ಕವಿತೆ
ಹೆಗಲಿಗೆ ಒರಗಿ.
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ನೆನಪಿಸಿಕೊಂಡು ನೋಡು
ಒಲಿದು ಬಳಿಗೆ ಬರುವೆ
ನಿನ್ನಲ್ಲೇ ನನ್ನ ಹುಡುಕುವೆ
ಕಣ್ಣು ತೆರೆದು ಓದುವ ಮುನ್ನ
ಕನಸಿನಂತೆ ಮರೆಯಾಗುತ್ತಿರುವೆ
ನಿನಗೆಂದೇ ನನ್ನ ಭಾವ
ಜೋಪಾನವಾಗಿರಿಸಿರುವೆ
ನಾವು ಹರಟಿದ
ಮಾತಿನ ನೆರಳು
ಹೇಳಿಕೊಂಡವು
ನೂರು ಕಥೆಯ
ಕುದುರಿ ಹೋಯಿತು ಭಾವ
ಆಗಲೇ ಸ್ನೇಹ-ಪ್ರೀತಿ
ಗಮಿಸಿ ರಮಿಸಿ
ಅಂಗೈಯ್ಯ ಬೆಚ್ಚಗೆ ಇರಿಸು
ನನ್ನ ಬೆರಳು ನಿನ್ನ ಕೈಯಲ್ಲಿ
ನಿನ್ನ ಹೆಗಲಿಗೆ ಒರಗಿ
ಹಗಲ ಮರೆಯುವೆ
ಜೀವ ಜಂಜಾಟ ತೊರೆಯುವೆ
ನನ್ನ ಮೊದಮೊದಲ
ಕನಸು ನೀನು
ನನ್ನ ಮಧುರವಾದ
ಭಾವಗಳೆಲ್ಲ ಬೆರೆತು ಕೊಂಡವು
ನಿನ್ನ ಮಾತುಗಳಲ್ಲಿ
ಚದುರದಂತ ನೆನಪು ನಿನದು
ಚದುರದೇ ಇರಲಿ
ಕೊನೆಯವರೆಗೂ
*************************************
Really heart touching. In fact remembers me of my days. Days bygone are very sweet to remember. That golden time never ever repeats. But still… She lingers.