ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿನ್ನನು ಈ ಕಂಗಳು ಮರೆಯುವ ಮುನ್ನ  ಬಂದು ಬಿಡು
ಕನಸುಗಳು ರೆಪ್ಪೆಯನು ತೊರೆಯುವ ಮುನ್ನ  ಬಂದು ಬಿಡು

ಅದೆಷ್ಟೋ ದಿನಗಳಿಂದ ,ನಿನ್ನ ನೆನಪುಗಳನೇ ಉಸಿರಾಡುತಿರುವೆ
ಎದೆಬಡಿತ ಈ ಎದೆಯನೇ ಕೊರೆಯುವ ಮುನ್ನ ಬಂದು ಬಿಡು

ಹಗಲು ಹಗುರಾಗುತ್ತಿಲ್ಲ, ಇರುಳು ಮಗ್ಗಲು ಬದಲಿಸುತಿಲ್ಲ
ಹಗಲಿರುಳುಗಳ ನೋವು  ಪೊರೆಯುವ ಮುನ್ನ ಬಂದು ಬಿಡು

ನೀ ಬಿಟ್ಟು ಹೋದಲ್ಲಿಯೇ ನಿಂತಿರುವೆ ಇಂದಿಗೂ ನಲ್ಲ
ಆ ಜಾಗವೂ ನಿನ್ನ ಸ್ಪರ್ಶಕಾಗಿ ಮೊರೆಯುವ ಮುನ್ನ ಬಂದು ಬಿಡು

ಕನವರಿಸುತ ಕಾಯುತಿಹಳು ‘ವಾಣಿ ‘  ಕಣ್ತುಂಬಿಕೊಂಡು ದಿನವೂ
ಬಿಸಿ ಹನಿಗಳ ಕಡಲು ಬದುಕು ಹೊರೆಯುವ ಮುನ್ನ ಬಂದು ಬಿಡು


About The Author

Leave a Reply

You cannot copy content of this page

Scroll to Top