ಅಸಹನೆ

ಕವಿತೆ

ಅಸಹನೆ

Road to nowhere. Woman walking in fog nature, on the middle a mo stock image

ಭಾಗ್ಯ ಸಿ.

ಯಾರೊಂದಿಗೆ ಅಸಹನೆ ಏತಕ್ಕಾಗಿ
ಬೂದಿ ಮುಚ್ಚಿದ ಕೆಡದಂತೆ ಕೋಪ
ಸ್ಥಾನಪಲ್ಲಟವಾಗಿವೆ ಜಡ ವಸ್ತುಗಳು
ಮನಸ್ಸಿನ ತುಂಬೆಲ್ಲ ಅಶಾಂತತೆಯ ಛಾಯೆ

ಸಾಗುತ್ತಿರುವ ದಾರಿ‌ ಮುಟ್ಟುವುದೆಲ್ಲಿಗೆ
ಪರಿಶ್ರಮವಿಲ್ಲದೆ ಯಶಸ್ಸಿನ ಬಯಕೆ ಏಕೆ?
ಅಂಧರೇನಲ್ಲ ಬಿದ್ದರು ಮೇಲೆಳಬಹುದು
ಸ್ವಚ್ಛಂದವಾಗಬೇಕು ಜಿಗುಟುತನ ತೊರೆದು

ಬಿರುಗಾಳಿ ಯಿಂದ ಅಸ್ತವ್ಯಸ್ತ ಜೀವನ
ವಿವೇಚನೆಯಿಲ್ಲದ ಹುಚ್ಚು ನಿರ್ಧಾರ
ವೈರುಧ್ಯಗಳ ನಡುವೆ ಋಣಾತ್ಮಕತೆ
ಜಂಟಿ ಹೋರಾಟ, ಹೊರನಡೆ ಶೀಘ್ರದಲಿ

ತಲೆಹರಟೆ ಪ್ರಕ್ರಿಯೆಗಳ ತೊರೆದು
ಭ್ರಮಾ ಲೋಕ ಬಿಟ್ಟು ವಾಸ್ತವದೆಡೆಗೆ
ನಡೆ ತನ್ನ ಉಳಿವಿನ ಬೆಳಕಿನೆಡೆಗೆ
ಅಸಹನೆ ತೊರೆದು ಮಿನುಗುವ ನಕ್ಷತ್ರವಾಗಿ

**********************************************

6 thoughts on “ಅಸಹನೆ

Leave a Reply

Back To Top