ಕಾವ್ಯ ಲೋಕದ ರವಿತೇಜ

ಕವಿತೆ

ಕಾವ್ಯ ಲೋಕದ ರವಿತೇಜ

ಶಿವರಂಜಿನಿ ,ಎಂಆರ್ ಶಿವಣ್ಣ

ಸಾರಸ್ವತ ಅಂಗಳದಲಿ
ಮಂದಹಾಸ ಬೀರುತ
ಅರಳಿದ
ಸುಂದರ ಹೂ
ನೀವು ತಾನೆ ?
ಕಾವ್ಯ ಸುಮದಿ ಘಮ ಘಮಿಸಿದ
ನಿಮ್ಮ ಭಾವಗಳ ಐಸಿರಿಗೆ
ಸೋತವಳು ನಾನು ತಾನೆ ?

ಗೀತ ಸಂಗೀತ ಸ್ವರಗಳಲಿ
ಸುರ ತರಂಗಗಳನೇಳಿಸಿದವರು
ನೀವು ತಾನೆ ?
ಮನ ತುಂಬಿ ಅದರ ಗಾನ ರಸಸ್ವಾದ
ಸವಿಯುಣುತ ಮೈಮರೆತವಳು ನಾನು ತಾನೆ ?

ಗಾನ ಸರಸ್ವತಿಗೆ ಅಕ್ಷರ ಮಾಲೆಗಳ ತೊಡಿಸಿ,ಮಾಸದ ರವಿತೇಜ
ನೀವೇ ತಾನೆ ?
ನಿಮ್ಮಗೀತಿಕೆಗಳ ಮಂದಾರ ಚೆಂದವೆನಿಸಿ
ಮಧುರ ರಾಗಗಳ ಗುನು ಗುನುಸುತ
ಮುಗ್ಧಗೊಂಡವಳು ನಾನು ತಾನೆ?

ಜನ ಮೆಚ್ಚಿದ ಜಗ ಮೆಚ್ಚಿದ
ನಾನೂ ಮೆಚ್ಚಿದ ಕವಿ ನೀವು ತಾನೆ ?
ನಿಮಗೇ ಗೊತ್ತಿರದ ಅಭಿಮಾನಿ
ನಾನು ತಾನೆ ?

ಸಂಜೆ ಮುಂಜಾನೆಗಳ ಸೊಬಗಿನಲಿ
ಕಾವ್ಯ ಸಿರಿ ಮಂದೆಲರ ತಂಪಿನಲಿ
ಮೆರೆವ ಕೀರ್ತಿ ಶಿಖರದ ಚೆಲುವಿನಲಿ
ಸೃಜನಶೀಲ ಸಂಪನ್ನತೆಯಲಿ ನಿಂತವರು
ನೀವೆ ತಾನೆ ?
ನಿಮ್ಮೊಲುಮೆಯ ಕಾವ್ಯ ಚೆಲುವಿಗೆ ಹಾರೈಸಿ,
ನಾದಲೋಕದ ನಲುಮೆಯ ಹಿರಿಕವಿಗೆ
ನಮಿಸುತಿರುವ ಕೂಸು
ನಾನು ತಾನೆ ?
ಹಾಡ್ಬರಹಗಳ ಏರಿಳಿತಗಳಲಿ
ಲಯಗಳ ಸಂಚಲನದಿ
ಸಾಹಿತ್ಯ ರಂಗೇರಿಸಿ
ನಿಮಗೆ ಸಾಟಿಯಾದವರು
ನೀವು ತಾನೆ ?
ಅಶ್ವಮೇಧ ಯಾಗದ ಕಿಚ್ಚಿಗೆ ಬೆಚ್ಚಿ
ಮುಖವಾಡಗಳುಗುಳುವ
ಜ್ವಾಲೆಗಳಲಿ ನೊಂದರೂ
ನಿಷ್ಕಪಟತೆಯ ದೊಡ್ಡ ಹೊಳೆ ಹರಿಸುವ
ನಿಮ್ಮ ಹಿಂಬಾಲಿಸುತಿರುವೆ,
ಇದು ಸರಿ ತಾನೆ.?

***************************.
( ಡಾ.ದೊಡ್ಡರಂಗೇಗೌಡರ ಜನಮ ದಿನದಂದು ಅವರಿಗೆ ಬರೆದ ನುಡಿ ನಮನ)

Leave a Reply

Back To Top