ಕಾವ್ಯಯಾನ
ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು […]
ಕಾವ್ಯಯಾನ
ಅನ್ವೇಷಾ ರಶ್ಮಿ ಕಬ್ಬಗಾರ ಅನ್ವೇಷಾ ೧ ಮತ್ತೆ ಹೊಸದಾಗಿ ನಿನ್ನ ಪ್ರೀತಿಸ ಬೇಕೆಂದಿದ್ದೇನೆ ನೀ ನನ್ನ ಮಹತ್ವಾಕಾಂಕ್ಷೆಯೋ ಹಳೇ ಪ್ರೇಮಿಯೋ ಪತ್ತೆ ಮಾಡಬೇಕಿದೆ ೨ ಇಲ್ಲ ಮತ್ತೆ ಮತ್ತೆ ನಿನ್ನ ಕಾಯಿಸುವ ಇರಾದೆಯಿಲ್ಲ ಸೀದ ಇಳಿದು ಮನವೊಲಿದಲ್ಲಿ ಮಳೆ ಕರೆದು ಮೊಳೆವೆ ೩ ರಾಗ ರಂಜನೆ ಧ್ಯಾನ ಸಾಧನೆಗೆಲ್ಲ ವ್ಯವಧಾನವಿಲ್ಲೀಗ ಇದು ಕವಿ ಹುಟ್ಟುವ ಪದ ಪಾದ ನಾಭಿಯೊಳ್ ಮುಟ್ಟುವ ಖುಷಿ ಋಷಿ ಮೊಟ್ಟೆಯೊಡೆದುಟ್ಟುವ ಮುಂಜಾವು ಮತ್ತೀಗ ಗಾಳಿಗೆ ಬೆಂಕಿ ಎದುರಾದಂತೆ ಎದು […]
ಕಾವ್ಯಯಾನ
ಗಝಲ್ ರೇಮಾಸಂ ಡಾ.ರೇಣುಕಾತಾಯಿ.ಎಂ.ಸಂತಬಾ ಸುಳ್ಳು ಶಬ್ದಗಳ ಪೋಣಿಸಿ ಸರಮಾಲೆ ಹಾಕದಿರು ಗೆಳೆಯ/ ಪೊಳ್ಳು ಮಾತಿನಲಿ ಸಿಲುಕಿಸಿ ಬಲೆಯ ಬೀಸದಿರು ಗೆಳೆಯ// ಚಂದಿರ ನಕ್ಕಾನು ನಕ್ಷತ್ರಗಳನು ಪಿಡಿದು ಮುಡಿಸುವ ಪರಿಗೆ/ ವಾಸ್ತವಕ್ಕೆ ಮರಳು ಹಗಲುಗನಸು ಕಾಣದಿರು ಗೆಳೆಯ// ಎದೆಯ ಹೊಲದಲಿ ಪ್ರೀತಿ ಬಿತ್ತಲು ಬೇಕೆನು ಕಾಣಿಕೆ/ ಧನವೇ ಮನವನು ಗೆಲ್ಲುವದೆಂದು ತಿಳಿಯದಿರು ಗೆಳೆಯ// ವಾಸ್ತವಿಕತೆ ಕನ್ನಡಿಯನು ಗಮನಿಸಿ ನೋಡಲಾರೆಯೇನು/ ಪ್ರೇಮದಲಿ ಮಿಂದ ಕಣ್ಣ ದೃಷ್ಟಿ ಬದಲಿಸಿದಿರು ಗೆಳೆಯ// ಉಷೆಯಿಂದ ನಿಶೆಯವರೆಗೆ ನಿನ್ನ ನೆನೆಯುವಳು ನೆನಪಿಲ್ಲವೇ/ ಪರರ ನಶೆಯಲಿ ರೇಮಾಸಂನು […]
ಶಿಶುಗೀತೆ
ಕಾಡಿನಿಂದ ನಾಡ ಪ್ರವಾಸ. ಸುಜಾತಾ ಗುಪ್ತ ಜಿಂಕೆ ಮರಿ ಜಿಂಕೆ ಮರಿ ನೀ ನನ್ನ ಮುದ್ದು ಮರಿ ನಾಡಿಗೋಗೋಣ ಬರ್ತೀಯಾ ನಾವ್ ನಾಡಿಗೋಗೋಣ ಬರ್ತೀಯಾ ಆನೆ ಮರಿ ಆನೆ ಮರಿ ನೀ ನಾಡಿಗೇಕ್ ಹೋಗ್ತೀಯ ನಾಡಿಗೋಗಿ ಏನ್ಮಾಡೋದು ನಾವ್ ಏನ್ಮಾಡೋದು.. ಶಸ್ತ್ರಧಾರಿಯಾಗಿ ಬರಲು ಮನುಜನಂದು ಹೆದರಿ ಬೆದರಿ ಪೊದೆಗಳಲ್ಲಿ ಅಡಗಿದೆವು ಸ್ವಚ್ಛಂದದೆ ಇಂದು ನಾಡು ಸುತ್ತೋಣ ನಾವ್ ನಾಡು ಸುತ್ತೋಣ.. ನಾ ಬರಲ್ಲಪ್ಪ, ಅಮ್ಮ ಕಳಿಸಲ್ಲ ಬಾಣಧಾರಿ ಬೇಟೆಗಾರ ಇಹನಲ್ಲಿ ನಂಗ್ ಭಯ ನಾ ಬರಲ್ಲ ನಾಡಿಗೆ […]
ಕಾವ್ಯಯಾನ
ಚರಿತ್ರೆ ಚಿರನಿದ್ರೆ ದೇವು ಮಾಕೊಂಡ ಜಗದ ಬಲೆ ಬಲೆಯೊಳಗಿನ ಮುಸುಕು ಸಿಕ್ಕಿಸಿಕೊಂಡ ಬದುಕ ಕೊಂಡಿ ಕಳಚಲು ಯತ್ನಿಸುವ ವೈರಾಗಿ ರಾತ್ರಿ ಹೆದರುತ್ತದೆ ಹೊರಬರಲು ಹಗಲ ಬಯಲು ನರ್ತನಕ್ಕೆ ಅನುಗಮನ ನಿಗಮನದರಿವು ಏಕಮುಖಗೊಂಡಿದೆ ಗೊಂದಲ ಜಗದಿ ದಿನ ದಿನ ನಂಬಿಕೆಗಳೆ ಬೋಣಿಗೆ ಮಾಡುವಾಗ ಬೋದಿಗೆ ಶಾಸನ ಮೌನ ಮಾತಾಗಿದೆ ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು ಮತ್ತೆ ಮತ್ತೆ ಶರಣಾಗುತ್ತಿವೆ ಅಂಧಗೋಪುರಕ್ಕೆದರಿ ನೀರವರಾತ್ರಿ ದಮನಿತ ದೀಪಗಳುರಿಸುವಾಗ ವಿಲೋಮಗಾಳಿ ಜನಜನಿತ ಅವಮಾನಿತ ! ತನ್ನೊಳಗಿನ ತನ್ನದರಿವು ಹುಡುಕುವ ಆಗುಂತಕನೊಬ್ಬ […]
ಕಾವ್ಯಯಾನ
ಆಗಬಹುದು. ಎಂ.ಆರ್.ಅನಸೂಯ ಆಗಬಹುದು ಧುಮ್ಮಿಕ್ಕುವ ಕಣ್ಣೀರು ಕೇವಲ ಕಣ್ಣಂಚಿನ ಕಂಬನಿ ಮಲಗಬಹುದು ಕೆರಳಿ ನಿಲ್ಲುವ ದ್ವೇಷ ಮೊಂಡಾದ ಮಚ್ಚಾಗಿ ಮರಗಟ್ಟಬಹುದು ಬೆಂಕಿಯುಗುಳುವ ಕೋಪವೂ ಕೊರೆವ ಹಿಮಗಡ್ಡೆಯಾಗಿ ಇಳಿಯಬಹುದು ಉಕ್ಕಿ ಹರಿವ ಉನ್ಮಾದವೂ ನೆರೆಯಿಳಿದ ನದಿಯಾಗಿ ********
ಕಾವ್ಯಯಾನ
ಗಝಲ್ ಎ ಎಸ್ ಮಕಾನದಾರ. ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ […]
ಕಾವ್ಯಯಾನ
ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, […]
ಕಾವ್ಯಯಾನ
ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಜಹಾನ್ ಆರಾ ಎಚ್. ಕೋಳೂರು ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನೇರಭಾವಕ್ಕೆ ತೂಕ ಕಡಿಮೆ ಸಾಗರದ ಆಳಗಲವಂತೆ ಆಗಸದ ಅನೂಹ್ಯವಂತೆ ನಾಜೂಕಂತೆ, ಸುಲಭವು ಅಲ್ಲವಂತೆ ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನಾನು ಬರೆದದ್ದು ಅವನೊಪ್ಪನು ಇವ ಬರೆದದ್ದು ಮತ್ತೋರ್ವನೊಪ್ಪನು ಅವರು ಬರೆದದ್ದು… ನಾ ಒಪ್ಪಬೇಕಂತೆ!!! ಭಾವ ಭಕುತಿ ಅವರಿಗೆ ಬಿಟ್ಟದು. ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ ಕಡಿಮೆ ಪದಗಳ ಪೋಣಿಕೆ ಹೆಚ್ಚು ಭಾವ ಭಾರ ತುರುಕುವಿಕೆ ಶಬ್ಧ ಮಣಿಗಳ ದರ್ಪಣದಲಿ ನಿಂತರೂ ಪಾಶ್ಚಾತ್ಯ ಸಿಂಗಾರದ […]
ಕಾವ್ಯಯಾನ
ಅರಿವು ಶಿವಲೀಲಾ ಹುಣಸಗಿ ಚಿಂತೆಯನು ಬಿಡುಮನವೇ ಕಾಯ್ವನೊಬ್ಬನಿಹನೆಮಗೆ! ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ ಕಂಬನಿಯ ಮಿಡಿಯದೆ ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ…….. ದೇಹವಿದು ನಶ್ವರವು ಬಾಳಿಕೆ ಬರದು ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ…… ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ ಕರ್ಮವೊಂದೇ ನಮಗೆ ಕೈಲಾಸ ಫಲಾಫಲಗಳು ನಿನ್ನಲ್ಲೇ ನೆಲೆಸಿ ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ…… ಜೀವಿಗಳೆದೆಯಲಿ ಕಿರಣಚಿಮ್ಮಿಸಿ ನಲಿವೆಂಬ ಹೂವನರಳಿಸಿ ಕಂಗಳೆದೆಯಲಿ ಬಿಂಬವಿರಿಸಿ ಭಾವದಾಚೆಯೆನ್ನ ಮುಕ್ತ ಗೊಳಿಸಿ…… […]