ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು”

ಕಾವ್ಯ ಸಂಗಾತಿ ಮಾಯಾ ಜಿಂಕೆ ಓಡುತಿರು ಡಾ.ಹೆಚ್.ನಟರಾಜ್‌ ಆರ್ಯ ಮಾಯಾ ಜಿಂಕೆ ಓಡುತಿರುಮೈ ಮಿನುಗಿ ಮಿಂಚಿನಂತೆ;ಮನದ ಕಾಡು ದಾಟುತಿರು,ಮೌನದೊಳ ಮಾತಿನoತೆ . ಹೆಜ್ಜೆಯಲಿ ಗಾಳಿಯ ಗೆಜ್ಜೆ,ಕಣ್ಣೊಳ ಕಾಡಿನ ಕನ್ನಡಿ;ಕೊಂಬಲಿ ಚಂದ್ರನ ಬಿಲ್ಲು,ಮೈಮೇಲೆ ಹೊನ್ನಿನ ಹೊಳಪು. ಹಸಿರು ಹಾಸಿಗೆ ತುಳಿದು,ಹೊನ್ನಿನ ನೆರಳು ಸೀಳಿ;ಎಲೆಗಳ ಗುಟ್ಟು ಆಲಿಸಿ,ಮಿಂಚಿಗೇ ದಾರಿ ತೋರಿಸು. ಆ ಹೊಳಪೇ ಕನಸಾಗಿ,ಸೀತೆಯ ಕಣ್ಣನು ಸೆಳೆಯಿತು;ಮಾರೀಚನ ಮೈಯಲಿ ಮಾಯೆ,ಮನದೊಳ ಮೋಹವಾಯಿತು. ರಾಮನ ಹೆಜ್ಜೆ ತಿರುಗಿಲಕ್ಷ್ಮಣರೇಖೆ ನಡುಗಿತು;ಕಾಣುವುದೆಲ್ಲ ಸತ್ಯವಲ್ಲಕನಸಿಗೂ ನೆರಳುಂಟು. ಅಂದೊಂದು ಬಾಣ ಬೆನ್ನಟ್ಟಿತು,ಇಂದೊಂದು ಗುಂಡು ಬೆನ್ನಟ್ಟುತ್ತದೆ;ಕಾಲ ಮಾತ್ರ ಬದಲಾಗಿದೆ,ಬೇಟೆಯ ಕಣ್ಣು ಬದಲಾಗಿಲ್ಲ. ಗಾಳಿಯ ಗುಟ್ಟು ಅರಿತು,ಗುಂಡಿಗಿಂತ ಮುಂಚೆ ಚಿಮ್ಮು;ಹಿಡಿದರೆ ದೂರವಾಗು,ಬಿಗಿದರೆ ಗಾಳಿಯಾಗು. ಪ್ರೀತಿ ಹತ್ತಿರ ಬಂದಾಗ,ನಿಶ್ಶಬ್ದವಾಗಿ ನಿಂತು ನೋಡು;ಭಯ ನೆರಳಾಗಿ ಬಂದರೆ,ಬಯಲಿನ ಎದೆ ದಾಟು. ಬಂಡೆಯ ಅಂಚು ಜಿಗಿದು,ಭೀತಿಯನ್ನು ಹಿಂದೆ ಬಿಟ್ಟು;ಭವಿಷ್ಯದ ಕಡೆಗೆ ಓಡು,ಬದುಕಿನ ಹಠ ಹೊತ್ತು. ನಿನ್ನ ಓಟ ಕೇವಲ ಓಟವಲ್ಲಮುಕ್ತಿಯ ಜೀವಭಾಷೆ;ಮಾಯಾ ಜಿಂಕೆ ಓಡುತಿರು,ಯಾರ ಕೈಗೂ ಸಿಗದಂತೆ….. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು” Read Post »

ಕಾವ್ಯಯಾನ

ಗೊರೂರು ಅನಂತರಾಜು ಅವರ ಹನಿಗವನಗಳು

ಕಾವ್ಯ ಸಂಗಾತಿ ಗೊರೂರು ಅನಂತರಾಜು ಹನಿಗವನಗಳು ಇದು ಸರಿಯೇ..? ಹುಡುಗಿಈ ಭೂಮಿಗೆಗುರುತ್ವಾಕರ್ಷಣಿ ಶಕ್ತಿಇರುವಂತೆ ನಿನ್ನಲ್ಲೂ ಇದೆಇದು ಸರಿಯೇ..? ಹುಡುಗಕೈ ಹಿಡಿಯುವುದಾಗಿ ನಂಬಿಸಿ ನನ್ನ ಬಯಕೆಗಳಿಗೆಬೆಂಕಿ ಸುರಿದು  ಈಗ ಸಾರಿ ಎಂದುತಣ್ಣೀರು ಸುರಿಯುತ್ತಿರುವೆ ಇದು ಸರಿಯೇ..? ಹುಡುಗಿನನ್ನ ಬಾಳೇ ಗಾಳಿಗೋಪುರ ಇನ್ನೂ ನಿನ್ನ ಪ್ರೀತಿಗಾಗಿತಾಜ್ ಗೋಪುರ ಕಟ್ಟಿಸಲುಕೇಳುವೆಯಲ್ಲಾಇದು ಸರಿಯೇ..? ಹುಡುಗನೀನಿದ್ದ ಮನೆಗೆನಮ್ಮಪ್ಪನಿಗೆ ಬಾಡಿಗೆ ನೀಡಿದೆಆದರೆ  ನನ್ನ ಮನದಲ್ಲಿನೆಲೆಸಿದ್ದಕ್ಕೆ ಬಾಡಿಗೆನೀಡದೆ ಓಡಿಹೋದೆಇದು ಸರಿಯೇ..? ಹುಡುಗಿಆ ಶ್ರೀಕೃಷ್ಣ ತನ್ನ ಭಕ್ತನಿಗೆ ಗೋಡೆ ಒಡೆದು ದಶ೯ನ ಭಾಗ್ಯ ಕರುಣಿಸಿದನಿನ್ನ  ಭಕ್ತ ಈ ಕರುಣಾಕರನಿಗೆಮನೆಯ ಕಿಟಕಿ ತೆರೆದುಮುಖ ತೋರದೆ  ಕಾಡಿಸುವೆಯಲ್ಲಾಇದು ಸರಿಯೇ…? ಹುಡುಗಮದುವೆಗೆ ಮೊದಲು ನೀ ನನಗೆ ಗುರಿಯಿಟ್ಟೆಈಗ  ನನ್ನ ದಾರದಬುಗುರಿ ಆಗಿಬಿಟ್ಟೆಯೆಲ್ಲಾಇದು ಸರಿಯೇ…? ಗೊರೂರು ಅನಂತರಾಜು,

ಗೊರೂರು ಅನಂತರಾಜು ಅವರ ಹನಿಗವನಗಳು Read Post »

ಕಾವ್ಯಯಾನ

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್‌ “ನೀ ನನ್ನ ಅಪೂರ್ಣ ಕವಿತೆ!” ನಿನ್ನನ್ನು ನಿನ್ನನ್ನಷ್ಟೇ ಬರೆಯಲುಎಷ್ಟೋ ಕವಿತೆಗಳು ನನ್ನೊಳಗೆ ಕಾಯುತ್ತಿವೆ!ಪ್ರತಿ ಬಾರಿಯುಭಾವನೆಗಳು ಎದೆಯ ತುಂಬಿಕಣ್ಗಳ ಅರಳಿಸಿ ಬೆರಳಿಗೆ ತಾಗಿಅಕ್ಷರಗಳಾಗದೆ ನಿಂತು ಬಿಡುತ್ತವೆ!ನೀನಿಲ್ಲದ ಪ್ರತಿ ದಿನದಮನೆಯ ಒಳಗಿನ ಮೌನದಂತೆ! ನೀನು ದೂರವಾದ ಮೇಲೆಚಂದ್ರನಿದ್ದರೂ ಇರುಳಿಗೆ ಬೆಳಕಿಲ್ಲ!ಮಳೆಯಾದರೂ ಮಣ್ಣಿನ ಪರಿಮಳವಿಲ್ಲ!ಹೂವು ಅರಳಿದರೂ ಸುಗಂಧವಿಲ್ಲ! ನನ್ನ ಮನೆಯ ದಾರಿಯಲ್ಲಿಪ್ರತಿಕ್ಷಣವೂ ಹಾದುಹೋಗುವ ಗಾಳಿನಿನ್ನ ಹೆಜ್ಜೆಗಳ ಸುದ್ದಿಯನ್ನೇ ಹೊತ್ತು ತರಬಹುದೆಂದುಮನಸ್ಸು ಇನ್ನೂ ಕಾಯುತ್ತಾ ಇಣುಕಿ ನೋಡುತ್ತಿದೆ! ವಿರಹನೀನು ಇಲ್ಲದಿರುವುದಕ್ಕಿಂತ!ನೀನು ಇದ್ದ ಮೈಮನ ಈ ಮನೆಯೆಲ್ಲನಿನ್ನ ನೆನಪಿನಿಂದ ತುಂಬಿಹೋಗಿರುವುದು! ಗಾಢ ಮೌನನನ್ನ ಹಗಲು ರಾತ್ರಿಗಳ ಮೇಲೆಇಳಿಯದ ಮಳೆಯ ಮೋಡದಂತೆ!ಮಳೆ ಸುರಿಯದೆ ಆಕಾಶವೆಲ್ಲಭಾರವಾಗಿಯೇ ಉಳಿದಂತೆ! ನಿನ್ನನ್ನು ಮರೆಯಲು ಹೊರಟಪ್ರತಿ ಆಲೋಚನೆಯು ಪ್ರತಿ ನಡೆಯುಮತ್ತೆ ನಿನ್ನ ನೆನಪಿನ ಬಳಿಗೇ ಬಂದು ನಿಲ್ಲಿಸುತ್ತದೆ!ದಾರಿ ತಪ್ಪಿದ ನದಿಯೊಂದು ಹುಚ್ಚು ಕುದುರೆಯಾಗಿಸಮುದ್ರವನ್ನೇ ಹುಡುಕುವಂತೆ! ಒಮ್ಮೆ ನೀನುನನ್ನೆಲ್ಲ ದಿನಗಳ ಬೆಳಗಾಗಿದ್ದೆ!ಈಗ ಅದೇ ದಿನಗಳುಸೂರ್ಯೋದಯವನ್ನೇ ಮರೆತಿರುವದೀರ್ಘ ಸಂಜೆಯಂತಾಗಿ ಸುದೀರ್ಘ ಇರುಳಂತಿವೆ! ನಿನ್ನ ಹೆಸರನ್ನು ಬರೆದಾಗಪೆನ್ನಿನ ಮಸಿ ಮಾತ್ರ ಕಾಗದದ ಮೇಲೆ ಮೂಡುವುದಿಲ್ಲ!ನನ್ನೊಳಗೆ ಮೌನವಾಗಿ ಉಳಿದಿರುವವಿರಹದ ಕಣ್ಣೀರುಸಾಲುಸಾಲುಗಳಾಗಿ ಜಾರಿ ಮನ ಹಗುರಾಗಬೇಕಿದೆ! ನಿನ್ನನ್ನು ಒಂದೇ ಕವಿತೆಯಲ್ಲಿ ಬರೆಯಲು ಸಾಧ್ಯವಿಲ್ಲನೀನು ಕೇವಲ ಒಂದು ನೆನಪಲ್ಲ!ನನ್ನ ಉಸಿರು ಉಸಿರಿನಲ್ಲೂಮತ್ತೆ ಮತ್ತೆ ಹುಟ್ಟುವನನ್ನದೇ ಅಪೂರ್ಣ ಕವಿತೆ! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್‌ ಅವರ “ನೀ ನನ್ನ ಅಪೂರ್ಣ ಕವಿತೆ!” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ರೀತಿ, ರಿವಾಜು ಎಂದೆಲ್ಲಾ ಸಂತಸಕೆ ಒಡ್ಡು ಕಟ್ಟಿದವಳು ನಾನುಕನಸುಗಳಿಗೆ ಪರದೆ ಹಾಕಿ ಇರುಳು ಕಳೆದವಳು ನಾನು ಬದುಕಿನ ಇಳಿ ಸಮಯದಿ ನೀ ಅತಿಥಿಯಂತೆ ಬಂದಿರುವಿ ಏನುಸಂಜೆಯ ಸೊಬಗಿಗೆ ಮರುಳಾಗದಿರಲು ಕಿಟಕಿ ಮುಚ್ಚಿದವಳು ನಾನು ಯಾರು ಎಷ್ಟು ಕರೆದರೂ,ತಿರುಗಿ ನೋಡದೆನ್ನ ಜೀವಎದೆಯ ಕದಕೆ ಅಗುಳಿ ಹಾಕಿ , ಬೀಗ ಜಡಿದವಳು ನಾನು ನೀ ಒಲವಿನ ಓಲೆ ಬರೆದು, ಓಲೈಸಿಕೊಳ್ಳುವೆ ಹೇಗೆ ನನ್ನನುಮೊಹಬ್ಬತ್ತಿನ ಶಹರಿನಲಿ ವಿಳಾಸ ಇಲ್ಲದವಳು ನಾನು  ಬಂಡೆಯಂತಹ ವಾಣಿಯನು ಕರಗಿಸುವ ಹಠವು ವ್ಯರ್ಥಯಾವ ಪ್ರೇಮ ಶಿಲ್ಪಿ ಕಟೆದರೂ ಪ್ರೇಯಸಿ ಆಗದವಳು ನಾನುವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಭಾವ ತರ್ಪಣ” ಸಂಜೆ ಮುಗಿಲ ಬಣ್ಣದಿಂದ  ಬಿರಿದ ಇಂದ್ರ ಚಾಪದಂತೆ,ಮೌನರಾಗ ತಂತಿಯಲ್ಲಿ ಮಿಡಿವ ಭಾವ ಶ್ರಾವ್ಯ ನೀನು.ನಾ ಮರೆಯ ಹೊರಟರೂ ಮನಸು ನಿನ್ನೇ ಕರೆದಂತೆ,ಮರೆತ ಕ್ಷಣ ರಾಗವಾಗಿ ಮಿಡಿವೆ ನನ್ನ ಮನದಿ ನೀನು. ಪ್ರತಿ ರಾತ್ರಿ ಕನಸಲಿ ಮನದ ಕದವ ತೆರೆದವನೇ,ನನ್ನ ಪ್ರೇಮ ದೇಗುಲದಿ ಬೆಳಗೋ ದಿವ್ಯ ದೀಪ್ತಿ ನೀ.ಉಸಿರ ಪ್ರತಿ ಸ್ಪಂದನದಲಿ ಮಧುರ ಗೀತೆಯಾದವನೇ,ನನ್ನ ಶೂನ್ಯದಾಗಸದಿ ಮಿನುಗೋ ಚೈತ್ರದ ಚುಕ್ಕಿ ನೀ. ಮಾತು ಮರೆತ ಹೃದಯಕೆ ನಿನ್ನ ಹೆಸರೇ ಪಲ್ಲವಿ,ಕನಸ  ಕಣ್ಣ ನೈದಿಲೆಗೆ ನಿನ್ನ ರೂಪವೇ ಚಂದಿರ.ನನ್ನ ಭಾವ ನಂದನಕೆ ನೀನೆ ಒಲವ ಭೈರವಿ,ನನ್ನ ಉಸಿರ ತಾಳಕೆ ನೀನೇ ಮಧುರ ಸಪ್ತಸ್ವರ. ಬರಿದಾದ ಮನದೊಳಗೆ  ನಿಂತೆ ನೀ ವಸಂತವಾಗಿ,ಹೂವಿನ ದಳದಲಿ ಉಳಿದ ಮಂಜಿನ ಹನಿಯಂತೆ.ಕಳೆದುಹೋದ ಕ್ಷಣಗಳೆಲ್ಲ  ಮರಳಿವೆ ಕಾವ್ಯವಾಗಿ,ಕಣ್ಣಂಚಿನ ಹನಿಯೊಂದು ನಿನ್ನ ಕಥೆಯ ಹೇಳಿದಂತೆ. ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಭಾವ ತರ್ಪಣ” Read Post »

You cannot copy content of this page

Scroll to Top