ಕಾವ್ಯ ಸಂಗಾತಿ
ನಿನ್ನ ಹೆಸರು
ಅಕ್ಷತಾ ಜಗದೀಶ್


ಮುಂಜಾನೆಯ ಇಬ್ಬನಿ ಹನಿಗಳು
ಬರೆದಿದೆ ಚಿಗುರೆಲೆಯ ಮೇಲೆ
ನಿನ್ನ ಹೆಸರು…
ನಾ ಏನ ಹೇಳಲಿ
ಚಿಲಿಪಿಲಿ ಹಕ್ಕಿಗಳ ನಾದದಲಿ
ಕೇಳುತಿದೆ ನಿನ್ನ ಹೆಸರು..
ನನ್ನೆದೆಯ ಪುಟಗಳಲಿ
ನೆನಪಿನ ಆಳದಲಿ
ಮೂಡಿದೆ ನಿನ್ನ ಹೆಸರು…

ರವಿ ಇಣುಕಿ ನೋಡಿರಲು
ಬೆಳಕಿನ ರೇಖೆಯ ಮೇಲೆ
ಕಾಣುತಿದೆ ನಿನ್ನ ಹೆಸರು…
ಬಾಳ ಸಂಗಾತಿ ಆದೆ
ಸಪ್ತಪದಿಗೆ ಜೊತೆಯಾದೆ
ನನ್ನಂತರಾಳದಲಿ ನಿನ್ನ ಹೆಸರು..
ನೀನಿರದೆ ನಾನಿಲ್ಲ
ನೀನಿರದೆ ಬಾಳಿಲ್ಲ
ಬಾಳ ಪುಟದಲಿದೆ ನಿನ್ನ ಹೆಸರು..
ಭಾವನೆಗಳಿಗೆ ದೀವಟಿಕೆಯಾದೆ
ಜೀವಕ್ಕೆ ಜ್ಯೋತಿ ಆದೆ
ಬೆಳಕಿನ ಕಿರಣದಲಿ ನಿನ್ನ ಹೆಸರು..
ನೀ ನನ್ನ ಜೊತೆಯಾದೆ
ಕನಸುಗಳಿಗೆ ಸ್ಪೂರ್ತಿಯಾದೆ
ನನ್ನ ಹೆಸರಿನ ಮುಂದೆ
ಎಂದಿಗೂ ನಿನ್ನ ಹೆಸರು…
