Category: ಕಾವ್ಯಯಾನ

ಕಾವ್ಯಯಾನ

ವೀಣಾ ನಿರಂಜನರವರ ಕವಿತೆ

ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ […]

ತರಹಿಗಜಲ್

ಅವಳು ಅಬಲೆಯಲ್ಲ ಸಬಲೇ ಈ ಜಗದ ಸೃಷ್ಟಿಯ ಕಾರಣ ಕರ್ತೆ ಅವಳು
ಜನನಿಗೆ ಅನಾಥಾಶ್ರಮದಿ ನೋಯಿಸುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಅವಳ ನಗೆ ನಾದ.

ಅವಳ ಹಿತ ಬಯಸಿ ಒಲವ ಹನಿಸಿ
ಪೂಜಿಸುವ ಭಕ್ತೆ ನಾನು
ಕಲ್ಲಾಗಿ ದೂರದಲೆ ಉಳಿದು
ಕಾಣದಂತಿರುವ ಅಭಯ ಹಸ್ತ ಅವ

ಅನ್ನದಾತ

ಬೊಬ್ಬೆಯೆದ್ದ ಅಂಗೈಗೆ ಮದ್ದು ಮಾಡುವಷ್ಟಿಲ್ಲ
ಬೋಳು ನೆಲದಲಿ ಚಿಗುರೊಡೆದ ಹರುಷಕೆ
ಬೌದ್ಧಿಕವಾಗಿ ಅಕ್ಷರ ದಕ್ಕಿಲ್ಲದಿದ್ದರೂ ಪದಕಟ್ಟಿ ಹಾಡ್ಯಾನು

ವಿಪರ್ಯಾಸ

ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ ಗೊತ್ತಾಗದಂತೆ ನೇಗಿಲಸರಿಸಿ, ಮ್ಯಾರಿ ಹಿಗ್ಗಿಸಿಮತ್ತೊಬ್ಬನ ಹೊಲ ಆಕ್ರಮಿಸುವರೈತನೊಬ್ಬನ ನಡುಹೊಲವೆಬೀಳುಬಿದ್ದು ಬೋಳಾಗುವುದು! ಕಚ್ಚೆ ಬಿಚ್ಚಿದ ಹುಂಬನಂತೆಕಂಡ ಹೆಣ್ಣುಗಳ ಕಾಮಿಸುವಚಪಲ ಗಂಡಸಿನ ಮನೆಗೆಅವನಿಗೇ ತಿಳಿಯದೆ ಅದೆಷ್ಟೋಗಂಡಸರು ರಾತ್ರಿ ದಾಳಿಯಿಡುವರು! ತೂಕದಲ್ಲಿ, ಲೆಕ್ಕದಲ್ಲಿ ಮತ್ಯಾವುದೊಮೋಸದ ಹಾದಿಯಲ್ಲಿ ಕೋಟಿ ಗಳಿಸಿಮಹಲು ಕಟ್ಟಿ ಮೆರೆದ ಶೇಟುಬೀಪಿ, ಶುಗರಿಗೆ ಬಂಧುವಾಗಿ, ಇದ್ದೊಬ್ಬಇಪ್ಪತ್ತೊಂದರ ಮಗನ ಸಾವು ನೋಡುವನು! ನಿನ್ನದಲ್ಲದ ದೇಹದ ದಾಹಕೆಮನ ಬಯಸುವ ಮೋಹಕೆ ಸೋತುಮಾನವ […]

Back To Top