ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಂತಿ. ಕೆ.ವೈ. ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ. ಕೆ.ವೈ. ಗಜಲ್ ಯಾರು ಯಾವಾಗ ಈ ನೆಲಕೆ ವಿದಾಯ ಹೇಳುವರೋ ಗೊತ್ತಿಲ್ಲಯಾವ್ಯಾವ ಕ್ಷಣಗಳನು ಹೇಗೆ ಕಳೆವರೋ ಗೊತ್ತಿಲ್ಲ ಬಾಲ್ಯದಾ  ಚಣಗಳ ಮರೆವರೋ ಗೊತ್ತಿಲ್ಲಅಮ್ಮನಾ ಮಡಿಲು ಮೀರಿ ಬೆಳೆವರೋ ಗೊತ್ತಿಲ್ಲ ಯೌವನದ ಉತ್ಸಾಹದಲಿ    ಎಲ್ಲವನೂ ಸಾಧಿಸುವರೋ ಗೊತ್ತಿಲ್ಲಉಲ್ಲಾಸದ ಚಣಗಳೊಂದಿಗೇಮಾಗುವರೋ  ಗೊತ್ತಿಲ್ಲ ಮಾಗಿದಾ ಹಾಗೆಲ್ಲ  ದಿನವಿಡೀ  ದುಡಿವರೋ ಗೊತ್ತಿಲ್ಲಮರೆಯಾದ ಸಂತೋಷವ ಅರಸುವರೋ ಗೊತ್ತಿಲ್ಲ ದುಡಿತದಲೆ ದಿನ  ಕಳೆದು ಬಿಡುವರೋ  ಗೊತ್ತಿಲ್ಲಸಂತಸವ ಮರೆತು ಬದುಕುವರೋ ಗೊತ್ತಿಲ್ಲ ಕಾಣೆಯಾದ ಆಪ್ತೇಷ್ಟರ ನಲ್ಮೆ ಹುಡುಕುವರೋ  ಗೊತ್ತಿಲ್ಲಹಮ್ಮು ಬಿಮ್ಮುಗಳಲ್ಲಿ ಅವಿತ ಅಕ್ಕರೆಯ ತಡಕಾಡುವರೋ ಗೊತ್ತಿಲ್ಲ ಬದುಕ ಪ್ರೀತಿಯು ಬತ್ತದಂತೆ ಕಾಯ್ದು ಉಳಿಸುವರೋ ಗೊತ್ತಿಲ್ಲ‘ಜಯೂ’ನ ಒಲವ ಒರತೆಯನು ಹೇಗೆ ಚಿಮ್ಮಿಸುವರೋ ಗೊತ್ತಿಲ್ಲ! ಜಯಂತಿ ಕೆ ವೈ

ಜಯಂತಿ. ಕೆ.ವೈ. ಅವರ ಗಜಲ್ Read Post »

ಕಥಾಗುಚ್ಛ

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಉತ್ತಮ.ಎ.ದೊಡ್ಮನಿ “ಸುಧಾ” ಕಾಂಪೌಂಡ್‌ನ ಮೂಲೆಯಲ್ಲಿ ಒಂದು ಪುಟ್ಟ ಕೋಣೆ. ಅದರಲ್ಲಿ ಒಂದು ಸ್ಟೌವ್, ಎರಡು ಪಾತ್ರೆಗಳು, ಎರಡು ತಟ್ಟೆಗಳು, ಒಂದು ಕೊಡ, ಅದರ ಮೇಲೆ ಒಂದು ಗ್ಲಾಸ್. ಗೋಡೆಗೆ ನೇತು ಹಾಕಿದ್ದ ಎರಡು ಜೋಡಿ ಬಟ್ಟೆಗಳು. ಟೇಬಲ್ ಫ್ಯಾನ್.ಓ…ಅದು ಓಡಿದಾಗ ಮನೆಯ ಯಜಮಾನನಂತೆ ಸದಾ ತಲೆ ಅಲ್ಲಾಡಿಸುತ್ತಾ ತನ್ನ ಕೆಲಸದಲ್ಲಿ ಮಗ್ನವಾಗಿರುತ್ತಿತ್ತು. ಕೋಣೆಗೆ ಯಾರಾದರೂ ಬಂದರೆ ಹಾಸಲು ಒಂದು ಸಿಂದಿ ಗಿಡದ ಹಳೆಯ ಚಾಪೆ. ಅದೇ ಚಾಪೆ ರಾತ್ರಿ ರವಿಯ ಹಾಸಿಗೆಯಾಗುತ್ತಿತ್ತು.     ರವಿ ಕಲಬುರಗಿಯಲ್ಲಿರುವ ಸಾವಿತ್ರಿಬಾಯಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕಲಬುರಗಿಯಿಂದ ಹತ್ತೊಂಬತ್ತು ಕಿಲೋಮೀಟರ್ ದೂರದ “ಕುಂಟ” ಎಂಬ ಹಳ್ಳಿಯಿಂದ ಬಂದು ತನ್ನ ಬದುಕಿನ ದಾರಿ ಹುಡುಕಿಕೊಂಡಿದ್ದ.ರವಿಯ ತಂದೆ ದ್ಯಾವಪ್ಪನಿಗೆ ಪಾರ್ಶ್ವವಾಯುಯಿಂದ ಹೊರಸಿಗೆ ಸಿಪ್ಟ್ ಆಗಿ ಈಗ ಮೂರು ವರ್ಷಗಳಾಗಿತ್ತು. ಆ ದಿನದಿಂದ ಮನೆಯ ಎಲ್ಲ ಜವಾಬ್ದಾರಿಗಳೂ ರವಿಯ ಹೆಗಲ ಮೇಲೆ ಬಿದ್ದವು. ಮನೆಯ ಹಿರಿಯ ಮಗನಾದ ಕಾರಣ ಯಾವುದಕ್ಕೂ ಇಲ್ಲವೆಂದು ಹೇಳುವ ಅವಕಾಶ ಅವನಿಗಿರಲಿಲ್ಲ. ತಂದೆಯ ಸ್ಥಾನವನ್ನು ತುಂಬುವುದು ಹಿರಿಯ ಮಗನ ಕರ್ತವ್ಯ ಎನ್ನುವ ನಂಬಿಕೆಯಲ್ಲಿ ಬೆಳೆದ ಸಮಾಜ ಇದು.      ತಾಯಿ ನಾಗಮ್ಮ ಕೂಡ ಮಗನ ಜೊತೆಯಾಗಿ ನಿಂತಳು. ಊರಲ್ಲಿ ಸಿಕ್ಕ ಕೂಲಿ ಕೆಲಸ ಮಾಡಿ ಮನೆಯ ಖರ್ಚಿಗೆ ಕೈಜೋಡಿಸುತ್ತಿದ್ದಳು. ಆದರೆ ಮನೆಯ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿತ್ತು. ತಂದೆಯ ಔಷಧಿ, ತಮ್ಮ-ತಂಗಿಯ ಓದು, ದಿನನಿತ್ಯದ ಜೀವನ—ಇವೆಲ್ಲವನ್ನೂ ಸಾಗಿಸುವುದು ದಿನದಿಂದ ದಿನಕ್ಕೆ ಕಷ್ಟವಾಗತೊಡಗಿತು.ರವಿಗೆ ಆಗ ಇನ್ನೂ ಶಾಲೆಗೆ ಹೋಗಿ ಓದಬೇಕಾದ ವಯಸ್ಸು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಅವನು ಹೇಗಾದರೂ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಎಂದು ಹಗಲು-ರಾತ್ರಿ ಶ್ರಮಿಸುತ್ತಿದ್ದ. ಗಣಿತ ಮತ್ತು ಇಂಗ್ಲಿಷ್ ಅವನಿಗೆ ಕಬ್ಬಿಣದ ಕಡಲೆಯಾಗಿದ್ದವು. ಆದರೂ ಶಿಕ್ಷಕರನ್ನು, ಟ್ಯೂಷನ್‌ಗೆ ಹೋಗುವ ಸ್ನೇಹಿತರನ್ನು ಕೇಳಿ ತನ್ನ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿದ್ದ.                 “ಒಮ್ಮೆ ಓದಿ ಕೆಲಸಕ್ಕೆ ಸೇರಿದರೆ ಸಾಕು… ಅಪ್ಪ-ಅಮ್ಮನನ್ನು ಕೆಲಸದಿಂದ ಬಿಡಿಸಬೇಕು,” ಎಂಬ ಕನಸು ಅವನ ಮನಸ್ಸಿನಲ್ಲಿ ಸದಾ ಜೀವಂತವಾಗಿತ್ತು.ಆದರೆ ವಿಧಿಯ ಲೆಕ್ಕ ಬೇರೆ ಆಗಿತ್ತು. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ತಂದೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಕೆಲಸಕ್ಕೆ ಹೋಗುವುದೇ ನಿಂತುಹೋಯಿತು. ಮನೆಯ ಸಂಪೂರ್ಣ ಹೊರೆ ನಾಗಮ್ಮನ ಹೆಗಲ ಮೇಲೆ ವರ್ಗಾವಣೆ ಆಗಿತ್ತು. ತಾಯಿಯ ಕಷ್ಟವನ್ನು ಕಣ್ಣಾರೆ ನೋಡುತ್ತಿದ್ದ ರವಿ, ಓದನ್ನು ಅರ್ಧದಲ್ಲೇ ಬಿಟ್ಟು ಕಲಬುರಗಿಗೆ ಬಂದು ವಿದ್ಯಾರ್ಥಿನಿಲಯದಲ್ಲಿ ವಾಚ್‌ಮ್ಯಾನ್ ಕೆಲಸಕ್ಕೆ ಸೇರಿಕೊಂಡ.         ಹಗಲು-ರಾತ್ರಿ ದುಡಿದು ಮನೆಯ ಖರ್ಚಿಗೆ ಕಳುಹಿಸುತ್ತಿದ್ದರೂ ಅವನ ಮನಸ್ಸಿನಿಂದ ಓದಿನ ಕನಸು ಎಂದೂ ಮಾಯವಾಗಲಿಲ್ಲ. ಪ್ರತಿ ಬೆಳಗ್ಗೆ ವಿದ್ಯಾರ್ಥಿನಿಲಯದ ಹುಡುಗಿಯರು ಸಮವಸ್ತ್ರ, ಬ್ಯಾಗ್, ಬೂಟು ಧರಿಸಿ ಶಾಲೆಗೆ ಹೋಗುವುದನ್ನು ನೋಡಿದಾಗ ಅವನ ಕಣ್ಣುಗಳಲ್ಲಿ ನೋವು ಮಿಂಚುತ್ತಿತ್ತು.“ನಮ್ಮ ಅಪ್ಪನಿಗೆ ಈ ಕಾಯಿಲೆ ಬರದೇ ಇದ್ದಿದ್ದರೆ… ನಾನೂ ಇವರಂತೆ ಶಾಲೆಗೆ ಹೋಗುತ್ತಿದ್ದೆ…” ಎಂದು ಮನದಲ್ಲೇ ಹೇಳಿಕೊಂಡು ಮೌನವಾಗಿ ನಿಂತುಕೊಳ್ಳುತ್ತಿದ್ದ.        ಸಂಜೆ ಶಾಲೆಯಿಂದ ಮರಳಿದ ಹುಡುಗಿಯರು ಅಂಗಳದಲ್ಲಿ ಕುಳಿತು ಪಾಠ ಓದುವುದನ್ನು ನೋಡುತ್ತಾ ಅವರ ಬಳಿಗೆ ಹೋಗಿ, “ಇವತ್ತು ಶಾಲೆಯಲ್ಲಿ ಏನು ಹೇಳಿದ್ರು? ಯಾವ ಪಾಠ ಮಾಡಿದರು?” ಎಂದು ಕುತೂಹಲದಿಂದ ಕೇಳುತ್ತಿದ್ದ.ಕೆಲವರು ಅವನ ಮಾತಿಗೆ ಉತ್ತರಿಸುತ್ತಿದ್ದರು. ಇನ್ನೂ ಕೆಲವರು, “ನಿನಗೆ ಅದೇಲ್ಲ ಏಕೆ? ನಿನ್ನ ಕೆಲಸ ನೋಡಿಕೋ,” ಎಂದು ತಿರಸ್ಕಾರದಿಂದ ಹೇಳುತ್ತಿದ್ದರು.ಆದರೆ ರವಿ ಯಾರ ಮೇಲೂ ಬೇಸರ ಮಾಡಿಕೊಳ್ಳಲ್ಲ. ನನ್ನ ಪಾಲಿಗೆ ಇದೆ ಬಂದಿದೆ ಎಂದು ಮಗುಳ ನಕ್ಕು ಅಲ್ಲಿಂದ ಹೋಗುತಿದ್ದ. ಅಕ್ಷರಗಳ ಮೇಲೆ ಇದ್ದ ಅವನ ಹಸಿವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು.      ವಿದ್ಯಾರ್ಥಿನಿಲಯದ ಹುಡುಗಿಯರು ಎಲ್ಲರೂ ಒಂದೇ ತರ ಇರಲಿಲ್ಲ. ಕೆಲವರು ರವಿಯನ್ನು ಕೇವಲ ವಾಚ್‌ಮ್ಯಾನ್ ಎಂದು ನೋಡುತ್ತಿದ್ದರು. ಎದುರಾದರೂ ಮಾತಾಡದೆ ಹೋಗುತ್ತಿದ್ದರು. ಇನ್ನು ಕೆಲವರು ಕೆಲಸ ಹೇಳಿ ಮುಗಿಸುತ್ತಿದ್ದರು. ಆದರೆ ಅವರಲ್ಲೊಬ್ಬಳು ಮಾತ್ರ ವಿಭಿನ್ನಳಾಗಿದ್ದಳು—ಸುಧಾ.         ಸುಧಾ ಬಿ.ಎ. ಓದುತ್ತಿದ್ದ ವಿದ್ಯಾರ್ಥಿನಿ. ಹಲವು ದಿನಗಳಿಂದ ರವಿಯನ್ನು ಗಮನಿಸುತ್ತಿದ್ದಳು. ಹುಡುಗಿಯರು ಓದುತ್ತಿರುವಾಗ ಅವನು ಅವರ ಹತ್ತಿರ ನಿಂತು ಪಾಠದ ಬಗ್ಗೆ ಕೇಳುವುದು, ಪುಸ್ತಕಗಳನ್ನು ಕುತೂಹಲದಿಂದ ನೋಡುವುದು, ಸಮಯ ಸಿಕ್ಕಾಗ ಹಳೆಯ ನೋಟ್ಸ್ ತಿರುವಿ ನೋಡುವುದು—ಇವೆಲ್ಲ ಅವಳ ಕಣ್ಣಿಗೆ ತಪ್ಪಿರಲಿಲ್ಲ.ಒಂದು ಸಂಜೆ ಅವಳು ರವಿಯನ್ನು ಕರೆದು ಕೇಳಿದಳು.“ರವಿ, ನೀನು ದಿನವೂ ಹುಡುಗಿಯರ ಹತ್ತಿರ ಹೋಗಿ ಪಾಠದ ಬಗ್ಗೆ ಕೇಳ್ತೀಯ. ಯಾಕೆ?”  ಮೊದಲು ರವಿ ಮುಜುಗರಪಟ್ಟ. “ಹಾಗೇ ಅಕ್ಕ…” ಎಂದು ತಪ್ಪಿಸಿಕೊಳ್ಳಲು ನೋಡಿದ.“ಇಲ್ಲ, ನಿಜ ಹೇಳು,” ಎಂದು ಸುಧಾ ಮತ್ತೊಮ್ಮೆ ಕೇಳಿದಳು.ಆ ಮಾತಿನಲ್ಲಿ ಪ್ರೀತಿಯಿತ್ತು, ಕಾಳಜಿಯಿತ್ತು. ರವಿ ತನ್ನ ಮನಸ್ಸಿನ ಬಾಗಿಲನ್ನೇ ತೆರೆದ.      ತಂದೆಯ ಕಾಯಿಲೆ, ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಓದು ನಿಂತದ್ದು, ಮನೆಯ ಹೊರೆ, ತಾಯಿಯ ಕಷ್ಟ, ತನ್ನ ಕನಸು—ಒಂದನ್ನೂ ಬಿಡದೆ ಎಲ್ಲವನ್ನೂ ಶಾಲಾ ಒಪ್ಪಿಸಿಬಿಟ್ಟ,ಮಕ್ಕಳು ಶಿಕ್ಷಕರಿಗೆ ಬಾಯಿಪಾಠ ಒಪ್ಪಿಸಿದಂತೆ.“ಅಕ್ಕಾ… ಓದಬೇಕು ಅನ್ನೋ ಆಸೆ ಇನ್ನೂ ಸತ್ತಿಲ್ಲ. ಆದರೆ ಮನೆಯ ಪರಿಸ್ಥಿತಿ ನನ್ನನ್ನು ಕೆಲಸಕ್ಕೆ ನಿಲ್ಲಿಸಿತು.”ಅವನ ಮಾತು ಮುಗಿಯುವಷ್ಟರಲ್ಲಿ ಸುಧಾಳ ಕಣ್ಣಲ್ಲಿ ನೀರು ಅವಳಿಗೆ ಅರಿವಿಲ್ಲದಂತೆ ಪಾದದಡಿ ಬಿದಿತ್ತು. ಒಂದು ಮಾತೂ ಆಡದೆ ಅವಳು ತನ್ನ ಕೋಣೆಗೆ ಹೋದಳು. ಆ ದಿನ ಸರಿಯಾಗಿ ಊಟವೂ ಮಾಡಲಿಲ್ಲ. ರವಿಯ ಬದುಕಿನ ನೋವು ಅವಳ ಮನಸ್ಸನ್ನು ಕದಡಿತ್ತು.      ಆದರೆ ಆ ದಿನದಿಂದ ಅವರಿಬ್ಬರ ನಡುವೆ ಒಂದು ಹೊಸ ಸಂಬಂಧ ಹುಟ್ಟಿತು. ಪ್ರತಿದಿನ ಬೆಳಿಗ್ಗೆ ಎದುರಾದರೆ ರವಿ,“ಅಕ್ಕಾ, ಊಟ ಆಯ್ತಾ?”“ಕಾಲೇಜಿಗೆ ಲೇಟಾಗೋದಿಲ್ಲವಾ?”“ಏನಾದರೂ ತರಬೇಕಿದ್ದರೆ ಹೇಳಿ. ನಾನೇ ಹೋಗಿ ತರುತ್ತೀನಿ.”ಸುಧಾ ಅವನ ಮಾತುಗಳಲ್ಲಿ ತಮ್ಮನ ಮಮತೆಯನ್ನು ಕಂಡಳು.ರವಿಗೆ ಸುಧಾಳಲ್ಲಿ ಅಕ್ಕನ ನೆರಳು ಕಾಣತೊಡಗಿತು. ದಿನಗಳು ಕಳೆಯುತ್ತಾ ಹೋದವು.     ಒಂದು ದಿನ ಕಾಲೇಜಿಗೆ ಹೊರಡುವ ಮುನ್ನ ಸುಧಾ ರವಿಯ ಬಳಿ ಬಂದು ಹೇಳಿದಳು.“ರವಿ, ನೀನು ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕು.”ರವಿ ಬೆಚ್ಚಿಬಿದ್ದ.“ಅಕ್ಕಾ… ಅದು ಈಗ ಹೇಗೆ ಸಾಧ್ಯ? ನಾನು ಕೆಲಸ ಬಿಟ್ಟರೆ ನಮ್ಮ ಮನೆಯವರು ಏನು ಹಾಲತ್!ಸುಧಾ ನಗುತ ಹೇಳಿದಳು.“ಯಾರು ಕೆಲಸ ಬಿಡು ಅಂತ ಹೇಳಿದರು? ಈಗ ನೇರ ದಾಖಲಾತಿ ಮೂಲಕ ಪರೀಕ್ಷೆ ಬರೆಯಬಹುದು. ಕೆಲಸ ಮಾಡುತ್ತಲೇ ಓದಬಹುದು.”ಆ ಮಾತು ಕೇಳಿದ ಕ್ಷಣ ರವಿಯ ಮುಖದಲ್ಲಿ ವರ್ಷಗಳ ನಂತರ ಮೊದಲ ಬಾರಿಗೆ ನಗು ಅರಳಿತು.ಅವನ ಕಣ್ಣುಗಳಲ್ಲಿ ಮತ್ತೆ ಕನಸುಗಳು ಚಿಗುರೊಡೆಯತೊಡಗಿದವು.        ಮರುದಿನವೇ ಸುಧಾ ತನ್ನ ಮಾತಿನಂತೆ  ದಾಖಲಾತಿ ಮೂಲಕ ರವಿಗೆ ಹತ್ತನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದಳು. ಬೇಕಾದ ಪುಸ್ತಕಗಳನ್ನು ತಂದುಕೊಟ್ಟಳು. ಅಷ್ಟೇ ಅಲ್ಲ, ತನ್ನ ಖರ್ಚಿನ ಹಣದಲ್ಲೇ ಪರೀಕ್ಷಾ ಶುಲ್ಕವನ್ನೂ ಪಾವತಿಸಿದಳು.”ಇನ್ನು ನೆಪ ಹೇಳಬಾರದು. ಪ್ರತಿದಿನ ಸ್ವಲ್ಪ ಹೊತ್ತಾದರೂ ಓದಬೇಕು,” ಎಂದು ನಗುತ್ತಾ ಹೇಳಿದಳು.      ಆ ದಿನದಿಂದ ರವಿಯ ದಿನಚರಿಯೇ ಬದಲಾಯಿತು.ಹಗಲು ವಾಚ್‌ಮ್ಯಾನ್ ಕೆಲಸ. ರಾತ್ರಿ ಪುಸ್ತಕ.ಸಂಜೆ ಕಾಲೇಜಿನಿಂದ ಬಂದ ನಂತರ ಸುಧಾ ಅವನಿಗೆ ಪಾಠ ಹೇಳಿಕೊಡುತ್ತಿದ್ದಳು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಂದ ನೋಟ್ಸ್ ತಂದುಕೊಡುತ್ತಿದ್ದಳು. ಯಾರಿಗೆ ಯಾವ ವಿಷಯ ಚೆನ್ನಾಗಿತ್ತೋ, ಅವರಿಂದ ಅದನ್ನೇ ರವಿಗೆ ಹೇಳಿಸುತ್ತಿದ್ದಳು.        ಗಣಿತದಲ್ಲಿ ತೊಂದರೆ ಬಂದರೆ ಒಬ್ಬಳು ನೆರವಾಗುತ್ತಿದ್ದಳು.ಇಂಗ್ಲಿಷ್ ಅರ್ಥವಾಗದಿದ್ದರೆ ಇನ್ನೊಬ್ಬಳು ಹೇಳಿಕೊಡುತ್ತಿದ್ದಳು.ವಿದ್ಯಾರ್ಥಿನಿಲಯವೇ ನಿಧಾನವಾಗಿ ರವಿಯ ಶಾಲೆಯಾಗಿ ಮಾರ್ಪಟ್ಟಿತು.ವಾರ್ಡನ್ ಕೂಡ ಅವನ ಆಸಕ್ತಿಯನ್ನು ನೋಡಿ ಪ್ರೋತ್ಸಾಹಿಸಿದರು.   “ರವಿ, ನೀನು ಪಾಸ್ ಆಗಲೇಬೇಕು. ನಿನ್ನಂಥವರೇ ಓದಿದರೆ ಅಕ್ಷರದ ಮೌಲ್ಯ ಗೊತ್ತಾಗುತ್ತದೆ,” ಎಂದು ಧೈರ್ಯ ತುಂಬಿದರು.ಆ ಮಾತುಗಳು ರವಿಗೆ ಹೊಸ ಶಕ್ತಿಯಾಯಿತು. ದಿನವಿಡಿ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ ಬೇಕಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಪುಸ್ತಕದ ಕಡೆ ಓಡುತ್ತಿತ್ತು.ಕೆಲವೊಮ್ಮೆ ಕಣ್ಣುಗಳು ನಿದ್ದೆಗೆಜಾರುತ್ತಿದ್ದವು.ಅಷ್ಟರಲ್ಲಿ ಸುಧಾಳ ಮಾತು ನೆನಪಾಗುತ್ತಿತ್ತು.“ಬದುಕು ಬದಲಾಗಬೇಕಾದರೆ ಅಕ್ಷರ ಒಂದೇ ದಾರಿ.”ಆ ಮಾತು ನೆನಪಾದ ಕೂಡಲೇ ಮತ್ತೆ ಪುಸ್ತಕ ತೆರೆದು ಓದಲು ಕುಳಿತುಕೊಳ್ಳುತ್ತಿದ್ದ.ಹೀಗೆ ತಿಂಗಳುಗಳು ಕಳೆದುಹೋದವು.     ಕೊನೆಗೂ ಪರೀಕ್ಷೆಯ ದಿನ ಬಂತು.ಪರೀಕ್ಷಾ ಕೊಠಡಿಗೆ ಕಾಲಿಡುವಾಗ ರವಿಯ ಕೈಗಳು ನಡುಗುತ್ತಿದ್ದವು.ಸುಧಾ ಅವನ ಭುಜದ ಮೇಲೆ ಕೈ ಇಟ್ಟು ಹೇಳಿದಳು.”ಭಯಪಡಬೇಡ ನಿನಗೆ ಗೊತ್ತಿರುವುದನ್ನೇ ಬರೆ, ನಿನ್ನ ಪರಿಶ್ರಮ ನಿನ್ನನ್ನು ಕೈಬಿಡುವುದಿಲ್ಲ.”ಆ ಮಾತು ರವಿಗೆ ಆತ್ಮವಿಶ್ವಾಸ ತುಂಬಿತು.         ಎಲ್ಲಾ ಪರೀಕ್ಷೆಗಳನ್ನೂ ಮುಗಿಸಿ ಫಲಿತಾಂಶಕ್ಕಾಗಿ ಕಾಯಲು ಆರಂಭಿಸಿದ.ಫಲಿತಾಂಶ ಪ್ರಕಟವಾದ ದಿನ ವಿದ್ಯಾರ್ಥಿನಿಲಯವೇ ಹಬ್ಬದ ಸಂಭ್ರಮದಲ್ಲಿತ್ತು.ರವಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.ತನ್ನ ಫಲಿತಾಂಶವನ್ನು ನೋಡಿದ ಕ್ಷಣ ಅವನ ಕಣ್ಣಲ್ಲಿ ನೀರು ತುಂಬಿತು.ಅವನು ನೇರವಾಗಿ ಸುಧಾಳ ಬಳಿ ಹೋಗಿ ಅವಳ ಕಾಲಿಗೆ ಬಿದ್ದ.”ಅಕ್ಕಾ… ಇದು ನನ್ನ ಗೆಲುವಲ್ಲ. ನಿಮ್ಮದು.”ಸುಧಾ ತಕ್ಷಣ ಅವನನ್ನು ಎಬ್ಬಿಸಿದಳು.“ಇಲ್ಲ ರವಿ… ನಾನು ದಾರಿ ತೋರಿಸಿದ್ದೇನೆ ಅಷ್ಟೇ. ನಡೆದದ್ದು ನೀನು.”       ಆ ದಿನ ವಿದ್ಯಾರ್ಥಿನಿಲಯದಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಸಂತೋಷವಿತ್ತು.ಆದರೆ ರವಿಯ ಮನಸ್ಸಿನಲ್ಲಿ ಒಂದೇ ಸಂಕಲ್ಪ ಗಟ್ಟಿಯಾಯಿತು.“ನನಗೆ ಯಾರೋ ಒಬ್ಬರು ಅಕ್ಷರ ಕೊಟ್ಟರು. ನಾನು ಕೂಡ ಮುಂದೆ ಯಾರಿಗಾದರೂ ಅಕ್ಷರದ ಬೆಳಕು ಕೊಡಬೇಕು.”ಅದೇ ಸಂಕಲ್ಪ ಮುಂದೆ ಅವನ ಬದುಕಿನ ಗುರಿಯಾಯಿತು.      ಹತ್ತನೇ ತರಗತಿಯ ಯಶಸ್ಸು ರವಿಯ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು.ಅಲ್ಲೇ ನಿಲ್ಲದೆ ಮುಂದೆ ಪಿಯುಸಿ, ನಂತರ ಟಿ.ಸಿ.ಎಚ್. ಪೂರ್ಣಗೊಳಿಸಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಮೊದಲ ನೇಮಕಾತಿ ಆದೇಶ ಕೈಗೆ ಬಂದ ದಿನ ಅವನಿಗೆ ಮೊದಲು ನೆನಪಾದದ್ದು ತನ್ನ ತಾಯಿ ನಾಗಮ್ಮ ಅಲ್ಲ, ಸುಧಾ.“ಅಕ್ಕಾ… ನಿನ್ನ ನಂಬಿಕೆ ಇಂದು ಗೆದ್ದಿದೆ,” ಎಂದು ಮನಸ್ಸಿನಲ್ಲೇ ಹೇಳಿಕೊಂಡ.        ಕೆಲ ದಿನಗಳ ಬಳಿಕ ರವಿ ಸುಧಾಳನ್ನು ಭೇಟಿಯಾಗಲು ಹೋದ. ತನ್ನ ಯಶಸ್ಸನ್ನು ಅವಳೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು.ಆದರೆ ಅವಳ ಮನೆಯ ಮುಂದೆ ಜನಸಮೂಹ ಕಂಡು ಅವನ ಹೆಜ್ಜೆಗಳು ನಿಂತವು.ಮನೆಯೊಳಗೆ ಬಿಳಿ ಬಟ್ಟೆಯಲ್ಲಿ ಮುಚ್ಚಿದ ಎರಡು ದೇಹಗಳು.ಗೋಡೆಯ ಮೇಲೆ ಹೂಹಾರ ಹಾಕಿದ ಎರಡು ಭಾವಚಿತ್ರಗಳು. ರವಿಯ ಹೃದಯ ಒಮ್ಮೆಲೆ ನಿಂತಂತಾಯಿತು. ಒಮ್ಮೆಲೇ ಕತ್ತು ಹಿಸಿಕಿ ಭೂಮಿ ಒಳಗೆ ತಳ್ಳಿದಂತೆ. ತಮ್ಮ ಮಗಳ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಸುಧಾ ಮತ್ತು ಅವಳ ಗಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.ಆ ಸುದ್ದಿ ಕೇಳಿದ ರವಿ ಅಲ್ಲೇ ಕುಸಿದು ಕುಳಿತ.“ಅಕ್ಕಾ… ನೀನು ಹೀಗೆ ಹೋಗಬಾರದಿತ್ತು…” ಎಂದು ಮಗುವಿನಂತೆ ಬಿಕ್ಕಿ ಬಿಕ್ಕಿ  ಅತ್ತ.       ಅವನ ಕಣ್ಣ ಮುಂದೆ ಒಂದೊಂದೇ ನೆನಪುಗಳು ಮಿಂಚಿದವು—ಪುಸ್ತಕ ಕೊಟ್ಟ ದಿನ, ಮೊದಲ ಪಾಠ, ಪರೀಕ್ಷಾ ಶುಲ್ಕ ಕಟ್ಟಿದ ಕ್ಷಣ, “ನೀನು ಓದಬೇಕು” ಎಂದು ಹೇಳಿದ ಧ್ವನಿ…ಎಲ್ಲವೂ ಕಣ್ಣೀರಾಗಿ ಹರಿಯಿತು.ಒಂದು ಮೂಲೆಯಲ್ಲಿ ಏನೂ ಅರಿಯದ ಪುಟ್ಟ ಮಗಳು ಕುಳಿತಿದ್ದಳು.ಅವಳೆ ಸುಧಾಳ ಮಗಳು.ಆ ಮಗುವನ್ನು ನೋಡಿದಾಗ ರವಿಯ ಮನಸ್ಸು ಮತ್ತೊಮ್ಮೆ ಒಡೆದುಹೋಯಿತು.        ಮನೆಗೆ ಹಿಂದಿರುಗಿದ ನಂತರವೂ ಅವನು ಸಹಜ ಸ್ಥಿತಿಗೆ ಬರಲಿಲ್ಲ.ಹೆಂಡತಿ ಎಷ್ಟೇ ಸಮಾಧಾನ ಮಾಡಿದರೂ ಅವನ ನೋವು ಕಡಿಮೆಯಾಗಲಿಲ್ಲ.ಒಂದು ರಾತ್ರಿ ಅವನು ಹೆಂಡತಿಯ ಮಡಿಲಲ್ಲಿ ತಲೆ ಇಟ್ಟು ಮಗುವಿನಂತೆ ಅತ್ತ.“ಈ ಬದುಕು ನನ್ನದಲ್ಲ…

“ಸುಧಾ” ಉತ್ತಮ.ಎ.ದೊಡ್ಮನಿ ಅವರ ಸಣ್ಣ ಕಥೆ Read Post »

ಕಾವ್ಯಯಾನ

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು”

ಕಾವ್ಯ ಸಂಗಾತಿ ಶ್ಯಾಮಿಲಿ ಪ್ರವೀಣ್ “ಭಾವಚಿತ್ರಗಳು” ಕೈಲೆರಡು ಭಾವಚಿತ್ರಗಳು|ಒಂದು ಬಣ್ಣದ್ದು; ಮತ್ತೊಂದು ಕಪ್ಪು-ಬಿಳುಪು;ಎರಡರಲ್ಲೂ ಒಂದೊಂದು ಭಾವಗಳು|ನಗು-ಅಳು; ಸುಖ-ದುಃಖ ಮಸುಕು-ಹೊಳಪು||ಕೆದಕಲು ಸಮಯವೂ ಬೇಕು;ನೋಡುತ್ತಾ-ನೋಡುತ್ತಾ ತಾಳೆಹಾಕುತ್ತಾ ಕೂರಲು!! ಕಪ್ಪು-ಬಿಳುಪಿನಂತಲ್ಲ ಬಣ್ಣದ್ದು;ನೋಡಿದರೆ ನೇರ-ಹಸಿರು; ದೂರ ದೃಷ್ಠಿಯ ಹಂಗಿಲ್ಲದ್ದು!ಇದ್ದವರು ಇದ್ದಾರೆ; ಇಲ್ಲದವರು ಇಲ್ಲ!ಮಾಸಿದವಲ್ಲ; ಪಕ್ಕನೆ ಗುರುತು ನೆನಪು ಎಲ್ಲಾ!! ಆದರೆ…ಬಣ್ಣದಂತಲ್ಲ ಕಪ್ಪು-ಬಿಳುಪಿನವು;ಅವು ನಿನ್ನೆಗಳು ಆಳ ಕಾಣದ ತಳದವು|ನೆನಪಾಗಲು ಗುರುತಿರಬೇಕು;ಗುರುತಾಗಲು ನೆನಪಿರಬೇಕು| ಬಣ್ಣದವು ಬದಲಾದರೂ-ಸುಣ್ಣದವು ಬದಲಾಗದು|ನಾಳೆಗಳು ಬರುತ್ತಾದರೂ; ನಿನ್ನೆಗಳು ಬರಲಾಗದು|ಹೊಸತರ ಬೇರಿನ್ನೂ ಹಳತರಲ್ಲೇ ಇದೆ|ಬಣ್ಣಕ್ಕೆ ಕಪ್ಪು-ಬಿಳುಪೇ ಮೂಲವೆಂಬಂತೆ!! ಶ್ಯಾಮಿಲಿ ಪ್ರವೀಣ್

ಶ್ಯಾಮಿಲಿ ಪ್ರವೀಣ್ ಅವರ ಕವಿತೆ “ಭಾವಚಿತ್ರಗಳು” Read Post »

ಇತರೆ, ಜೀವನ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ

ವಿಶೇಷ ಸಂಗಾತಿ “ಆತ್ಮದ ಪಯಣ” ಭೂಮಿಕಾ ಮಾದಾಪುರ ಒಂದು ಕಾಲದಲ್ಲಿ, ಎಲ್ಲೋ ಒಂದು ಕಡೆ, ಒಂದು ಆತ್ಮ ತನ್ನ ಮುಂದಿನ ಪಯಣಕ್ಕೆ ಸಿದ್ಧವಾಗುತ್ತಿತ್ತು.ಅದು ತನ್ನನ್ನೇ ಕೇಳಿಕೊಂಡಿತು—“ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಈ ಜೀವನದ ಉದ್ದೇಶವೇನು?”ಆದರೆ ಆ ಪ್ರಶ್ನೆಗೆ ಉತ್ತರ ಸಿಗುವ ಮೊದಲೇ, ಆ ಆತ್ಮವು ಒಂದು ಹೊಸ ದೇಹವನ್ನು ಪಡೆದುಕೊಂಡಿತು. ಅದು ಮಗುವಾಗಿ ಭೂಮಿಗೆ ಬಂದಿತು.ಹುಟ್ಟಿದ ಕ್ಷಣದಲ್ಲಿ ಅದು ತನ್ನ ಹಿಂದಿನ ಪಯಣವನ್ನೆಲ್ಲ ಮರೆತುಬಿಟ್ಟಿತು.ಅಮ್ಮನ ಪ್ರೀತಿ ಸಿಕ್ಕಿತು.ಅಪ್ಪನ ಮಮತೆ ಸಿಕ್ಕಿತು.ಹೊಸ ಸಂಬಂಧಗಳು ಸಿಕ್ಕವು.ಹೊಸ ಹೆಸರು ಸಿಕ್ಕಿತು. ಮಗು ಬೆಳೆದಂತೆ ಅದರ ಸುತ್ತಲಿನ ಪ್ರಪಂಚವೂ ದೊಡ್ಡದಾಯಿತು.ಶಾಲೆ, ಸ್ನೇಹಿತರು, ಆಟ, ವಿದ್ಯಾಭ್ಯಾಸ…ನಂತರ ದೊಡ್ಡವನಾದಾಗ ಅವನ ಮುಂದೆ ಮತ್ತೊಂದು ಪ್ರಪಂಚ ತೆರೆದುಕೊಂಡಿತು.ಹಣ. ಹೆಸರು. ಅಧಿಕಾರ. ಯಶಸ್ಸು. ಅವನು ಓಡಲು ಆರಂಭಿಸಿದ.“ಇನ್ನಷ್ಟು ಹಣ ಬೇಕು…”“ಇನ್ನಷ್ಟು ಹೆಸರು ಬೇಕು…”“ಇತರರಿಗಿಂತ ನಾನು ದೊಡ್ಡವನಾಗಬೇಕು…” ಅವನಿಗೆ ಸಿಕ್ಕ ಪ್ರತಿಯೊಂದು ಯಶಸ್ಸಿನ ನಂತರವೂ ಮತ್ತೊಂದು ಆಸೆ ಹುಟ್ಟುತ್ತಿತ್ತು. ಒಂದು ದಿನ ಅವನಿಗೆ ಬಹಳ ಹಣ ಸಿಕ್ಕಿತು.ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.ಅವನು ದೊಡ್ಡ ಮನೆ ಕಟ್ಟಿದ.ಆದರೆ ಮನಸ್ಸಿನೊಳಗಿನ ಖಾಲಿತನ ತುಂಬಲಿಲ್ಲ.ಅವನು ಅನೇಕ ಜನರ ಸ್ನೇಹ ಗಳಿಸಿದ.ಆದರೆ ತನ್ನನ್ನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು ಹುಡುಕಲಾಗಲಿಲ್ಲ. ಒಂದು ರಾತ್ರಿ ಅವನು ಒಬ್ಬನೇ ಕುಳಿತಿದ್ದ.ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು—“ನಾನು ಇಷ್ಟೆಲ್ಲಾ ಗಳಿಸಿದ್ದೇನೆ… ಆದರೆ ನನಗೆ ಇನ್ನೂ ಸಂತೋಷ ಯಾಕಿಲ್ಲ?” ಆಗ ಅವನೊಳಗಿಂದ ಒಂದು ಮೃದುವಾದ ಧ್ವನಿ ಕೇಳಿಸಿತು.“ಏಕೆಂದರೆ ನೀನು ಹೊರಗೆ ಹುಡುಕುತ್ತಿರುವುದು ಒಳಗಿದೆ.”ಅವನು ಬೆಚ್ಚಿಬಿದ್ದ.“ಯಾರು ಮಾತನಾಡುತ್ತಿರುವುದು?”ಧ್ವನಿ ಮತ್ತೆ ಕೇಳಿಸಿತು.“ನಾನೇ… ನಿನ್ನೊಳಗಿನ ನೀನು.” ಅವನು ತನ್ನ ಜೀವನವನ್ನು ಹಿಂದಿರುಗಿ ನೋಡಿದ.ಚಿಕ್ಕವನಾಗಿದ್ದಾಗ ಅವನು ಎಷ್ಟು ಸರಳನಾಗಿದ್ದ!ಅವನಿಗೆ ದೊಡ್ಡ ಮನೆ ಬೇಕಿರಲಿಲ್ಲ.ದೊಡ್ಡ ಹೆಸರು ಬೇಕಿರಲಿಲ್ಲ.ಹೆಚ್ಚು ಹಣ ಬೇಕಿರಲಿಲ್ಲ.ಸಣ್ಣ ವಿಷಯಗಳಲ್ಲೇ ಸಂತೋಷ ಕಂಡುಕೊಳ್ಳುತ್ತಿದ್ದ.ಆದರೆ ದೊಡ್ಡವನಾದಂತೆ ಅವನು ತನ್ನ ನಿಜವಾದ ಸ್ವಭಾವವನ್ನು ಮರೆತಿದ್ದ. ಅವನು ತನ್ನ ದೇಹವನ್ನೇ “ನಾನು” ಎಂದುಕೊಂಡಿದ್ದ.ತನ್ನ ಹೆಸರನ್ನೇ “ನಾನು” ಎಂದುಕೊಂಡಿದ್ದ.ತನ್ನ ಸಂಪತ್ತು, ಸಂಬಂಧಗಳು ಮತ್ತು ಸ್ಥಾನಮಾನವನ್ನೇ ತನ್ನ ಅಸ್ತಿತ್ವ ಎಂದು ಭಾವಿಸಿದ್ದ. ಆದರೆ ಅವನೊಳಗಿನ ಧ್ವನಿ ಹೇಳಿತು— “ದೇಹ ಬದಲಾಗುತ್ತದೆ.ಹೆಸರು ಬದಲಾಗುತ್ತದೆ.ಸಂಬಂಧಗಳು ಬದಲಾಗುತ್ತವೆ.ಸಂಪತ್ತು ಬರುತ್ತದೆ, ಹೋಗುತ್ತದೆ.ಆದರೆ ಇವೆಲ್ಲವನ್ನೂ ಗಮನಿಸುವ ನಿನ್ನೊಳಗಿನ ಚೈತನ್ಯ ಮಾತ್ರ ನಿನ್ನ ನಿಜವಾದ ಪಯಣದ ಸಂಗಾತಿ.” ಆ ದಿನದಿಂದ ಅವನು ತನ್ನ ಜೀವನವನ್ನು ಬೇರೆ ರೀತಿಯಲ್ಲಿ ನೋಡಲು ಆರಂಭಿಸಿದ. ಅವನು ತನ್ನ ಆಸೆಗಳನ್ನು ಪ್ರಶ್ನಿಸಲು ಶುರುಮಾಡಿದ.“ನನಗೆ ಇದು ನಿಜವಾಗಿಯೂ ಬೇಕೇ?”“ನಾನು ಇದನ್ನು ಪಡೆಯುವುದರಿಂದ ಶಾಂತಿ ಸಿಗುತ್ತದೆಯೇ?”“ನನ್ನ ಜೀವನದ ನಿಜವಾದ ಉದ್ದೇಶವೇನು?” ಅವನಿಗೆ ನಿಧಾನವಾಗಿ ಒಂದು ಸತ್ಯ ಅರ್ಥವಾಗತೊಡಗಿತು.ಜೀವನವೆಂದರೆ ಕೇವಲ ಹುಟ್ಟಿ, ಓದಿ, ಕೆಲಸ ಮಾಡಿ, ಹಣ ಗಳಿಸಿ, ಸಂಬಂಧಗಳನ್ನು ಬೆಳೆಸಿ, ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ.ಜೀವನವೆಂದರೆ ತನ್ನನ್ನೇ ಅರಿಯುವ ಒಂದು ಅವಕಾಶ.ಆತ್ಮದ ಪಯಣ ಹೊರಗಿನ ಜಗತ್ತಿನಲ್ಲಿ ನಡೆಯುವುದಿಲ್ಲ.ಅದು ನಮ್ಮೊಳಗೆ ನಡೆಯುತ್ತದೆ. ಮನುಷ್ಯನು ತನ್ನ ಜೀವನದ ಕೊನೆಯ ಹಂತಕ್ಕೆ ಬಂದಾಗ, ಅವನು ಗಳಿಸಿದ ಹಣ ಅವನ ಜೊತೆ ಬರುವುದಿಲ್ಲ.ಅವನ ಮನೆ ಬರುವುದಿಲ್ಲ.ಅವನ ಸ್ಥಾನಮಾನ ಬರುವುದಿಲ್ಲ.ಅವನ ಜೊತೆ ಬರುವುದು ಅವನ ಜೀವನದ ಅನುಭವಗಳು ಮತ್ತು ಅವನು ಅರಿತ ಸತ್ಯ ಮಾತ್ರ. ಅವನು ಕಣ್ಣು ಮುಚ್ಚಿ ನಿಧಾನವಾಗಿ ಹೇಳಿದ— “ನಾನು ಈ ದೇಹವಲ್ಲ…ನಾನು ಈ ಹೆಸರಲ್ಲ…ನಾನು ಈ ಸಂಪತ್ತಲ್ಲ…ನಾನು ಈ ಸಂಬಂಧಗಳಲ್ಲ…ನಾನು ಈ ಎಲ್ಲದರ ಸಾಕ್ಷಿ.” ಅವನ ಮನಸ್ಸಿನಲ್ಲಿ ಒಂದು ವಿಚಿತ್ರವಾದ ಶಾಂತಿ ಮೂಡಿತು.ಅವನಿಗೆ ತನ್ನ ಪಯಣದ ಅರ್ಥ ನಿಧಾನವಾಗಿ ತಿಳಿಯಿತು. ನಾವು ಈ ಲೋಕಕ್ಕೆ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಬರಲಿಲ್ಲ.ಹಾಗೆಯೇ ಇಲ್ಲಿಂದ ಏನನ್ನೂ ಶಾಶ್ವತವಾಗಿ ತೆಗೆದುಕೊಂಡು ಹೋಗಲಾರೆವು. ಆದರೆ ಈ ಜೀವನ ನಮಗೆ ಒಂದು ಅಮೂಲ್ಯ ಅವಕಾಶವನ್ನು ಕೊಡುತ್ತದೆ—ನಾವು ಯಾರು ಎಂಬುದನ್ನು ಅರಿಯುವ ಅವಕಾಶ.ಅದೇ ಆತ್ಮದ ನಿಜವಾದ ಪಯಣ. ಮನುಷ್ಯನು ಹೊರಗಿನ ಜಗತ್ತನ್ನು ಗೆಲ್ಲಲು ಎಷ್ಟು ಪ್ರಯತ್ನಿಸಿದರೂ, ತನ್ನ ಮನಸ್ಸನ್ನು ಗೆಲ್ಲದೆ ನಿಜವಾದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ತನ್ನ ಜೀವನದ ಕೊನೆಯಲ್ಲಿ ಒಂದು ಮಾತನ್ನು ಮಾತ್ರ ಹೇಳಿದ— «“ನಾನು ಇಡೀ ಜೀವನ ನನ್ನ ಗಮ್ಯವನ್ನು ಹೊರಗೆ ಹುಡುಕಿದೆ.ಆದರೆ ಕೊನೆಗೆ ಅರಿತದ್ದು ಏನೆಂದರೆ…ನಾನು ಹುಡುಕುತ್ತಿದ್ದ ಗಮ್ಯ ನನ್ನೊಳಗೇ ಇತ್ತು.”» ಅವನ ಪಯಣ ಮುಗಿದಿರಲಿಲ್ಲ.ಅದು ನಿಜವಾಗಿ ಆಗಲೇ ಆರಂಭವಾಗಿತ್ತು.ಆತ್ಮದ ಪಯಣ — ಹೊರಗಿನಿಂದ ಒಳಗಿನತ್ತ. ಭೂಮಿಕಾ ಮಾದಾಪುರ

“ಆತ್ಮದ ಪಯಣ” ವಿಶೇಷ ಲೇಖನ ಭೂಮಿಕಾ ಮಾದಾಪುರ Read Post »

You cannot copy content of this page

Scroll to Top