ಅರಿವು
ಶಿವಲೀಲಾ ಹುಣಸಗಿ
ಚಿಂತೆಯನು ಬಿಡುಮನವೇ
ಕಾಯ್ವನೊಬ್ಬನಿಹನೆಮಗೆ!
ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ
ಕಂಬನಿಯ ಮಿಡಿಯದೆ
ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ
ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ……..
ದೇಹವಿದು ನಶ್ವರವು ಬಾಳಿಕೆ ಬರದು
ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು
ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ
ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ……
ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ
ಕರ್ಮವೊಂದೇ ನಮಗೆ ಕೈಲಾಸ
ಫಲಾಫಲಗಳು ನಿನ್ನಲ್ಲೇ ನೆಲೆಸಿ
ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ……
ಜೀವಿಗಳೆದೆಯಲಿ ಕಿರಣಚಿಮ್ಮಿಸಿ
ನಲಿವೆಂಬ ಹೂವನರಳಿಸಿ
ಕಂಗಳೆದೆಯಲಿ ಬಿಂಬವಿರಿಸಿ
ಭಾವದಾಚೆಯೆನ್ನ ಮುಕ್ತ ಗೊಳಿಸಿ……
*********