ಶಿಶುಗೀತೆ

ಕಾಡಿನಿಂದ ನಾಡ ಪ್ರವಾಸ.

ಸುಜಾತಾ ಗುಪ್ತ

ಜಿಂಕೆ ಮರಿ ಜಿಂಕೆ ಮರಿ
ನೀ ನನ್ನ ಮುದ್ದು ಮರಿ
ನಾಡಿಗೋಗೋಣ ಬರ್ತೀಯಾ
ನಾವ್ ನಾಡಿಗೋಗೋಣ ಬರ್ತೀಯಾ

ಆನೆ ಮರಿ ಆನೆ ಮರಿ
ನೀ ನಾಡಿಗೇಕ್ ಹೋಗ್ತೀಯ
ನಾಡಿಗೋಗಿ ಏನ್ಮಾಡೋದು
ನಾವ್ ಏನ್ಮಾಡೋದು..

ಶಸ್ತ್ರಧಾರಿಯಾಗಿ ಬರಲು
ಮನುಜನಂದು
ಹೆದರಿ ಬೆದರಿ ಪೊದೆಗಳಲ್ಲಿ
ಅಡಗಿದೆವು
ಸ್ವಚ್ಛಂದದೆ ಇಂದು ನಾಡು ಸುತ್ತೋಣ
ನಾವ್ ನಾಡು ಸುತ್ತೋಣ..

ನಾ ಬರಲ್ಲಪ್ಪ, ಅಮ್ಮ ಕಳಿಸಲ್ಲ
ಬಾಣಧಾರಿ ಬೇಟೆಗಾರ ಇಹನಲ್ಲಿ
ನಂಗ್ ಭಯ ನಾ ಬರಲ್ಲ
ನಾಡಿಗೆ ನಾನೆಂದೂ ಬರಲ್ಲ..

ಹೆದರಿ ಬೇಡ ಜಿಂಕೆ ಮರಿ
ಕರೋನ ರಕ್ಕಸಕೆದರಿ ಮನುಜ
ಮನೆಯ ಬಂಧಿ ಆಗಿಹ ಬೇಡ ನಿಂಗೆ ಭಯ
ನಾಡ ಸುತ್ತಿ ಅಂದ ಚಂದ ನೋಡುವ..

ಬೇಗ ರೆಡಿಯಾಗು ಜಿಂಕೆ ಮರಿ
ಮೊಬೈಲು, ಕ್ಯಾಮೆರಾ ಹಿಡಿದು
ಹೊರಡುವ
ಸ್ವಾರ್ಥಿ ಮನುಜರ ಭಾವಚಿತ್ರ
ತೆಗೆದು ನಕ್ಕು ನಲಿಯುವ..

ಮತ್ತೆ ಮತ್ತೆ ಬಾರದಿಂತ ಒಂದು ಸುದಿನ
ಭಯವ ಮರೆತು ನೀ ಬರಲು
ನಾಡ ಸುತ್ತಿ ಬರುವ ನಾವ್
ಧೀಮಂತರೆನಿಸೋಣ ನಾವ್..

ಜಿರಾಫೆ,ಒಂಟೆ ,ಮೊಲ ಬಂದರು
ಕುಟುಂಬದೊಂದಿಗೆ
ಪ್ರವಾಸಕೆಂದು ನಾಡಿಗೆ,
ಊರು ಖಾಲಿ, ನಾಡು ಖಾಲಿಯೆಂದು ರಸ್ತೆ ಸುತ್ತಿ,
ಗೃಹ ಖೈದಿಗಳ
ನೋಡಿ ಕಿಲಕಿಲನೆ ನಗಲೆಂದು
ಬಂದರು..

*********

Leave a Reply

Back To Top