“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್
ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ತ್ರಿವರ್ಣದ ನೆರಳಿನಲ್ಲಿ” 140 ವರುಷಗಳ ಹಿಂದೆಹೊತ್ತಿ ಉರಿದಿತ್ತು ಒಂದು ಕನಸು,ಬಂಧನದ ಕತ್ತಲೆಯನ್ನು ಸೀಳಿಬೆಳಕಾಗಿತ್ತು ಸ್ವಾತಂತ್ರ್ಯದ ಬೆಳಗು. ತಾಯ್ನಾಡಿನ ಮಣ್ಣಿಗಾಗಿನಡೆದವು ಮೋಹನದಾಸ್ ಕರಮಚಂದ ಗಾಂಧಿ ಜೊತೆಗೆ ಸಾವಿರ ಹೆಜ್ಜೆಗಳು,ತ್ಯಾಗದ ದಾರಿಯಲ್ಲಿ ಮೂಡಿದವುಅಸಂಖ್ಯಾತ ವೀರರ ಹೆಜ್ಜೆ ಗುರುತುಗಳು. ಗಾಂಧಿ ಕೈಯಲ್ಲಿ ಆಯುಧವಿರಲಿಲ್ಲ,ಹೃದಯದಲ್ಲಿ ಮಾತ್ರ ಧೈರ್ಯವಿತ್ತು;ತುಟಿಯಲ್ಲಿ ಅಜಾದಿಯ ಹಂಬಲ ;ಕಣ್ಣಿನಲ್ಲಿ ಭಾರತವಿತ್ತು. ಜೈಲಿನ ಕತ್ತಲ ಕೋಣೆಗಳಲ್ಲೂ ನೆಹರು ಅವರಸ್ವಾತಂತ್ರ್ಯದ ಹಾಡು ಮೊಳಗಿತು,ತಾಯಿಯ ಮಡಿಲು ತೊರೆದ ಮಗನಹೆಜ್ಜೆ ದೇಶದ ದಾರಿಯಾಯಿತು. ಆ ದಿನದ ತ್ಯಾಗದ ಹನಿಗಳುಇಂದು ನಮ್ಮ ಧ್ವಜದ ಬಣ್ಣಗಳಾಗಿವೆ;ಆ ವೀರರ ಕನಸುಗಳೇಇಂದು ನಮ್ಮ ಸ್ವತಂತ್ರ ಉಸಿರಾಗಿವೆ. ನೂರಾಮೂವತ್ತು ವರ್ಷಗಳು ಕಳೆದುಹೋದರೂಆ ನೆನಪುಗಳುಕ್ವಿಟ್ ಇಂಡಿಯಾ ಚಳುವಳಿ ಹಳೆಯದಲ್ಲ,ಪ್ರತಿ ಆಗಸ್ಟ್‌ನ ಗಾಳಿಯಲ್ಲೂಅವರ ತ್ಯಾಗದ ಸುಗಂಧ ಕಡಿಮೆಯಾಗದು. ತ್ರಿವರ್ಣ ಧ್ವಜ ಹಾರುವಾಗಮನದೊಳೊಂದು ಪ್ರಶ್ನೆ ಮೂಡಲಿ—“ನಾವು ಪಡೆದ ಸ್ವಾತಂತ್ರ್ಯವನ್ನುಮುಂದಿನ ಪೀಳಿಗೆಗೆ ಹೇಗೆ ನೀಡಲಿ?” ಸ್ವಾತಂತ್ರ್ಯವೆಂದರೆ ಕೇವಲ ಹಬ್ಬವಲ್ಲ,ಅದು ಹೊಣೆಗಾರಿಕೆಯ ಬೆಳಕು;ದೇಶದ ಮಣ್ಣನ್ನು ಪ್ರೀತಿಸುವಪ್ರತಿಯೊಬ್ಬ ಹೃದಯದ ಸಂಕಲ್ಪ. ವೀರರ ಕನಸುಗಳು ನಗುವಂತೆ,ಭಾರತದ ಭವಿಷ್ಯ ಬೆಳಗುವಂತೆ,ಎಂಭತ್ತು ವರ್ಷಗಳ ನೆನಪಿನ ಮುಂದೆನಾವು ತಲೆಬಾಗಿ ಪ್ರತಿಜ್ಞೆ ಮಾಡೋಣ. “ನೆಲದ ಜನ ಮೊದಲು, ನಂತರ, ವಿವಿಧತೆಯಲ್ಲಿಏಕತೆ ನಮ್ಮ ಶಕ್ತಿ,ಸ್ವಾತಂತ್ರ್ಯ ನಮ್ಮ ಉಸಿರು,ಭಾರತ ನಮ್ಮ ಹೆಮ್ಮೆ! ಎನ್.ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.
“ತ್ರಿವರ್ಣದ ನೆರಳಿನಲ್ಲಿ” ಎನ್.ಜಯಚಂದ್ರನ್ Read Post »


