ಕಾವ್ಯ ಸಂಗಾತಿ
ವಾಣಿ ಯಡಹಳ್ಳಿ ಮಠ
ಗಜಲ್


ನಿನ್ನನು ಈ ಕಂಗಳು ಮರೆಯುವ ಮುನ್ನ ಬಂದು ಬಿಡು
ಕನಸುಗಳು ರೆಪ್ಪೆಯನು ತೊರೆಯುವ ಮುನ್ನ ಬಂದು ಬಿಡು
ಅದೆಷ್ಟೋ ದಿನಗಳಿಂದ ,ನಿನ್ನ ನೆನಪುಗಳನೇ ಉಸಿರಾಡುತಿರುವೆ
ಎದೆಬಡಿತ ಈ ಎದೆಯನೇ ಕೊರೆಯುವ ಮುನ್ನ ಬಂದು ಬಿಡು
ಹಗಲು ಹಗುರಾಗುತ್ತಿಲ್ಲ, ಇರುಳು ಮಗ್ಗಲು ಬದಲಿಸುತಿಲ್ಲ
ಹಗಲಿರುಳುಗಳ ನೋವು ಪೊರೆಯುವ ಮುನ್ನ ಬಂದು ಬಿಡು
ನೀ ಬಿಟ್ಟು ಹೋದಲ್ಲಿಯೇ ನಿಂತಿರುವೆ ಇಂದಿಗೂ ನಲ್ಲ
ಆ ಜಾಗವೂ ನಿನ್ನ ಸ್ಪರ್ಶಕಾಗಿ ಮೊರೆಯುವ ಮುನ್ನ ಬಂದು ಬಿಡು
ಕನವರಿಸುತ ಕಾಯುತಿಹಳು ‘ವಾಣಿ ‘ ಕಣ್ತುಂಬಿಕೊಂಡು ದಿನವೂ
ಬಿಸಿ ಹನಿಗಳ ಕಡಲು ಬದುಕು ಹೊರೆಯುವ ಮುನ್ನ ಬಂದು ಬಿಡು
ವಾಣಿ ಯಡಹಳ್ಳಿಮಠ



