ಕಾವ್ಯ ಸಂಗಾತಿ
ಬಚ್ಚಿಟ್ಟಿರುವೆ
ಲಕ್ಷ್ಮಿ ಕೆ ಬಿ
ಬಚ್ಚಿಟ್ಟಿರುವೆ
ನಿನ್ನ ಹೃದಯವ
ನನ್ನ ಹೃದಯದೊಳಗೆ
ಮಳೆ ಚಳಿಗೆ
ನಡುಗದಂತೆ
ಉರಿಬಿಸಿಲಿಗೆ ಒಣಗದಂತೆ
ಬಚ್ಚಿಟ್ಟಿರುವೆ
ನಿನ್ನ ಹೃದಯವ
ನನ್ನ ಹೃದಯದೊಳಗೆ
ಸದಾ ನಗುವ
ಕಾಮನಬಿಲ್ಲಿನ ಬಣ್ಣ
ಮಾಸದಂತೆ
ಹೊಳೆವ ನಿನ್ನ
ಕಂಗಳ ಚೆಲುವು
ಮರೆಯಾಗದಂತೆ
ಬಚ್ಚಿಟ್ಟಿರುವೆ
ನಿನ್ನ ಹೃದಯವ
ನನ್ನ ಹೃದಯದೊಳಗೆ
ಜಗದ ಬಂಧ
ಮುಗಿಸೋ ಗಳಿಗೆಯಲ್ಲೂ
ಜೊತೆ ನಡೆವಂತೆ ಅಣಿಮಾಡಲು
ಬಚ್ಚಿಟ್ಟಿರುವೆ
ನಿನ್ನ ಹೃದಯವ
ನನ್ನ ಹೃದಯದೊಳಗೆ….ಒಲವಿಂದ….