ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ”
ವಿಶೇಷ ಸಂಗಾತಿ ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” {ಪಾಶ್ಚಾತ್ಯ ದೇಶಗಳಲ್ಲಿ ಒಂದು ದಂತ ಕಥೆ ಜನಪ್ರಿಯವಾಗಿದೆ. ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಆ ಹಲ್ಲನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ದಂತ ದೇವತೆ ಎಂಬ ಕಾಲ್ಪನಿಕ ಯಕ್ಷಿಣಿ (tooth fairy) ಬಂದು ಅದನ್ನು ತೆಗೆದುಕೊಂಡು ಅದರ ಜಾಗದಲ್ಲಿ ಹಣ ಇಟ್ಟು ಹೋಗುತ್ತಾಳೆ. ಈ ಲೇಖನ ಆ ದಂತಕಥೆಯ ಮೇಲೆ ಆಧಾರಿತವಾಗಿದೆ.} ಮಗು ಹುಟ್ಟುವಾಗ ಅದರ ಬಾಯಲ್ಲಿ ಒಂದು ಹಲ್ಲೂ ಇರುವುದಿಲ್ಲ. ಇದು ಮಾನವನಿಗೆ ಮಾತ್ರ ಅನ್ವಯಿಸುವ ಒಂದು ವೈಶಿಷ್ಟ್ಯ. ಮಿಕ್ಕ ಪ್ರಾಣಿಗಳಿಗೆಲ್ಲಾ ಅವು ಹುಟ್ಟುವಾಗಲೇ ಬಾಯಿನಲ್ಲಿ ಹಲ್ಲು ತಯಾರಿಮಾಡಿಕೊಂಡೇ ಬರುತ್ತವೆ. ದೇವರು ಈ ರೀತಿ ತಾರತಮ್ಯವನ್ನು ಏಕೆ ಮಾಡಿದ್ದಾನೆ ಎಂದು ನೀವು ಕೇಳಬಹುದು. ಅದಕ್ಕೆ ಅನೇಕ ಕಾರಣಗಳು ಇವೆ. ಅದಿರಲಿ, ಪುಟ್ಟ ಮಗುವಿನ ಬಾಯಲ್ಲಿ ಹಲ್ಲು ಕಾಣುವುದಕ್ಕೆ ಹೆಚ್ಚು ಕಡಿಮೆ ಒಂದು ವರ್ಷವೇ ಬೇಕಾಗುತ್ತದೆ. ಹಿಂದಿನಕಾಲದಲ್ಲಿ ಮಗುವಿಗೆ ಹಲ್ಲು ಬರುವವರೆಗೆ ಅದಕ್ಕೆ ಸಿಕ್ಕುತ್ತಿದ್ದುದು ಬರಿಯ ತಾಯಿಯಹಾಲು ಅಥವಾ ಹಸುವಿನ ಹಾಲು; ದ್ರವ್ಯ ಪದಾರ್ಥಗಳು ಮಾತ್ರ. ಈಚೆಗೆ ಚಿಕ್ಕ ಮಗುವಿಗೆ ತಿನ್ನಿಸಬಹುದಾದ ಖಾದ್ಯ ಪದಾರ್ಥಗಳು ಮಾರಾಟಕ್ಕೆ ಬಂದಿವೆ. ಮಗುವಿಗಾಗಿಯೇ ತಯಾರಿಸಿದ ಬಿಸ್ಕೆಟ್ಗಳು, ಹಣ್ಣು, ತರಕಾರಿಗಳನ್ನು ಅರೆದು ಸಣ್ಣ ಚಮಚದಲ್ಲಿ ಮಗುವಿಗೆ ತಿನ್ನಿಸುವ ತಿನಿಸುಗಳು, ಇವೆಲ್ಲ ರೂಢಿಗೆ ಬಂದಿವೆ. ಅಲ್ಲದೇ ಮಗುವನ್ನು ಪುಷ್ಟಿಯಾಗಿ ಬೆಳೆಸಬೇಕೆಂಬ ಉದ್ದೇಶದಿಂದ ಪೋಷಕರು ಮನೆಯಲ್ಲಿಯೇ ಹಣ್ಣು ಮತ್ತು ತರಕಾರಿಗಳನ್ನು ಬೇಯಿಸಿ ಅರೆಯುವ ಮೆಶೀನ್ (ಬ್ಲೆಂಡರ್)ನಲ್ಲಿ ಹಾಕಿ ಮಗುವಿಗೆ ತಿನ್ನಿಸುವ ಅಭ್ಯಾಸ ಕೂಡ ಬಳಕೆಗೆ ಬಂದಿದೆ. ಇದರಿಂದ ಮಗುವಿಗೆ ಹೆಚ್ಚು ಪುಷ್ಟಿಯಾದ ಆಹಾರ ದೊರೆತು ಅದರ ಬೆಳವಣಿಗೆಗೆ ಉತ್ತೇಜನವನ್ನು ಕೊಡುತ್ತದೆ. ಅಲ್ಲದೇ ಬರಿಯ ಹಾಲನ್ನೇ ಕುಡಿಯುತ್ತಿದ್ದಾಗ ಮಗುವಿಗೆ ಊಟದಲ್ಲಿ ಅಭಿರುಚಿ ಬೆಳೆಯುತ್ತಿರಲಿಲ್ಲ. ಊಟದ ಸಮಯ ಬಂದಾಗ ಮಗು ಉತ್ಸಾಹ ತೋರಿಸುತ್ತಿರಲಿಲ್ಲ. ತಾಯಂದಿರಿಗೆ ಇದೊಂದು ತಲೆನೋವು. ಮಗುವನ್ನು ರಮಿಸಿ, ಪುಸಲಾಯಿಸಿ, ಅಲ್ಲಿ ಇಲ್ಲಿ ಓಡಿಯಾಡಿಸುತ್ತಾ ಹಕ್ಕಿ, ಹೂವು, ಸೂರ್ಯ, ಚಂದ್ರರನ್ನು ತೋರಿಸುತ್ತಾ ಕಥೆ ಹೇಳಿ ಊಟವನ್ನು ಮಗುವಿನ ಹೊಟ್ಟೆಗೆ ಸೇರಿಸುವವೇಳೆಗೆ ತಾಯಿ ಕುಸ್ತಿಮಾಕುಸ್ತಿಮಾಡಿದವಳಂತೆ ಸುಸ್ತಾಗಿ ಬಿಡುತ್ತಾಳೆ. ಊಟದ ಸಮಯ ಬೇಸರದ ಸಮಯವಾಗುತ್ತದೆ. ಆದರೆ ಮಗುವಿಗೆ ಹಲ್ಲು ಬರುವ ಮೊದಲೇ ಅದು ಚೂರು ಉಪ್ಪು, ಹುಳಿ, ಸಕ್ಕರೆಗಳ ಸ್ವಾದವನ್ನು ಅನುಭವಿಸಿ ಚಪ್ಪರಿಸಿದ್ದರೆ ಅದಕ್ಕೆ ಊಟದಲ್ಲಿ ಖುಷಿ ಇರುತ್ತದೆ. ಆಹಾರವನ್ನು ಕಂಡಕೂಡಲೆ ಕೈಹಾಕಿ ಬಾಯಿಗೆ ಹಾಕಿಕೊಳ್ಳುತ್ತದೆ. ಹೀಗೆ ಆಹಾರದಲ್ಲಿ ಅಭಿರುಚಿಯನ್ನು ಪಡೆದ ಮಗು ಬೆಳೆಯುತ್ತಾ ಬೆಳೆಯುತ್ತಾ ತಿಂಡಿಪೋತನಾಗುತ್ತದೆ. ಕೈಕಾಲು ಪುಷ್ಟವಾಗಿ ಬೆಳೆದು ಆರು ತಿಂಗಳ ಮಗು ಮಕ್ಕಳ ಕುರ್ಚಿಯಲ್ಲಿ ಭರ್ತಿಯಾಗಿ ಕುಳಿತು ಪುಟ್ಟ ಗಣೇಶನಂತೆ ಮುದ್ದಾಗಿ ಕಾಣಿಸುತ್ತದೆ. ಮುಖ್ಯವಾಗಿ ಮೊದಲ ಎರಡು ವರ್ಷದಲ್ಲಿ ಮಗು ಸಿಕ್ಕಿದ್ದನ್ನೆಲ್ಲ ರುಚಿನೋಡಿ ಆನಂದಿಸುತ್ತದೆ. ಇದರ ಆನಂದಕ್ಕೆ ಉಂಟಾಗುವ ತಡೆ ಎಂದರೆ ಮಗುವಿಗೆ ಆರೋಗ್ಯ ಕೆಡಬಹುದೆಂಬ ಭಯದಿಂದ ಪೋಷಕರು ಸಾಕು ಎಂದಾಗ. ಮಗುವಿಗೆ ಎರಡು ವರ್ಷವಾಗುತ್ತಾ ಬಂದಾಗ ಅದಕ್ಕೆ ಊಟದ ದಾಹ ಸ್ವಲ್ಪ ಕಡಿಮೆಯಾಗುತ್ತದೆ. ಆಗಲೇಬೇಕು. ಇಲ್ಲದಿದ್ದರೆ ಅದು ಅಡ್ಡಾದಿಡ್ಡಿಯಾಗಿ ಬೆಳೆದು ಒಂದು ದೈತ್ಯಾಕಾರದ ವ್ಯಕ್ತಿ ಆಗುವ ಸಂಭವವಿದೆ. ಕೆನಡದಲ್ಲಿ ನನ್ನ ಪಾಶ್ಚಾತ್ಯ ಸ್ನೇಹಿತ ದಂಪತಿಗಳು ಮೇರಿ ಮತ್ತು ಪಾಲ್ ಎಂಬುವವರಿದ್ದಾರೆ. ಅವರಿಗೆ ಐದು ವರ್ಷದ ಒಬ್ಬ ಮುದ್ದಾದ ಮಗ ಇದ್ದಾನೆ. ಅವನನ್ನು Junior Paul ಅಥವಾ JP ಯೆಂದು ಕರೆಯುತ್ತಾರೆ. JP ಬಹಳ ಬುದ್ಧಿವಂತನಾದ ಹುಡುಗ. ಖುಷಿಗಾರ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಾನೆ. ನನ್ನನ್ನು “ಮಿಸೆಸ್ ಮುರಟಿ” ಎಂದು ಸಂಬೋಧಿಸುತ್ತಾನೆ. JPಗೆ ಐದು ವರ್ಷವಾದಾಗ kindergarten ಗೆ ಸೇರಿಸಿದರು. JP ಖುಷಿಯಾಗಿ ಸ್ಕೂಲ್ ಗೆ ಹೋಗಿಬರುತ್ತಿದ್ದ. ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತಡೆಬಡೆ ಇಲ್ಲದೆ ಮಾತನಾಡಿ ಶಾಲೆಯಲ್ಲಿ ನಡೆದಿದ್ದನ್ನೆಲ್ಲ ಅಮ್ಮನಿಗೆ ವರದಿ ಒಪ್ಪಿಸುತ್ತಿದ್ದ. ಅವನು ಮನೆಗೆ ಬರುವವೇಳೆಗೆ ಸರಿಯಾಗಿ ಮೇರಿ ತನ್ನ ಮನೆಕೆಲಸಗಳನ್ನು ಮುಗಿಸಿ ಸ್ವಲ್ಪ ವಿರಾಮಕ್ಕಾಗಿ ಕುಳಿತುಕೊಳ್ಳುವ ಸಮಯ. ಅವಳು ಕುಳಿತು ಮುಗುಳುನಗುತ್ತಾ ಎಲ್ಲವನ್ನೂ ಕೇಳಿಸಿಕೊಳ್ಳುವಳು. ಮಧ್ಯೆ ಮಧ್ಯೆ ಸ್ವಲ್ಪ ಕಣ್ಣನ್ನೂ ಮುಚ್ಚುವಳು. JP ಒಂದೊಂದು ದಿನ ತಾಯಿಗೆ ಸುಸ್ತಾಗಿದೆ ಎಂದು ಯೋಚಿಸಿ, “ನೀನು ಕಣ್ಣು ಮುಚ್ಚಿ ಮಲಗು. ನಾನು ಮಾತನಾಡುವುದಿಲ್ಲ.” ಎಂದು ತನ್ನ ತುಟಿಗಳನ್ನು ಬಿಗಿಯಾಗಿ ಮುಚ್ಚಿ ತೋರಿಸುತ್ತಾನೆ. ತಾನೇ ಅವಳ ಕಣ್ಣಿನ ರೆಪ್ಪೆಯಮೇಲೆ ತನ್ನ ಪುಟ್ಟ ಕೈಇಟ್ಟು ಅವಳ ಕಣ್ಣು ಮುಚ್ಚುತ್ತಾನೆ. ಮೇರಿ ತನ್ನ ಕಣ್ಣನ್ನು ಮುಚ್ಚಿ ನಿದ್ದೆಮಾಡುವವಳಂತೆ ನಟಿಸುತ್ತಾಳೆ. ತಕ್ಷಣವೇ ಪುಟ್ಟ JP ಕೊಟ್ಟ ಭಾಷೆಯನ್ನು ಮರೆತು ಹರಟೆ ಹೊಡೆಯಲು ಶುರುಮಾಡುತ್ತಾನೆ. ಸ್ಕೂಲ್ ನಲ್ಲಿ JPಗೆ ಒಬ್ಬ ಸ್ನೇಹಿತನಿದ್ದಾನೆ. ಅವನ ಹೆಸರು ಜಾನ್ (John) ಎಂದು. ಜಾನ್ JP ಗಿಂತ ಆರು ತಿಂಗಳು ದೊಡ್ಡವನು. JP ಗೆ ಜಾನ್ ಒಬ್ಬ ಹೀರೋ. ಜಾನ್ಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂದು ಅವನ ಭಾವನೆ. ಜಾನ್ ಹೇಳಿದ್ದೇ ವೇದವಾಕ್ಯ. ಪ್ರತಿದಿನವೂ ಸ್ಕೂಲ್ ನಿಂದ ಬಂದಮೇಲೆ ಜಾನ್ ಹೀಗೆ ಹೇಳಿದ ಜಾನ್ ಹಾಗೆ ಹೇಳಿದ ಎಂದು ಮೇರಿಗೆ ವರದಿ ಒಪ್ಪಿಸುತ್ತಾನೆ. ಒಂದು ದಿನ JP ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತುಂಬಾ ಉತ್ಸಾಹದಿಂದ ನನ್ನ ಸ್ನೇಹಿತ ಜಾನ್ಗೆ ಬಾಯಲ್ಲಿ ಒಂದು ಹಲ್ಲು ಅಲ್ಲಾಡುತ್ತಿದೆ. ಜಾನ್ ತಾಯಿ ಅವನ ಬಾಯಲ್ಲಿರುವ ಎಲ್ಲ ಹಲ್ಲುಗಳೂ ಒಂದೊಂದಾಗಿ ಬಿದ್ದುಹೋಗುತ್ತವೆ ಎಂದು ಹೇಳಿದಳಂತೆ. JP ಅಮ್ಮನ ಮುಖವನ್ನು ನೇರವಾಗಿ ನೋಡುತ್ತಾ “ಅದು ಸುಳ್ಳು ರೈಟ್?” ಎಂದು ತಲೆ ಅಲ್ಲಾಡಿಸುತ್ತಾ ಕೇಳಿದ. ಮೇರಿ ಮಗನ ಮುಖವನ್ನು ದಿಟ್ಟಿಸಿ ನೋಡಿದಳು. JPಯ ಮುಖ ಮತ್ತು ಕಣ್ಣುಗಳಲ್ಲಿ ಸ್ವಲ್ಪ ಭಯ ಕಾಣಿಸುತ್ತಿತ್ತು. ಧ್ವನಿಯೂ ಅದನ್ನೇ ಸೂಚಿಸಿತು. ಮೇರಿ ತಕ್ಷಣವೇ ಅವನನ್ನು ತಬ್ಬಿ ಮುತ್ಟುಕೊಟ್ಟು ದೊಡ್ಡದಾಗಿ ನಗುತ್ತಾ, “ಅದು ಹಾಗಲ್ಲ. ಮಗು ಚಿಕ್ಕದಾಗಿದ್ದಾಗ ಅದು ಬರೀ ಮೃದುವಾಗಿರುವ ಪದಾರ್ಥಗಳನ್ನು ತಿನ್ನುತ್ತದೆ. ಹಾಲನ್ನು ಕುಡಿಯುತ್ತದೆ. ಆಗ ಅದಕ್ಕೆ ಬರೀ ಮೆದುಪದಾರ್ಥಗಳನ್ನು ತಿನ್ನುವ ಹಲ್ಲು ಬಾಯಿನಲ್ಲಿರುತ್ತದೆ. ಆ ಹಲ್ಲಿಗೆ ಮಿಲ್ಕ್ ಟೀತ್ (ಹಾಲು ಕುಡಿಯುವ ಹಲ್ಲು ) ಎಂದು ಹೆಸರು. ಆದರೆ ನೀನು ಈಗ ದೊಡ್ಡವರು ತಿನ್ನುವ ಎಲ್ಲ ಆಹಾರವನ್ನೂ ತಿಂದು ಕಟ್ಟುಮಸ್ತಾಗಿ ಶಕ್ತಿಶಾಲಿಯಾಗಿ ಬೆಳೆಯಬೇಕು. ನೀನು ನಿನ್ನ ಡ್ಯಾಡಿಗಿಂತ ಎತ್ತರವಾಗಿ ಬೆಳೆಯಬೇಕು. ಬಾಸ್ಕೆಟ್ ಬಾಲ್, ವಾಲಿಬಾಲ್ ಎಲ್ಲ ಆಡಬೇಕಲ್ಲವೇ? ಅದರಿಂದಲೇ ಈ ಬೇಬಿ ಹಲ್ಲುಗಳು ಬಿದ್ದಕೂಡಲೇ ದಂತದೇವತೆಯು ನಿನಗಾಗಿಯೇ ಮಾಡಿರುವ ಮುತ್ತಿನಂತೆ ಅಂದವಾಗಿರುವ ಹಲ್ಲುಗಳನ್ನು ಕೊಡುತ್ತಾಳೆ. ಎಂದು ತುಂಬಾ ಪ್ರೀತಿಯಿಂದ ವಿವರಿಸಿದಳು. ಕೂಡಲೇ JP ಕುಳಿತಲ್ಲಿಂದ ಎದ್ದು ನಿಂತು ಕುಪ್ಪಳಿಸಿ ಕೈಯನ್ನು ಆಕಾಶದೆಡೆಗೆ ಎತ್ತಿ ನಾನು ಇಷ್ಟು ಎತ್ತರ ಬೆಳೆಯುತ್ತೇನೆ, ಹೀಗೆ ಬಾಸ್ಕೆಟ್ ಬಾಲ್ ಆಡುತ್ತೇನೆ ಎಂದು ಕೈ ಬೀಸಿ ಎದೆ ತಟ್ಟಿಕೊಂಡ. ಮೇರಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಅವಳು ಮಗನನ್ನು ಎತ್ತಿ ಮುದ್ದಾಡಿದಳು. ಆಮೇಲೆ JP ಸ್ಕೂಲ್ನಿಂದ ಮನೆಗೆ ಬಂದಮೇಲೆ ಪ್ರತಿದಿನವೂ ಜಾನ್ ನ ಹಲ್ಲಿನ ಕಥೆಯೇ. ಈ ದಿನ ಜಾನ್ ಹಲ್ಲಿನಲ್ಲಿ ಸ್ವಲ್ಪ ರಕ್ತ ಬಂತು. ಇನ್ನೊಂದು ದಿನ ಜಾನ್ ಕೈ ಬೆರಳನ್ನು ಬಾಯಲ್ಲಿ ಹಾಕಿ ಹಲ್ಲನ್ನು ಬೀಳಿಸುವುದಕ್ಕೆ ಪ್ರಯತ್ನಿಸಿದ. ಆದರೆ ಟೀಚರ್ “ಹಾಗೆ ಮಾಡಬಾರದು. ಅದಾಗಿಯೇ ಬೀಳುವವರೆಗೆ ಕಾಯಬೇಕು” ಎಂದರು. ಹೀಗೆ ಎರಡುವಾರ ಕಳೆದಮೇಲೆ ಜಾನ್ ನ ಹಲ್ಲು ಬಿದ್ದಿತು. ಅವನು ಅದನ್ನು ತನ್ನ ಕೈನಲ್ಲಿ ಹಿಡಿದುಕೊಂಡು ಟೀಚರ್ ಬಳಿಗೆ ಬಂದು ತೋರಿಸಿದ. ಆಕೆ ಅದನ್ನು ಒಂದು ಪೇಪರ್ ಕವರಿನಲ್ಲಿ ಹಾಕಿ “ನೀನು ಇದನ್ನು ನಿನ್ನ ತಾಯಿಯ ಕೈನಲ್ಲಿ ಜೋಪಾನವಾಗಿ ಕೊಡು. ಈ ಕವರನ್ನು ನಿನ್ನ ದಿಂಬಿನ ಕೆಳಗೆ ಇಟ್ಟು ಮಲಗಬೇಕು. ನೀನು ನಿದ್ದೆ ಮಾಡುತ್ತಿರುವಾಗ ದಂತದೇವತೆ ಬಂದು ಅದನ್ನು ತೆಗೆದುಕೊಂಡು ಹೋಗುತ್ತಾಳೆ. ನಿನ್ನ ತಲೆದಿಂಬಿನ ಕೆಳಗೆ ದುಡ್ಡು ಇಡುತ್ತಾಳೆ. ನೀನು ನಿನ್ನ ಬೇಬೀ ಹಲ್ಲನ್ನು ಚೆನ್ನಾಗಿ ನೋಡಿಕೊಂಡು ಅವಳಿಗೆ ವಾಪಸ್ಸು ತಲಪಿಸಿದ್ದಕ್ಕೆ ಅವಳಿಗೆ ಸಂತೋಷವಾಗಿದೆ ಎಂದು ಅರ್ಥ” ಎಂದು ಹೇಳಿದಳು. ಇದನ್ನೆಲ್ಲಾ ಕಣ್ಣಾರೆ ನೋಡಿದ JP ಗೆ ಆಶ್ಚರ್ಯಯವೋ ಆಶ್ಚರ್ಯ. ದಂತದೇವಿ ದುಡ್ಡು ಕೊಡುತ್ತಾಳೆಯೇ? ಹಾಗಾದರೆ ನನ್ನ ಹಲ್ಲೂ ಬೇಗ ಬಿದ್ದರೆ ನನಗೂ ದುಡ್ಡು ಸಿಗುತ್ತದೆ ಎಂದು ಖುಷಿಪಟ್ಟ. ಸ್ಕೂಲ್ನಿಂದ ಮನೆಗೆ ಓಡಿಬಂದು “ನನ್ನ ಹಲ್ಲು ಬಿದ್ದಾಗ ನನಗೂ ದುಡ್ಡು ಸಿಗುತ್ತದೆಯೇ ಎಂದು ಮೇರಿಯ ಮುಖವನ್ನು ಕಾತರದಿಂದ ನೋಡಿದ. ಅವಳು “ಖಂಡಿತ ದಂತದೇವಿ ಎಲ್ಲರಿಗೂ ದುಡ್ಡು ಕೊಡುತ್ತಾಳೆ. ನೀನು ಅವಳು ಕೊಟ್ಟ ಹಲ್ಲನ್ನು ಅವಳಿಗೆ ಹಿಂತಿರುಗಿಸುತ್ತಿರುವುದು ಅವಳಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ. ಅದಕ್ಕೇ ಎಲ್ಲ ಮಕ್ಕಳಿಗೂ ದುಡ್ಡು ಸಿಕ್ಕುತ್ತದೆ.” ಎಂದು ಪೂರ್ಣ ವಿಶ್ವಾಸದಿಂದ ಹೇಳಿದಳು. ಈಗ JP ಗೆ ಹಲ್ಲು ಬೀಳುವ ಭಯ ಹೊರಟುಹೋಯಿತು. ಎಷ್ಟುಬೇಗ ಹಲ್ಲು ಬಿದ್ದರೆ ಅಷ್ಟು ಒಳ್ಳೆಯದು. ನನಗೆ ದಂತದೇವಿಯಿಂದ ದುಡ್ಡು ಸಿಗುತ್ತದೆ ಮತ್ತು ಅವಳಿಗೆ ನನ್ನ ವಿಚಾರದಲ್ಲಿ ಸಂತೋಷವಾಗುತ್ತದೆ ಎಂದು ನಿರೀಕ್ಷಿಸತೊಡಗಿದ. ಹೀಗೆ ಒಂದೆರಡು ವಾರ ಕಳೆದಮೇಲೆ JP ಒಂದು ದಿನ ಸ್ಕೂಲ್ನಿಂದ ವಾಪಸ್ಸು ಬರುವಾಗ ಬಿರುಗಾಳಿಯಂತೆ ಓಡಿಬಂದು ಅಮ್ಮನ ಮೇಲೆ ಬಿದ್ದು ತಬ್ಬಿಕೊಂಡ. ಅವನು ಬಿದ್ದ ರಭಸಕ್ಕೆ ಮೇರಿ ಹಿಂದಕ್ಕೆ ವಾಲಿದಳು. ಕಾರಣ ಇಷ್ಟೇ. JPಯ ಹಲ್ಲು ಅಲ್ಲಾಡುತ್ತಿದೆ. ಆದಿನ JP ಎಲ್ಲರಿಗೂ ತನ್ನ ಅಲ್ಲಾಡುತ್ತಿರುವ ಹಲ್ಲನ್ನು ಮತ್ತೆ ಮತ್ತೆ ಅಲ್ಲಾಡಿಸಿ ತೋರಿಸಿದ. ಸಂಜೆಎಲ್ಲಾ ಹಲ್ಲಿನ ವಿಚಾರವೇ. ಅದು ಬಿದ್ದುಹೋಗಿ ಹೊಸಹಲ್ಲು ಬರುವ ವಿಚಾರವಾಗಿ JP, ಮೇರಿ ಮತ್ತು ಪಾಲ್ ಯಥೇಚ್ಚವಾಗಿ ಚರ್ಚೆ ಮಾಡಿದರು. ಮೇರಿ ಗೂಗಲ್ನಲ್ಲಿ ಸಂಶೋಧನೆ ಮಾಡಿ JP ಮತ್ತು ಪಾಲ್ ಮುಂದೆ ಮಾಹಿತಿಯನ್ನು ಓದಿದಳು. ಎಲ್ಲರಿಗೂ ಖುಷಿ ಆಯಿತು. ಆಮೇಲೆ JP ದಿನವೂ ಹಲ್ಲನ್ನು ಮುಟ್ಟುವುದು, ಅಲ್ಲಾಡಿಸುವುದು ಶುರು ಮಾಡಿದ. ಮೇರಿ ಸ್ವಲ್ಪ ಧ್ವನಿ ಎತ್ತರಿಸಿ “JP!! ನೀನು ಸದಾ ಹಲ್ಲನ್ನು ಮುಟ್ಟುತ್ತಿರುವುದು ಸರಿಯಲ್ಲ. ಅದನ್ನು ನಿಲ್ಲಿಸು” ಎಂದು ಖಚಿತವಾದ ಧ್ವನಿಯಲ್ಲಿ ಹೇಳಿದಳು. ಅದೂ ಸಫಲವಾಗದಿದ್ದಾಗ, “ನೀನು ಅಲ್ಲಾಡಿಸಿ ಹಲ್ಲನ್ನು ಬೀಳಿಸಿದರೆ ದಂತ ದೇವತೆಗೆ ಇಷ್ಟವಾಗುವುದಿಲ್ಲ. ಆ ಹಲ್ಲು ಬಿದ್ದಾಗ ಅವಳು ನಿನಗೆ ದುಡ್ಡು ಕೊಡುವುದಿಲ್ಲ.” ಎಂದು ಬೆದರಿಸಿದಳು. ಅಂತೂ ಇಂತೂ JPಯ ಹಲ್ಲು ಸಡಿಲವಾಗಿ ಒಂದೇ ಒಂದು ಎಳೆಯಲ್ಲಿ ಅವನ ಒಸಡಿಗೆ ಅಂಟಿಕೊಂಡಿತ್ತು. JP ಸ್ಕೂಲ್ಗೆ ಹೋಗುವಾಗ “ಅಮ್ಮ ಈದಿನ ನನ್ನ ಹಲ್ಲು ಬೀಳುತ್ತದೆ. ನೋಡು ಅದು ಒಂದು ಚೂರು ಮಾತ್ರ ಅಂಟಿಕೊಂಡಿದೆ ಎಂದು ಬಾಯಿಬಿಟ್ಟು ತನ್ನ ಹಲ್ಲನ್ನು ಮೇರಿಗೆ ತೋರಿಸಿದ. ಅವಳು ಮುಗುಳು ನಕ್ಕು, “ಅದನ್ನ ಮುಟ್ಟಬೇಡ” ಎಂದು ಎಚ್ಚರಿಸಿದಳು. JPಯ ಸ್ಕೂಲ್ನಲ್ಲಿ ಬೆಳಿಗ್ಗೆ 10:30ಕ್ಕೆ ಆಟಕ್ಕೆ ಬಿಡುವು. ಬೆಲ್ ಆದಕೂಡಲೇ ಎಲ್ಲ ಮಕ್ಕಳೂ ಹೊರಗೆ ಓಡಿಹೋಗಿ ಆಟದ ಮೈದಾನದಲ್ಲಿ ಜೂಟಾಟ, ಮೆಟ್ಟಲು ಹತ್ತುವುದು, ಜಾರೋಬಂಡೆ, sandbox (ಮರಳು ಪೆಟ್ಟಿಗೆ), ಇವುಗಳಲ್ಲಿ ಆಟವಾಡಿ ಮತ್ತೆ ಬೆಲ್ ಆದಕೂಡಲೇ ಒಳಕ್ಕೆ ಹೋಗಬೇಕು. ಬೆಲ್ ಶಬ್ದ ಕೇಳಿದಕೂಡಲೇ ಎಲ್ಲ ಮಕ್ಕಳೂ ಹಿಂದಿನಬಾಗಿಲಿಗೆ ಹೋಗಿ ಅಲ್ಲಿ ಟೀಚರ್ ಅಟ್ಟೆಂಡನ್ಸ್ ತೆಗೆದುಕೊಂಡು ಮಕ್ಕಳನ್ನು ಒಳಕ್ಕೆ ಬಿಡುತ್ತಾಳೆ. ಈದಿನ ಮಾತ್ರ JP ಬಾಗಿಲಿನ ಕಡೆ ಓಡಲಿಲ್ಲ. ಟೀಚರ್ “ಯಾಕೆ JP ಬಂದಿಲ್ಲ” ಎಂದು ವಿಚಾರಿಸಿದಾಗ JPಯ ಸ್ನೇಹಿತ
ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” Read Post »

