ಗಜಲ್

ಕಾವ್ಯ ಸಂಗಾತಿ

ಗಜಲ್

ಮಂಡಲಗಿರಿ ಪ್ರಸನ್ನ

ಯಾಕೋ ಈಸೆಳೆತ ಕಾಡುತಿದೆ ಇನ್ನಿಲ್ಲದಂತೆ
ಮೈಮನ ನಿಷ್ಕ್ರಿಯ ಮಾಡುತಿದೆ ಇನ್ನಿಲ್ಲದಂತೆ

ಕಣ್ಣರೆಪ್ಪೆ ಅಪ್ಪಿಕುಳಿತ ಜೀವದೊಲುಮೆ ನೋಟ
ಎದೆಗಿಳಿವಲ್ಲಿ ಏನೋ ಬೇಡುತಿದೆ ಇನ್ನಿಲ್ಲದಂತೆ

ದುಂಬಿಯ ತೆರದಿ ಮಧುಹೀರಿ ಓಡಲಾರದು
ನೇಹವನೆ ಬಯಸಿ ಕೂಡುತಿದೆ ಇನ್ನಿಲ್ಲದಂತೆ

ಚಂದ್ರಗೆಲ್ಲಿ ಬೆಂದೊಡಲ ಕೆಂಡದ ಚಡಪಡಿಕೆ
ತಂಬೆಲರೂ ಹೊತ್ತಿ ಸುಡುತಿದೆ ಇನ್ನಿಲ್ಲದಂತೆ

ಕನವರಿಕೆಯಲು ಮುಗಿಯದ ಇರುಳು ‘ಗಿರಿ’
ನಿತ್ಯವು ನೋವನೆ ಹಾಡುತಿದೆ ಇನ್ನಿಲ್ಲದಂತೆ


1 thought on “ಗಜಲ್

Leave a Reply