ಕಾವ್ಯ ಸಂಗಾತಿ
ಭಾವ ರೇಚನೆ.
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ನನ್ನ ಭಾವಗಳು
ನಿನ್ನ ಕಾಡುವುದಿಲ್ಲ
ನಿನ್ನ ಮುಟ್ಟಿ
ತಡುವುದಿಲ್ಲ
ಬಿಟ್ಟುಬಿಡು
ಅವುಗಳ
ಅದರಪಾಡಿಗೆ
ನಕ್ಕು ನಲಿದು
ಕುಣಿದು ಕುಪ್ಪಳಿಸಿ
ಹಾಡಿ ಹರಸಿ
ಪ್ರೀತಿಯಿಂದ
ಇದ್ದುಬಿಡಲಿ
ಯಾರನ್ನು
ಶಪಿಸಿದ
ಯಾರಿಗೂ
ನೋವುಂಟು
ಮಾಡದ
ಸದಾ ಒಳಿತು
ಬಯಸುವ
ನನ್ನ ಭಾವಗಳು
ನನ್ನ ವ್ಯಕ್ತಿತ್ವದ
ತೇಜಪುಂಜಗಳು
ತಮಗೊಲಿದಂತೆ
ತಮಗನಿಸಿದoತೆ
ಬದುಕಲಿ
ಬೇಡ ನಮಗೆ
ಅದರ ಗೊಡವೆ
ಅವು ನನ್ನ
ಭಾವ ಒಡವೆ ..