ಕೂಡಾಮಾರಕ ಜಾಡ್ಯ ಅಲ್ಲವೆ?ದೂರವಿರಿ ಇದು ಸಾಂಕ್ರಾಮಿಕಮುಂದೆ ಎಂದಾದರೂಏಡ್ಸಿಗೂ ಸಹಔಷಧ ಕಂಡುಹಿಡಿಯಬಹುದೇನೋ!ಆದರೆ ಜಾತಿಯ ಜಾಡ್ಯಕ್ಕೆಮದ್ದು ಅದೆಂದು ಸಿಗುವುದೋ ಧನು? ***************************************
ಸತ್ಯಕ್ಕೆ ಸಾಕ್ಷಿ ಬೇಕಾಗಿದೆ
ಕವಿತೆ ಸತ್ಯಕ್ಕೆ ಸಾಕ್ಷಿ ಬೇಕಾಗಿದೆ ಆರ್.ಉಷಾ ಸತ್ಯ ಸುಳ್ಳುಗಳ ಮಧ್ಯೆ ಬೆಸುಗೆ ಬೆಳೆದುಸುಳ್ಳು ಎಲ್ಲೆಲ್ಲೂ ಝೇಂಕರಿಸಿ ವಾಮನನಂತೆ ಬೆಳೆದುಬಲಿಗೊಟ್ಟು ಸತ್ಯವನುಮೋಸದ ಜೊತೆ ಒಡನಾಡಿಯಾಗಿದ್ರೋಹದ ಜೊತೆ ಸ್ನೇಹ ಪಲ್ಲವಿಸಿಅಪನಂಬಿಕೆಯ ಮಿತ್ರನ ನೆರವು ಪಡೆದುದ್ರೋಹದ ಬಲೆಯಲ್ಲಿ ಸತ್ಯವನು ಮೂಲೆಗುಂಪು ಮಾಡಿಕಾರ್ಗತ್ತಲಿನ ಖೋಲಿಯಲ್ಲಿ ಬಂಧಿಯನ್ನಾಗಿಸಿತು ಸುಳ್ಳು ಕಟ್ಟಿದ ಅರಮನೆಯಲ್ಲಿ ಕೂಪಮಂಡೂಕದಂತೆಸೂರ್ಯೋದಯವನ್ನೇ ಕಾಣದ ಸತ್ಯಕತ್ತಲಲ್ಲೇ ಕುರುಡಾಗಿಇರುಳ ಕರುಳ ಬಗೆದುಬಟ್ಟ ಬಯಲಾಗಲಾರದೆಸುಳ್ಳಿನ ವಿದ್ರೋಹದ ಮುಳ್ಳು ಬೇಲಿಯಲಿ ಸಿಲುಕಿನರಳಿ ನರಳಿ ನರ ಸತ್ತು ಗಂಟಲ ಪಸೆ ಆರಿಬೊಬ್ಬಿರಿಯಲಾಗದೆ ಕಗ್ಗತ್ತಲ ಕೂಪದಲಿ ಬೆಂದು ಒಂಟಿಯಾಗಿ ಸಾಕ್ಷಿಯ ಸಹಚರನಿಲ್ಲದ […]
ನಂಬಿಕೆ
ಕವಿತೆ ನಂಬಿಕೆ ರೇಷ್ಮಾ ಕಂದಕೂರು ಮನುಜತೆಯ ಸಾಕಾರ ರೂಪಅರಿವಿನ ಮಹಾಪೂರಅವಿನಾಭಾವದ ಸರದಿ ಶುದ್ಧ ಮನದ ರಿಂಗಣಅಭಿಮಾನದ ಗೂಡುಒಲುಮೆಯ ಹರಕೆ ಕಾರುಣ್ಯದ ಬದುಕುಸತ್ವರಜದ ತೇಜಸ್ಸುಪರಿಪೂರ್ಣ ಬಂಧುತ್ವ ವಿಶ್ವಾಸದ ಹೊನಲುಆಸರೆಯ ತೋರಣನೆರಳು ಬೆಳಕಿಗೆ ಸಮಸ್ಥಿತಿ ***************************
ಅಸಹನೆ
ಕವಿತೆ ಅಸಹನೆ ಭಾಗ್ಯ ಸಿ. ಯಾರೊಂದಿಗೆ ಅಸಹನೆ ಏತಕ್ಕಾಗಿಬೂದಿ ಮುಚ್ಚಿದ ಕೆಡದಂತೆ ಕೋಪಸ್ಥಾನಪಲ್ಲಟವಾಗಿವೆ ಜಡ ವಸ್ತುಗಳುಮನಸ್ಸಿನ ತುಂಬೆಲ್ಲ ಅಶಾಂತತೆಯ ಛಾಯೆ ಸಾಗುತ್ತಿರುವ ದಾರಿ ಮುಟ್ಟುವುದೆಲ್ಲಿಗೆಪರಿಶ್ರಮವಿಲ್ಲದೆ ಯಶಸ್ಸಿನ ಬಯಕೆ ಏಕೆ?ಅಂಧರೇನಲ್ಲ ಬಿದ್ದರು ಮೇಲೆಳಬಹುದುಸ್ವಚ್ಛಂದವಾಗಬೇಕು ಜಿಗುಟುತನ ತೊರೆದು ಬಿರುಗಾಳಿ ಯಿಂದ ಅಸ್ತವ್ಯಸ್ತ ಜೀವನವಿವೇಚನೆಯಿಲ್ಲದ ಹುಚ್ಚು ನಿರ್ಧಾರವೈರುಧ್ಯಗಳ ನಡುವೆ ಋಣಾತ್ಮಕತೆಜಂಟಿ ಹೋರಾಟ, ಹೊರನಡೆ ಶೀಘ್ರದಲಿ ತಲೆಹರಟೆ ಪ್ರಕ್ರಿಯೆಗಳ ತೊರೆದುಭ್ರಮಾ ಲೋಕ ಬಿಟ್ಟು ವಾಸ್ತವದೆಡೆಗೆನಡೆ ತನ್ನ ಉಳಿವಿನ ಬೆಳಕಿನೆಡೆಗೆಅಸಹನೆ ತೊರೆದು ಮಿನುಗುವ ನಕ್ಷತ್ರವಾಗಿ **********************************************
ಗಝಲ್
ಗಝಲ್ ಶ್ರೀದೇವಿ ಕೆರೆಮನೆ ನೀನು ಮತ್ತೆ ಬರುವುದಿಲ್ಲವೆಂದು ಬುದ್ಧಿಗೆ ಅರ್ಥವಾಗಿದೆಹಾಳಾದ ಮನಸ್ಸು ಇನ್ನೂ ನಿನಗಾಗಿ ಕಾತರಿಸುತ್ತಿದೆ ಹೀಗೆ ಬಂದು ಹಾಗೆ ಹೋಗಲು ನಾನೇಕೆ ಬೇಕಿತ್ತು ಹೇಳುನನ್ನ ಮನೆಯಂಗಳದ ಮಲ್ಲಿಗೆ ನಿನಗೀಗ ಮರೆತು ಹೋಗಿದೆ ಅಗಲುವ ಮಾತಾಡಿದ್ದು ಇಂದು, ನಿರ್ಧಾರ ಎಂದಾಗಿತ್ತು?ಮಾಮರದ ಕೋಗಿಲೆಯೇಕೆ ಹೀಗೆ ಕರ್ಕಶವಾಗಿ ಅಳುತಿದೆ ಕೊನೆಯ ಕ್ಷಣದವರೆಗೂ ಗುಟ್ಟು ಬಿಡದ ಮಹಾ ಚತುರ ನೀನುನೆತ್ತರಿಲ್ಲದೇ ಇರಿಯುವುದನು ನಿನ್ನಿಂದ ಕಲಿಯಬೇಕಿದೆ ನಾಟಕದ ಮಂದಿರದಲ್ಲೀಗ ಕಣ್ಣು ಕುಕ್ಕುವ ಬೆಳಕಿಲ್ಲಮನಸನು ಬಲಿಪಡೆದ ಪ್ರಹಸನವು ಜಗಜ್ಜಾಹೀರಾಗಿದೆ ನಿನ್ನವಳೆಂಬ ಹೆಮ್ಮೆ ಎದೆಯೊಳಗೆ ಮೊರೆದು […]
ಸಿಂ(ಹ)ಪತಿ
ಕವಿತೆ ಸಿಂ(ಹ)ಪತಿ ವಿಶಾಲಾ ಆರಾಧ್ಯ ಮನದ ಮೆಟ್ಟಿಲುಗಳನೀ ಒಂದೊಂದಾಗಿಎಷ್ಟೇ ಬಾರಿ ಇಳಿದುಹೋದರೇನು ಗೆಳೆಯ ?ಮತ್ತೆ ಮತ್ತೆ ನೀ ಕೂರುವೆಬಂದು ಅಧಿಪತಿಯಾಗಿ …// ಒಡಲ ಕಣದಲಿನೀ ಅಂಗಾಂಗುಲವೂಎಷ್ಟೇ ಗಾಯಗೊಳಿಸಿಕೊರಗಿಸಿದರೇನು ಗೆಳೆಯ ?ಮತ್ತೆ ಮತ್ತೆ ನೀನೇ ಬರುವೆನನ್ನ ಭೂಪತಿಯಾಗಿ…// ಮೋಹಕ ನೋಟದಕಣ್ಣ ಕಂಬನಿಗೆನೀ ಕಾರಣವಾಗಿಎಷ್ಟೇ ಕಾಡಿದರೇನು ಗೆಳೆಯ ?ಆ ಕಣ್ಣ ಕನಸಲಿಮತ್ತೆ ಮತ್ತೆ ನೀನೇ ಬರುವೆನನ್ನ ಪತಿಯಾಗಿ…!!ಅದಕ್ಕೆ ನಾವಾಗಿರುವೆವುದಂಪತಿಯಾಗಿ …// ***************************
ಒಂದು ಸಾಂದರ್ಭಿಕ ಚಿತ್ರ
ಕವಿತೆ ಒಂದು ಸಾಂದರ್ಭಿಕ ಚಿತ್ರ ಬಸವರಾಜ ಹೂಗಾರ ಕರಿಕಲ್ಲಿನ ಮೇಲೆಚಂದದ ನಾಮಫಲಕಚಿಕ್ಕ ಗೇಟುಎರಡು ಕುರ್ಚಿ ಹಾಕುವಷ್ಟೇ ವರಾಂಡಇಣುಕಿ ನೋಡಿದರೆದೊಡ್ಡ ಪಡಸಾಲೆಎರಡು ಕೋಣೆಗಳ ಮಧ್ಯೆಅಂಗೈಯಗಲದ ದೇವರಮನೆ.ಬಾಡಿಗೆ ಮನೆಯಲಿಇದ್ದೂ ಇದ್ದೂ ಸಾಕಾಗಿಸಾಕಿಷ್ಟು ನಮಗೆಎನ್ನುವಷ್ಟಿತ್ತು ಮನೆ. ರಸ್ತೆಯಲ್ಲಿ ಹೋಗುವಾಗಆ ಮನೆ ಈ ಮನೆಬಣ್ಣ ಬಣ್ಣದ ಮನೆಗಳನೂರು ನೋಟ ಆಸೆ ಕನಸುಗಳಗಿಲಕಿ ಹಳವಂಡಎಚ್ಚರಾದವನಿಗೆ ಲೋಕ ಸುಂದರ. ಎಲ್ಲ ಮನೆಗಳೂ ಚಂದಕಂಡವರ ಮನೆ ಸಿಟೌಟಿನಲಿಪೇಪರ್ ಓದುವವನು ನಾನೊಬ್ಬನೆ !ಹತ್ತುವಾಗ ಇಳಿಯುವಾಗಹೆಚ್ಚು ಕಂಡದ್ದು ಈ ಚಿಕ್ಕ ಮನೆಗಂಡ ವ್ಯಾಪಾರಿ ಹೆಂಡತಿ ಸಂಸಾರಿಕಂಪೌಂಡಿನಂಗಳದಲಿಗೆಜ್ಜೆ ಗಿಲಕಿಯ ಹೆಜ್ಜೆವೂರುವ ಮಗು. […]
ಕಾವ್ಯ ಲೋಕದ ರವಿತೇಜ
ಕವಿತೆ ಕಾವ್ಯ ಲೋಕದ ರವಿತೇಜ ಶಿವರಂಜಿನಿ ,ಎಂಆರ್ ಶಿವಣ್ಣ ಸಾರಸ್ವತ ಅಂಗಳದಲಿಮಂದಹಾಸ ಬೀರುತಅರಳಿದಸುಂದರ ಹೂನೀವು ತಾನೆ ?ಕಾವ್ಯ ಸುಮದಿ ಘಮ ಘಮಿಸಿದನಿಮ್ಮ ಭಾವಗಳ ಐಸಿರಿಗೆಸೋತವಳು ನಾನು ತಾನೆ ? ಗೀತ ಸಂಗೀತ ಸ್ವರಗಳಲಿಸುರ ತರಂಗಗಳನೇಳಿಸಿದವರುನೀವು ತಾನೆ ?ಮನ ತುಂಬಿ ಅದರ ಗಾನ ರಸಸ್ವಾದಸವಿಯುಣುತ ಮೈಮರೆತವಳು ನಾನು ತಾನೆ ? ಗಾನ ಸರಸ್ವತಿಗೆ ಅಕ್ಷರ ಮಾಲೆಗಳ ತೊಡಿಸಿ,ಮಾಸದ ರವಿತೇಜನೀವೇ ತಾನೆ ?ನಿಮ್ಮಗೀತಿಕೆಗಳ ಮಂದಾರ ಚೆಂದವೆನಿಸಿಮಧುರ ರಾಗಗಳ ಗುನು ಗುನುಸುತಮುಗ್ಧಗೊಂಡವಳು ನಾನು ತಾನೆ? ಜನ ಮೆಚ್ಚಿದ ಜಗ ಮೆಚ್ಚಿದನಾನೂ ಮೆಚ್ಚಿದ […]
ಬಾಳ ಬೆಳಕೇ..
ಕವಿತೆ ಬಾಳ ಬೆಳಕೇ.. ವೀಣಾ ಪಿ. ಸುಧೆಗಡಲ ಸೊಗದೊಡಲಸವಿ ಆತ್ಮ ಚೇತನದಹಾಲು ಗಲ್ಲದಹದ ಭಾವವೇ.ಹೊಳೆವ ನಕ್ಷತ್ರದಮಿನುಗು ಕಣ್ಗಳ ಮಿಂಚೇ..ಮುಗ್ಧತೆಯು ಮೈವೆತ್ತಮುದ್ದು ಮಾಟದಬೊಂಬೆಯೇ..ಬೆಳಕು ಬೃಂದಾವನದಎಳೆ ತಳಿರು ತೋರಣದಚಿಗುರೊಡೆದಹಸಿರೇ..ಹೊಸ ವರಸೆಯಭರವಸೆಯನುಮೆಲ್ಲನರಳಿ ಮುಡಿಸುವನಗೆ ಮಲ್ಲಿಗೆ ಮೃದು ದಂಡೆಯೇ..ಕತ್ತಲೆಯ ಕಾರ್ಮೋಡಕಳೆದು ಬೆಳಕಾಗುವಬೆಳ್ಳಿ ಬೆಳದಿಂಗಳೇ..ನಿನ್ನಿಂದಲೇ ಬೆಳಕು ಬಾಳ್ಗೆ… *********************************************
ಕವಚದಲ್ಲಿ ಭದ್ರ
ಕವಿತೆ ಕವಚದಲ್ಲಿ ಭದ್ರ ತಮ್ಮಣ್ಣ ಬೀಗಾರ ಕವಚದಲ್ಲಿ ಭದ್ರ…ಅದು ಯಾವಾಗ ಹೋಗುತ್ತದೆಅಥವಾ ಹೋಗುವುದಿಲ್ಲವೆಂದುಹೇಳುವುದು ಹೇಗೆ…ನನಗಂತೂ ಬಂದಿದೆ ಕಾಯಿಲೆಮರದ ಬೇರು ಕೊಳೆಯುವಷ್ಟುಮಳೆಯಾದರೆ ಚಿಗುರುವುದು ಯಾವಾಗ…ತಲೆಯ ತುಂಬಾ ಕೆಲಸ ತುಂಬಿಕೊಂಡಿದೆಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆಕಟ್ಟಿ ಹಾಕಿದೆ…ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದಕಂದ… ದಿನವೂ ನನ್ನೊಂದಿಗೆಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲಆದರೂ ಕಾಯ್ದುಕೊಂಡಿಲ್ಲ ಅಂತರರೋಗ ಹರಡುತ್ತಲೇ ಇದೆಇವಳು ಯುಟ್ಯೂಬ್ ನೋಡಿ ಮಾಡುವಹೊಸ ತಿಂಡಿ ರುಚಿಯಾಗುವುದಿಲ್ಲಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟುನಿಧಾನವೆಂದರೆ ನಡೆದು ಬರುವಪೋಷ್ಟಮ್ಯಾನ […]