ಕವಚದಲ್ಲಿ ಭದ್ರ

ಕವಿತೆ

ಕವಚದಲ್ಲಿ ಭದ್ರ

ತಮ್ಮಣ್ಣ ಬೀಗಾರ

Seed Pods - Art with Miss Wilson

ಕವಚದಲ್ಲಿ ಭದ್ರ…
ಅದು ಯಾವಾಗ ಹೋಗುತ್ತದೆ
ಅಥವಾ ಹೋಗುವುದಿಲ್ಲವೆಂದು
ಹೇಳುವುದು ಹೇಗೆ…
ನನಗಂತೂ ಬಂದಿದೆ ಕಾಯಿಲೆ
ಮರದ ಬೇರು ಕೊಳೆಯುವಷ್ಟು
ಮಳೆಯಾದರೆ ಚಿಗುರುವುದು ಯಾವಾಗ…
ತಲೆಯ ತುಂಬಾ ಕೆಲಸ ತುಂಬಿಕೊಂಡಿದೆ
ಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆ
ಕಟ್ಟಿ ಹಾಕಿದೆ…
ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದ
ಕಂದ… ದಿನವೂ ನನ್ನೊಂದಿಗೆ
ಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆ
ಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿ
ಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲ
ಆದರೂ ಕಾಯ್ದುಕೊಂಡಿಲ್ಲ ಅಂತರ
ರೋಗ ಹರಡುತ್ತಲೇ ಇದೆ
ಇವಳು ಯುಟ್ಯೂಬ್ ನೋಡಿ ಮಾಡುವ
ಹೊಸ ತಿಂಡಿ ರುಚಿಯಾಗುವುದಿಲ್ಲ
ಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟು
ನಿಧಾನವೆಂದರೆ ನಡೆದು ಬರುವ
ಪೋಷ್ಟಮ್ಯಾನ ಗಿಂತಲೂ ಹಿಂದೆ
ಊರ ತುಂಬೆಲ್ಲ ಜನರಿದ್ದಾರೆ
ಎಲ್ಲರಿಗೂ ಈಗ ಬಾಯಿಗೆ ಮಾಸ್ಕ ಕಟ್ಟಿದ್ದಾರೆ
ಮತ್ತು ಕಣ್ಣೂ ಮಾತಾಡುತ್ತಿಲ್ಲ
ಸಾಲದ ಕಂತು ರಸ್ತೆಯ ಹೊಂಡ
ಮತ್ತು ಕಚೇರಿಯ ಕೆಲಸ ಹಾಗೇ ಇವೆ
ಯಾವುದೋ ಕಾಯಿಲೆಗಳಿಗೆಲ್ಲ
ತಡೆ ಹಾಕಿಕೊಂಡವರು…
ಆರಾಮ ಇದ್ದೇವೆ ಎನ್ನುತ್ತಾರೆ
ಎಲ್ಲರೂ ಕೋವಿಡ ಕವಚದಲ್ಲಿ ಭದ್ರ
ಹಲವರಿಗೆ ಜೈಲು… ಕೆಲವರಿಗೆ ರಕ್ಷಣೆ…

************************************

13 thoughts on “ಕವಚದಲ್ಲಿ ಭದ್ರ

  1. ತುಂಬಾ ಚೆನ್ನಾಗಿದೆ ಕೋರೋನಾ ತಂದಿಟ್ಟಿರುವ ಅವಾಂತರದ ಚಿತ್ರಣ

  2. ಕೊರೋನದ ಪ್ರಭಾವ-ಪರಿಣಾಮ ಯಥಾವತ್ತಾಗಿ ಅನಾವರಣಗೊಂಡಿದೆ, ಅಭಿನಂದನೆಗಳು ಸರ್.

  3. ಪ್ರಸ್ತುತ ದನಿಯಲ್ಲಿ ಕವನ ಅರ್ಥಪೂರ್ಣವಾಗಿ ಮೂಡಿ ಬಂದಿದೆ.
    ಮತ್ತೂರು ಸುಬ್ಬಣ್ಣ

Leave a Reply

Back To Top