ಅನುವಾದ ಸಂಗಾತಿ
ಅನುವಾದಿತ ಅಬಾಬಿಗಳು
ಆಕರ : ಕಾಲಂ ಸಾಕ್ಷಿಗಾ
(ತೆಲುಗು ಅಬಾಬಿಗಳ ಸಂಕಲನ)
ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
೧೩)
ಮನುಷ್ಯ ಮನುಷ್ಯನನ್ನೇ ದ್ವೇಷಿಸುವಂತೆ
ಭೇದಭಾವಗಳನ್ನು ಸೃಷ್ಟಿಸುತ್ತ
ಅಮಾಯಕ ಜನರನ್ನು ಹಿಂಸಿಸುತ್ತ
ಹಕೀಮಾ
ಮೇಕೆಬಣ್ಣದ ಹುಲಿಗಳಾಗಿ ಹೊಂಚುಹಾಕಿದರಲ್ಲಾ!
೧೪)
ವೇಷಧಾರಣೆಗಳೇ ಗುರುತುಗಳಾದವೆ
ಮನುಷ್ಯ ಮನುಷ್ಯತ್ವ ಏನಾಯಿತು?
ಪಶುವಿಗಾಗಿ ಪರದಾಡುತ್ತಿವೆಯಾ?
ಹಕೀಮಾ
ದೇಶದಲ್ಲಿ ಪಶುಗಳು ರಾಜ್ಯವೆ?
೧೫)
ದೇಶದಲ್ಲಿ ಕಳ್ಳರು ಹೆಚ್ಚಾಗಿದ್ದಾರೆ
ದೇಗುಲಗಳಲ್ಲಿನ ದೇವರುಗಳೇ ಇವರ ಗುರಿ
ಅಧಿಕಾರಿದಲ್ಲಿ ಹೂ ಇದ್ದರೆ ಇಷ್ಟೇನಾ?
ಹಕೀಮಾ
ಸಂಗಾತಿ ಬಳಗಕ್ಕೆ ಧನ್ಯವಾದಗಳು