ಕವಿತೆ
ಬಾಳ ಬೆಳಕೇ..
ವೀಣಾ ಪಿ.
ಸುಧೆಗಡಲ ಸೊಗದೊಡಲ
ಸವಿ ಆತ್ಮ ಚೇತನದ
ಹಾಲು ಗಲ್ಲದ
ಹದ ಭಾವವೇ.
ಹೊಳೆವ ನಕ್ಷತ್ರದ
ಮಿನುಗು ಕಣ್ಗಳ ಮಿಂಚೇ..
ಮುಗ್ಧತೆಯು ಮೈವೆತ್ತ
ಮುದ್ದು ಮಾಟದ
ಬೊಂಬೆಯೇ..
ಬೆಳಕು ಬೃಂದಾವನದ
ಎಳೆ ತಳಿರು ತೋರಣದ
ಚಿಗುರೊಡೆದ
ಹಸಿರೇ..
ಹೊಸ ವರಸೆಯ
ಭರವಸೆಯನು
ಮೆಲ್ಲನರಳಿ ಮುಡಿಸುವ
ನಗೆ ಮಲ್ಲಿಗೆ ಮೃದು ದಂಡೆಯೇ..
ಕತ್ತಲೆಯ ಕಾರ್ಮೋಡ
ಕಳೆದು ಬೆಳಕಾಗುವ
ಬೆಳ್ಳಿ ಬೆಳದಿಂಗಳೇ..
ನಿನ್ನಿಂದಲೇ ಬೆಳಕು ಬಾಳ್ಗೆ…
*********************************************