ತರಹಿಗಜಲ್

ತರಹಿಗಜಲ್-೨೭೯
ಮಿಸ್ರಾ-ಪ್ರೇಮಾ ಹೂಗಾರ ಬೀದರ
.

ಸಿದ್ಧರಾಮ ಹೊನ್ಕಲ್

ArtStation - rama sita agni pariksha, Gururaj Bhandari

ಅಕ್ಕನ ಬಿಕ್ಕುಗಳೆಲ್ಲ ಸಿಕ್ಕಲ್ಲಿ ಹರಡುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಅಕ್ಕನ ಬಿಕ್ಕುಗಳೆಲ್ಲ ಸಿಕ್ಕಲ್ಲಿ ಹರಡುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ
ಜಗದ ಮಹಿಳೆಯರ ಆ ನೋವು ಕೇಳುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಮನೆಯ ಒಳ ಹೊರಗೂ ಒಂದೊಂದು ಕಥೆ ಯಾರಲ್ಲಿಲ್ಲ ಸುಂದರ ಕವಿತೆ
ಮಾತಿನ ಗಾಯಕೆ ರಕ್ತದ ಹನಿ ಜಿನುಗುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಅನುಮಾನ ಅಪಮಾನದ ಆ ಬೆಂಕಿಯಲ್ಲಿ ಬೇಯುತಿರುವ ಸೀತೆ ದ್ರೌಪದಿಯರು
ಹೆಣ್ತನವ ಮೂಸಿ ಎಸೆದಾಗ ಕಣ್ಣೀರಾಗುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಹೆಣ್ಣು ಅಬಲೆ ತಂದೆ ಪತಿ ಮಕ್ಕಳ ಆಶ್ರಯದಿ ಇರಬೇಕೆಂದನು ಮನು
ಕಾಯುವ ಕೈಗಳೇ ಭ್ರೂಣದಲಿ ಹಿಸುಕುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಅವಳು ಅಬಲೆಯಲ್ಲ ಸಬಲೇ ಈ ಜಗದ ಸೃಷ್ಟಿಯ ಕಾರಣ ಕರ್ತೆ ಅವಳು
ಜನನಿಗೆ ಅನಾಥಾಶ್ರಮದಿ ನೋಯಿಸುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

ಅಕ್ಕ ಕೌಶಿಕನ ಧಿಕ್ಕರಿಸಿ ಬಿಕ್ಷಾನ್ನ ಹಳ್ಳ ದೇಗುಲ ನಂಬಿ ಬಂದು ಕದಳಿ ಸೇರಿದಳು
ಹೊನ್ನು’ಕೆಂಪು ದೀಪದಡಿ ನಿತ್ಯ ಹೂ ಬಾಡುತ್ತಿವೆ ಯಾರಿಗೆ ನೀಡಲಿ ದೂರು ಸಾಕಿ

=====

One thought on “ತರಹಿಗಜಲ್

Leave a Reply

Back To Top