ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜಗದ ಎಲ್ಲ ಸುಖವು ಸಿಗುವುದೆಂದು ಬೆರಗಾಗಿದ್ದೆ
ಬಯಸಿದ ಒಲವು ದೊರಕುವುದೆಂದು ಬೆರಗಾಗಿದ್ದೆ

ಏನಿಲ್ಲ ಏನುಂಟೆಂಬ ಕುತೂಹಲ ಬಿಡದೆ ಕಾಡಿತ್ತು
ಅಪ್ರತಿಮ ಗೆಳೆಯನೇ ದಕ್ಕುವನೆಂದು ಬೆರಗಾಗಿದ್ದೆ

ಹಾತೊರೆವ ಭಾವ ಬಿತ್ತಿಯ ತುಂಬೆಲ್ಲ ಕನಸುಗಳು
ಸ್ವರ್ಗ ಸಿರಿಯ ಪಲ್ಲಕ್ಕಿ ಏರುವೆನೆಂದು ಬೆರಗಾಗಿದ್ದೆ

ಅರಿಯದಾಸೆಗಳು ಉಬ್ಬಿ ಉಬ್ಬಿ ತಾರಕಕೇರಿದ್ದವು
ಗರಿಗೆದರಿದಂಬಲ ಹಸಿರಾಗುವುದೆಂದು ಬೆರಗಾಗಿದ್ದೆ

ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪ್ರೇಮ ಪರವಶದಲ್ಲಿತ್ತು
ಅನುಳಿಗೆ ಪ್ರೀತಿಯ ಧಾರೆ ಎರೆವನೆಂದು ಬೆರಗಾಗಿದ್ದೆ
ಡಾ ಅನ್ನಪೂರ್ಣ ಹಿರೇಮಠ

About The Author

Leave a Reply

You cannot copy content of this page

Scroll to Top