ಕಾವ್ಯ ಸಂಗಾತಿ
ಎರಡು ಕವಿತೆಗಳು
ಬಿ.ಶ್ರೀನಿವಾಸ
ಅಪವಿತ್ರದವನು
.
ಯುದ್ಧಭೂಮಿ
ಪವಿತ್ರ ಎನ್ನುವುದಾದರೆ
ನಾನು
ಅಪವಿತ್ರದವನು
ಸಸ್ಯಾಹಾರ
ಪವಿತ್ರ ಎನ್ನುವುದಾದರೆ
ನಾನು ಅಪವಿತ್ರದವನು
ಭಾರತವನ್ನು ಪ್ರೀತಿಸುವವರೆಲ್ಲ
ಭಾರತೀಯರು ಎನ್ನುವುದಾದರೆ
ಮರ್ಯಾದೆ ಹತ್ಯೆ, ಅಸ್ಪೃಶ್ಯತೆ ಬೇಗೆಯ ಭಾರದ ಭಾರತದಲಿ
ನಾನು ಅನ್ಯನೆ?
ಅಪವಿತ್ರನೆ?
ಪ್ರಶ್ನೆಗಳ ಸುರಿಮಳೆಯಲ್ಲೂ
ದಾರಿ ಕಾಣಿಸುತಿದೆ
ಬುದ್ಧ
ಸಾಗಿದ ದಾರಿಯಲ್ಲಿ
ನಗು ಬೀಳಿಸಿಕೊಂಡು ಹೋಗಿದ್ದಾನೆ
ಬನ್ನಿ,ಎತ್ತಿಟ್ಟುಕೊಳ್ಳೋಣ.
*********************
ಬೆತ್ತಲು
ಹೌದು,
ನಾನು ಕಪ್ಪು
ನಾನು ದಲಿತ
ನಾನು ಕತ್ತಲು
ನನ್ನ
ಎದುರು
ಲೋಕವೇ ಬೆತ್ತಲು!
Superb Sir
Meaningful and mind blowing sir..
ತೀಕ್ಷ್ಣ ವಾದ ಸಕಾಲಿಕ ಕವಿತೆ