ಎರಡು ಕವಿತೆಗಳು

ಕವಿತೆ

ಧನಪಾಲ ನಾಗರಾಜಪ್ಪ

ಧನ

ನಿನ್ನ
ದನಿ
ಕೇಳರಾರೂ
ನಿನ್ನ
ಪಾಡು
ನೋಡರಾರೂ
ನೆಲ, ಜಲ
ಜನ, ಮನ
ಅಂತೆಲ್ಲಾ ಯಾಕೆ‌ ಬಡಬಡಿಸುವೆ?
ಧನವೇ ಇಂಧನ
ಧನವೇ ಪ್ರಧಾನ
ಜಮಾನ ಇದರ ದೀವಾನ
ನಿನಗೆ ಅರ್ಥವಾಗದೆ ಧನು?


ಜಾಡ್ಯ

ಇಲ್ಲಿಯ ತನಕ
ಏಡ್ಸ್ ಒಂದರ ಹೊರತು
ಬಹುತೇಕ ಜಾಡ್ಯಗಳಿಗೆ
ಇಲಾಜು ಮಾಡಬಲ್ಲರು
ಈಗಿನ ವೈದ್ಯರು
ಶ್ಲಾಘನೀಯ ಸಾಧನೆಯೇ ಸರಿ

ಜಾತಿಯ ಅಹಂ ಕೂಡಾ
ಮಾರಕ ಜಾಡ್ಯ ಅಲ್ಲವೆ?
ದೂರವಿರಿ ಇದು ಸಾಂಕ್ರಾಮಿಕ
ಮುಂದೆ ಎಂದಾದರೂ
ಏಡ್ಸಿಗೂ ಸಹ
ಔಷಧ ಕಂಡುಹಿಡಿಯಬಹುದೇನೋ!
ಆದರೆ ಜಾತಿಯ ಜಾಡ್ಯಕ್ಕೆ
ಮದ್ದು ಅದೆಂದು ಸಿಗುವುದೋ ಧನು?

***************************************

Leave a Reply

Back To Top