ಗಜಲ್

ಗಜಲ್

ರಾಹುಲ ಮರಳಿ

ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ‌‌ ಸಾಕಿ
ಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ

ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲ
ಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ

ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದು
ಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ

ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದು
ಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ

ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆ
ಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ


Leave a Reply

Back To Top