ನಿನ್ನ ಹೆಸರು
ಬೆಳಕಿನ ಕಿರಣದಲಿ ನಿನ್ನ ಹೆಸರು.
ಗಜಲ್
ಚಂದ್ರಗೆಲ್ಲಿ ಬೆಂದೊಡಲ ಕೆಂಡದ ಚಡಪಡಿಕೆ
ತಂಬೆಲರೂ ಹೊತ್ತಿ ಸುಡುತಿದೆ ಇನ್ನಿಲ್ಲದಂತೆ
ಎರಡು ಕವಿತೆಗಳು
ಬುದ್ಧ
ಸಾಗಿದ ದಾರಿಯಲ್ಲಿ
ನಗು ಬೀಳಿಸಿಕೊಂಡು ಹೋಗಿದ್ದಾನೆ
ಬನ್ನಿ,ಎತ್ತಿಟ್ಟುಕೊಳ್ಳೋಣ
ಗಜಲ್
ಗಜಲ್ ನಯನ. ಜಿ. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ […]
ಗಜಲ್
ಗಜಲ್ ರಾಹುಲ ಮರಳಿ ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ ಸಾಕಿಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದುಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದುಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ
ನಿನ್ನ ಬೆರೆವ ಹಠ
ಮೌನದ ಮುಂಗುರುಳು ನಲಿದಂತೆ
ಅಧರಗಳು ಕಂಪಿಸಿದ ಹನಿಯಂತೆ
ಭಾವ ರೇಚನೆ.
ಬೇಡ ನಮಗೆ
ಅದರ ಗೊಡವೆ
ಅವು ನನ್ನ
ಭಾವ ಒಡವೆ ..
ಗಝಲ್
ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ
ಅನುವಾದಿತ ಅಬಾಬಿಗಳು
ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮನುಷ್ಯ ಮನುಷ್ಯನನ್ನೇ ದ್ವೇಷಿಸುವಂತೆಭೇದಭಾವಗಳನ್ನು ಸೃಷ್ಟಿಸುತ್ತಅಮಾಯಕ ಜನರನ್ನು ಹಿಂಸಿಸುತ್ತಹಕೀಮಾಮೇಕೆಬಣ್ಣದ ಹುಲಿಗಳಾಗಿ ಹೊಂಚುಹಾಕಿದರಲ್ಲಾ! ೧೪)ವೇಷಧಾರಣೆಗಳೇ ಗುರುತುಗಳಾದವೆಮನುಷ್ಯ ಮನುಷ್ಯತ್ವ ಏನಾಯಿತು?ಪಶುವಿಗಾಗಿ ಪರದಾಡುತ್ತಿವೆಯಾ?ಹಕೀಮಾದೇಶದಲ್ಲಿ ಪಶುಗಳು ರಾಜ್ಯವೆ? ೧೫)ದೇಶದಲ್ಲಿ ಕಳ್ಳರು ಹೆಚ್ಚಾಗಿದ್ದಾರೆದೇಗುಲಗಳಲ್ಲಿನ ದೇವರುಗಳೇ ಇವರ ಗುರಿಅಧಿಕಾರಿದಲ್ಲಿ ಹೂ ಇದ್ದರೆ ಇಷ್ಟೇನಾ?ಹಕೀಮಾ
ಬಚ್ಚಿಟ್ಟಿರುವೆ
ಕಾವ್ಯ ಸಂಗಾತಿ ಬಚ್ಚಿಟ್ಟಿರುವೆ ಲಕ್ಷ್ಮಿ ಕೆ ಬಿ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಮಳೆ ಚಳಿಗೆನಡುಗದಂತೆಉರಿಬಿಸಿಲಿಗೆ ಒಣಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಸದಾ ನಗುವಕಾಮನಬಿಲ್ಲಿನ ಬಣ್ಣಮಾಸದಂತೆ ಹೊಳೆವ ನಿನ್ನಕಂಗಳ ಚೆಲುವುಮರೆಯಾಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಜಗದ ಬಂಧಮುಗಿಸೋ ಗಳಿಗೆಯಲ್ಲೂಜೊತೆ ನಡೆವಂತೆ ಅಣಿಮಾಡಲು ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ….ಒಲವಿಂದ….