ಧಾರಾವಾಹಿ ಸಂಗಾತಿ-38 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಗಡಿಭಾಗ ಕನ್ನಡತಿಯ ಕೂಗು ನಡುನಾಡ ಅಣ್ಣಂದಿರೆ,ಗಡಿ ಭಾಗದವರಿಗಕಡಿಗಣ್ಣಿಲಿ ನೋಡಬ್ಯಾಡರಿ, ನಾವೆಲ್ಲಒಡಹುಟ್ಟೀದ ಕನ್ನಡ ಮಕ್ಕಳು* ಬೇಲೂರಿನಿಂದ ಮೈಸೂರಿನವರೆಗೆ ಅಖಂಡ ಕರ್ನಾಟಕದ ಬಗ್ಗೆ ಮಾತನಾಡುವುದು ಅಂದರೆ ಒಂದು ಸಂಧಿಗ್ಧ ಪರಿಸ್ಥಿತಿ ಉಂಟು ಮಾಡುವುದೆನ್ನುವ ಸಮಯದಲ್ಲಿ ಜಯದೇವಿ ತಾಯಿಯವರು ನಿರ್ಭೀತೆಯಿಂದ ಪ್ರಚಾರ ಮಾಡಿದ್ದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡವು. *೨೫-೫-೧೯೫೨-ಕರ್ಮವೀರ* ೧೯೫೨ರ ಬೇಲೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಮುಖ್ಯಮಂತ್ರಿಗಳಾದ ಕೆಂಗಲ ಹನುಮಂತಯ್ಯ ನವರು ತಮ್ಮ ಭಾಷಣದಲ್ಲಿ ಏಕೀಕರಣದ ಬಗ್ಗೆ ಒಂದು ಶಬ್ದವನ್ನೇ ಎತ್ತಲಿಲ್ಲ… ಇದರಿಂದ ಜನ ನಿರಾಶರಾಗಿದ್ದಾರೆ. ಬೇಲೂರಿನ ಸಮ್ಮೇಳನದ ಮಹಿಳಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಜಯದೇವಿ ತಾಯಿ ಅವರು ಕರ್ನಾಟಕದ ಗತವೈಭವವನ್ನು ಸ್ಮರಿಸಿ ಕೊಳ್ಳುತ ಸಂತೃಪ್ತರಾಗದೆ ನಾಡಿನ ಐಕ್ಯತೆಗೆ ಭದ್ಧರಾಗಬೇಕೆಂದು ಕರೆ ನೀಡಿದರು. *೨೧-೫-೧೯೫೨-ಪ್ರಜಾವಾಣಿ ವರದಿ* “ನಮ್ಮ ನಾಡಿನವರು ನಮ್ಮ ಸಂಸ್ಕೃತಿಯವರೆಂದು ನಾನು ಗಡಿಭಾಗವಾದ ಸೊಲ್ಲಾಪುರದಿಂದ ಮೈಸೂರಿಗೆ ಪ್ರವಾಸ ಕೈಗೊಂಡೆ, ಆದರೆ ಇಲ್ಲಿ ಮರಾಠರಿಗಿಂತ ಹೆಚ್ಚಿನ ವಿರೋಧಕರನ್ನು ಕಂಡೆ, ಮರಾಠಿಗರು ವಿರೋಧಿಸುವುದು ಸ್ವಾಭಾವಿಕ ಆದರೆ ನಮ್ಮ ಬಗ್ಗೆ ಮೈಸೂರಿನವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ….ನಮಗೆ ಬೇರೆಯವರದು ಬೇಕಿಲ್ಲ ನಮಗೆ ಬರಬೇಕಾಗಿದ್ದನ್ನು ಉಳಿಸಿಕೊಳ್ಳೋಣ ನಮ್ಮ ಸೋಲಾಪುರ ಹೋಗುವ ಅಂಚಿನಲ್ಲಿ ಇದೆ… ಆದರೆ ಬೇಲೂರು ಹೋದಿತು… ಮೈಸೂರಿನವರು ಎಚ್ಚರದಿಂದ ಇರಲಿ ಮರಾಠಿಗರಿಗೆ ಇರುವ ತಾಯಿ ನುಡಿಯ ನಿಷ್ಠೆ ನಮ್ಮಲ್ಲಿ ಬರೆಯಿಲಿ…..!!!ಎಂದು ಅಂಗಲಾಚಿದರು. “ಕನ್ನಡಿಗರೇ ಜಾಗೃತರಾಗಿ ಸ್ವತಂತ್ರ ನಾಡವನ್ನು ಕಟ್ಟಬೇಕು ಇಲ್ಲವಾದರೆ ನಮಗೆ ಉಳಿಗಾಲವಿಲ್ಲ ಎಂದು ಜಯದೆವಿತಾಯಿಯವರು ತಮ್ಮ ಭಾಷಣದಲ್ಲಿ ಹೇಳುತ್ತ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಎಂದಿಗೂ ಮರೆಯುತ್ತಿರಲಿಲ್ಲ. ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು. ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು….ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು.ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು. ೧೯೫೩ ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಮಿತಿಯಲ್ಲಿ ಪಾಸಾದ ಗೊತ್ತುವಳಿಯ ಪ್ರಕಾರ ಪ್ರಾಂತ ಪುನರ ರಚನಾ ಆಯೋಗವು ೨೯-೧೨-೫೩ ರಲ್ಲಿ ನಿಯಮಿಸಲ್ಪಟ್ಟಿತು. ಪ್ರಾಂತ ಪುನರ್ರಚನಾ ಆಯೋಗದ ಎದುರು ಸಾಕ್ಷಿಯಾಗಿ ನುಡಿಯುವ ಆಯೋಗದಲ್ಲಿ ಜಯದೇವಿ ತಾಯಿಯವರು ಶ್ರೇಷ್ಠ ಸದಸ್ಯರಾಗಿದ್ದರು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಜಯದೇವಿ ತಾಯಿಯವರಿಗೆ ದಿಲ್ಲಿಯವರೆಗೆ ಹೋಗಲಾಗಲಿಲ್ಲ .ಅದನ್ನು ತುಂಬಾ ವಿಷಾದದಿಂದ ಶ್ರೀ ನಿಜಲಿಂಗಪ್ಪನವರು ಹೇಳ್ತಾರೆ…. ತಾಯಿಯವರು ಅಲ್ಲಿಯವರಿಗೆ ಬಂದಿದ್ದರೆ ಅವರ ಉಪಸ್ಥಿತಿಯು ಅತ್ಯಂತ ಫಲದಾಯಕವಾಗಿರುತ್ತಿತ್ತು ಎಂದು ಉದ್ಗರಿಸಿದರು. ಶ್ರೀ ಕೆ.ಎಫ್ ಪಾಟೀಲ, ನಿಜಲಿಂಗಪ್ಪ, ಹಳ್ಳಿಕೇರಿ, ಕಂಠಿ ಇವರು ಯಾರೇ ಬಂದರೂ ಸೊಲ್ಲಾಪುರದಲ್ಲಿ ಜಯದೇವಿ ತಾಯಿಯವರ ಹತ್ತಿರ ಬರದೆ ಚರ್ಚಿಸದೆ ಅವರ ಸಲಹೆ ಪಡೆಯದೆ ಯಾವ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ. ಮುಂದೆ ೧೯೫೪ ಕೆ.ಪಿ.ಸಿ.ಸಿ ಮುಂದೆ ಕರ್ನಾಟಕದ ಬೇಡಿಕೆಯನ್ನು ಮಂಡಿಸಲು ನಿಯುಕ್ತರಾದ ಉಪಸಮಿತಿಯವರು… ‘ವಿಜಾಪುರ ಜಿಲ್ಲೆಯ ಗಡಿ ಸಮಿತಿ’ ಎಂದು ಗುರುತಿಸಿದ ಎಂಟು ಜನರಲ್ಲಿ ಜಯದೇವಿ ತಾಯಿಯವರು ಪ್ರಮುಖ ರಾಗಿದ್ದರು. ಅಷ್ಟರಲ್ಲಿ ಗಡಿಭಾಗದ ಮರಾಠಿ ಮುಖಂಡರ ಗಮನವು ಗಡಿಭಾಗದ ಕನ್ನಡಿಗರ ಮೇಲೆ ಬಿತ್ತು… ಹೀಗಾಗಿ ಸೊಲ್ಲಾಪುರ ಬೆಳಗಾವಿ ನಿಪ್ಪಾಣಿ ಖಾನಾಪುರ ನಂದಗಡ ಜತ್ತ ಅಕ್ಕಲಕೋಟೆ ಅಂತಹ ಮಹತ್ವದ ಕನ್ನಡ ಪ್ರದೇಶಗಳನ್ನು ಪಡೆಯಲು ಮುಂದಾದರು ಮರಾಠಿಗರು ಸಮಿತಿ ರೂಪಿಸಿದರು. ಮುಖ್ಯಮಂತ್ರಿ ಆಗಿದ್ದರು ಸೊಲ್ಲಾಪುರ ನಗರವನ್ನು ಒಳಗೊಂಡಿದ್ದ ಸೊಲ್ಲಾಪುರ ಕೆಲವು ತಾಲೂಕುಗಳಲ್ಲಿ ನೂರಕ್ಕೆ 90ರಷ್ಟು ಕನ್ನಡಿಗರಿಂದ ಕೂಡಿತ್ತು.. ಸೊಲ್ಲಾಪುರ ನಗರ ಮಾತ್ರ ಮಿಶ್ರ ಭಾಸಿಕರಿಂದ ಕೂಡಿತ್ತು. ಈ ಮಿಶ್ರ ನುಡಿಯಲ್ಲಿಯೇ ಕನ್ನಡಿಗರು ತೆಲುಗು ಉರ್ದು ಮರಾಠಿ ಭಾಷಿಕರು ಇದ್ದರು. ಇದರಲ್ಲಿ ಅತ್ಯಧಿಕ ಸಂಖ್ಯೆ ಕನ್ನಡಿಗರದಾಗಿತ್ತು. ಅನ್ಯ ಭಾಷಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಈ ಕಾರಣದಿಂದ ಮರಾಠಿ ಮುಖಂಡರು ಸೊಲ್ಲಾಪುರ ತಾಲೂಕನ್ನು ಒಡೆದು ನೇರ ಮರಾಠಿ ತಾಲೂಕಿನಿಂದ ಸಣ್ಣಪುಟ್ಟ೪0 ಮರಾಠಿ ಪ್ರಾಧಾನ್ಯ ಹಳ್ಳಿಗಳನ್ನು ಸೋಲಾಪುರ ನಗರಕ್ಕೆ ಜೋಡಿಸಿದರು .ಅದಕ್ಕೆ ಉತ್ತರ ಸೋಲಾಪುರ ತಾಲೂಕ ಎಂದು ಹೆಸರಿಟ್ಟರು .ಉಳಿದ ಸೋಲಾಪುರ ಭಾಗಕ್ಕೆ ದಕ್ಷಿಣ ಸೋಲಾಪುರ ವೆಂದು ಹೆಸರಿಡಲಾಯಿತು. ಇಂದಿಗೂ ಈ ಎರಡು ತಾಲೂಕು ಸೋಲಾಪುರ ನಗರದಲ್ಲಿ ಬೇರೆ ಬೇರೆಯಾಗಿವೆ. ಈ ವಿಂಗಡಣೆಯ ಮುಖ್ಯ ಉದ್ದೇಶ ತಾಲೂಕನ್ನು ಘಟಕವಾಗಿ ಹಿಡಿದರೆ.. ಅನಿವಾರ್ಯವಾಗಿ ಮಹಾರಾಷ್ಟ್ರಕ್ಕೆ ಸೇರಿದರೂ ದಕ್ಷಿಣ ಸೋಲಾಪುರ ಮಾತ್ರ ಮೈಸೂರಿಗೆ ಸೇರಬೇಕು. ಈ ರೀತಿಯ ಪೂರ್ವುದೇಶದಿಂದ ನಡೆದ ಸಮಿತಿಗಳ ಕಾರ್ಯ ಸೊಲ್ಲಾಪುರ ಕರ್ನಾಟಕದಿಂದ ಕೈತಪ್ಪಿತುವಂತೆ ಮಾಡಿದವು. *ನುಡಿ ನಾಡ ಕಟ್ಟುವಾಗ ಗಡಿಭಾಗಮರಿಬ್ಯಾಡರಿ ತೊಡಕೆ ಇಡಬೇಡಿರಿಕಡೆ ತನಕ ಬೇಡುವೆ ಸರಕಾರಕ* ಜಯದೇವಿ ತಾಯಿಯವರ ಈ ಮಾತುಗಳಲ್ಲಿ ಅಖಂಡ ಕರ್ನಾಟಕದ ಕನಸು, ಗಡಿಭಾಗದ ಕನ್ನಡಿಗರ ನೋವು ತೋಡಿಕೊಂಡರು.ಕನ್ನಡ ಭಾಷೆಯ ಆಧಾರದ ಮೇಲೆ , ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲಾ ಒಂದಾಗಿ ಸೇರಿಸಬೇಕು ಎಂಬುದು ತಾಯಿಯವರ ಆಶಯ. ನಾಡಿನ ಗಡಿಯಲ್ಲಿ ಇರುವ ಕನ್ನಡಿಗರನ್ನು ಮಾತ್ರ ಮರೆಯಬೇಡಿ. ಸೊಲ್ಲಾಪುರ, ಅಕ್ಕಲಕೋಟೆ, ಜತ್, ಮೀರಜ್, ಜಮಖಂಡಿ ಮುಂತಾದ ಗಡಿ ಪ್ರದೇಶಗಳಲ್ಲಿ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬದುಕುತ್ತಿದ್ದಾರೆ. ಅವರನ್ನೂ ಅಖಂಡ ಕರ್ನಾಟಕದ ಭಾಗವೆಂದು ಪರಿಗಣಿಸಬೇಕು ಎಂದರು.ಗಡಿಭಾಗದ ಕನ್ನಡ ಪ್ರದೇಶಗಳು ಕರ್ನಾಟಕದೊಂದಿಗೆ ಒಂದಾಗಲು ಯಾವುದೇ ಅಡ್ಡಿ ಅಥವಾ ತೊಡಕು ಉಂಟುಮಾಡಬಾರದು. ಭಾಷೆ ಮತ್ತು ಜನರ ಹಕ್ಕಿನ ಆಧಾರದ ಮೇಲೆ ಅವರ ಆಶಯವನ್ನು ಗೌರವಿಸಬೇಕು ಎಂಬ ಆಗ್ರಹಿಸಿದರು. ಇದು ಕೇವಲ ಒಂದು ದಿನದ ಮನವಿಯಲ್ಲ. ಸರ್ಕಾರವು ಗಡಿಭಾಗದ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸುವವರೆಗೂ, ಕೊನೆಯವರೆಗೂ ನಾನು ಈ ಬೇಡಿಕೆಯನ್ನು ಮುಂದಿಡುತ್ತೇನೆ ಎಂಬ ಜಯದೇವಿ ತಾಯಿಯವರ ಅಚಲ ಸಂಕಲ್ಪವನ್ನು ತೋರಿದರು.ಜೀವನಚರಿತ್ರೆಯಲ್ಲಿ ಬಳಸಬಹುದಾದ ಭಾವನಾತ್ಮಕಜಯದೇವಿ ತಾಯಿಯವರು ಗಡಿಭಾಗದಲ್ಲಿ ಬದುಕುತ್ತಿದ್ದ ಕನ್ನಡಿಗರ ಪರವಾಗಿ ಕೇಳಿಬಂದ ಒಬ್ಬ ಕನ್ನಡ ತಾಯಿಯ ಹೃದಯದ ಮೊರೆಯಾಗಿತ್ತು. ಅಖಂಡ ಕರ್ನಾಟಕದ ನಕ್ಷೆಯನ್ನು ರೂಪಿಸುವಾಗ ಅದರ ಗಡಿಯಲ್ಲಿ ನಿಂತಿರುವ ಕನ್ನಡಿಗರನ್ನು ಮರೆಯಬಾರದು ಎಂಬುದು ಅವರ ಕಳಕಳಿ. ಭಾಷೆ, ನೆಲ ಮತ್ತು ನಾಡಿನ ಬಂಧದಿಂದ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದ ಜನರನ್ನು ಯಾವುದೇ ರಾಜಕೀಯ ಗಡಿರೇಖೆ ಬೇರ್ಪಡಿಸಬಾರದು ಎಂಬುದು ಅವರ ಹೋರಾಟದ ಆಶಯವಾಗಿತ್ತು. ಅದಕ್ಕಾಗಿ ಅವರು ಸರ್ಕಾರವನ್ನು ಪದೇಪದೇ ಎಚ್ಚರಿಸುತ್ತಿದ್ದರು“ಗಡಿಭಾಗವನ್ನು ಮರೆಯಬೇಡಿ ಎಂದಿದ್ದರು ಕನ್ನಡ ನಾಡನ್ನು ಕಟ್ಟುವಾಗ ಗಡಿಭಾಗ ಕನ್ನಡಿಗರನ್ನೂ ಒಳಗೊಳ್ಳುವಿಕೆಯ ಮನವಿ ಅವರ ಜೀವನದ ಕೊನೆಯವರೆಗೂ ಮುಂದುವರಿದ ಅಖಂಡ ಕರ್ನಾಟಕದ ಬದ್ಧತೆಯ ಪ್ರತಿಧ್ವನಿಯಾಗಿತ್ತು ಸವಿತಾ ದೇಶಮುಖ
ಡಾ ರೇಣುಕಾತಾಯಿ ಸಂತಬಾ ರೇಮಾಸಂತ ಗಜಲ್
ಕಾವ್ಯಸಂಗಾತಿ ಡಾ ರೇಣುಕಾತಾಯಿ ಸಂತಬಾ ರೇಮಾಸಂತ ಗಜಲ್ ಎಂಥಾ ಚೆಲುವಿ ಅದಾಳ ಈಕೀ ಹ್ಯಾಂಗ ವರ್ಣಿಸಲಿ.ಮಾತ ಮಾತಿಗೂ ನಗುವಾಕೀ ಹ್ಯಾಂಗ ಹಿಡಿದಿಡಲಿ.ll ಕಾಲಿಗೆ ಗೆಜ್ಜಿ ಕಟಗೊಂಡ ಘಲ್ ಘಲ್ ಕುಣಿಸುವಾಕೀ,ಎದ್ಯಾಗ ಪ್ರೀತಿನ ಪುಟಿಸುವಾಕೀ ಹ್ಯಾಂಗ ಮುಚ್ಚಿಡಲಿ.ll ಎಲ್ಲಾರು ಬೆರಗಣ್ಣಾಗ ನೋಡುವಂಗ ಮಿಂಚುವಾಕೀ,ಕಂಡವರ ಮನಸ್ಸ ಕದಿಯುವಾಕೀ ಹ್ಯಾಂಗ ಸುಮ್ಮಿರಲಿ.ll ಬೆಳಕಿನ ಸೀರೆ ಉಟ್ಗೊಂಡು ಬೆಳದಿಂಗಳ ಆದಾಕೀ,ಮಂಜಿನ ಹಾಂಗ ಕರಗುವಾಕೀ ಹ್ಯಾಂಗ ಕಾಪಾಡಲಿ.ll ತಾಯಿ ದೇವಿ ಗರ್ಭಗುಡಿ ದೀಪದಂಗ ಶಾಂತ ಈಕೀ,ರಾಗದಾಗ ಇರು ಸ್ವರದಂತಾಕೀ ಹ್ಯಾಂಗ ಹಾಡಲಿ.ll ಡಾ ರೇಣುಕಾತಾಯಿ ಸಂತಬಾ ರೇಮಾಸಂತ
ಡಾ ರೇಣುಕಾತಾಯಿ ಸಂತಬಾ ರೇಮಾಸಂತ ಗಜಲ್ Read Post »
“ಹೀಗೊಂದು ಅನಿಸಿಕೆ 60ರ ಆಸು ಪಾಸು”ನಿಮ್ಮೊಂದಿಗೆ ಹಂಚಿಕೊಳ್ಳುವವರು, ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ
ಬದುಕಿನ ಸಂಗಾತಿ ಶಶಿಕಲಾ ಚಂದ್ರಶೇಖರ್ “ಹೀಗೊಂದು ಅನಿಸಿಕೆ 60ರ ಆಸು ಪಾಸು” ಸ್ವಾಮಿ ನಾನು ಇಂದು ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ. ಹಾಗಂತ ನನಗೇನು ಮನೆಗೆ ಹೋಗೋಕೆ ಇಷ್ಟ ಇರಲಿಲ್ಲ. ಸ್ನೇಹಿತೆಯರೊಂದಿಗೆ ಆಫೀಸಿನ ಕೆಲಸ ಮಾಡುತ್ತಾ ಮಾಡುತ್ತಾ 36 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ.ಕೆಲಸಕ್ಕೆ ಸೇರಿದ ಹೊಸದರಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದೆ. ಮದುವೆ ಮಕ್ಕಳು ಗಂಡ ಸಂಸಾರ ಅಂತ ಜಂಜಾಟದಲ್ಲಿ ಬಿದ್ದ ನಂತರ ಶುರುವಾಯಿತು ನೋಡಿ. ಗಂಡನಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳಿಗೆ ಹುಷಾರಿಲ್ಲ ರಜ ಹಾಕು, ಮಕ್ಕಳ ಶಾಲೆಯಲ್ಲಿ ಮೀಟಿಂಗ್,ಅದು ಇದು ಕಾರ್ಯಕ್ರಮಗಳು,ಅತ್ತೆಯ ಸೇವೆಗೆ, ಮಾವನ ಸೇವೆಗೆ, ಜೀವತೇಯಲಿಕೆ ಶುರುವಾದಂತೆ ಆಫೀಸಿನಲ್ಲಿ ದಕ್ಷತೆ ಕಡಿಮೆ ಆಯಿತು ಅನ್ನಿಸುತ್ತೆ . ನನ್ನ ಸ್ನೇಹಿತೆಯರು ಕೂಡ ಹೆಚ್ಚು ಕಡಿಮೆ ಅದೇ ರೀತಿಯ ದೋಣಿಯಲ್ಲಿ ಇದ್ದವರು. ಆಫೀಸಿಗೆ ಲೇಟ್ ಆದಾಗ,ಅನ್ಯ ಮನಸ್ಕಳಾಗಿ ಕೆಲಸ ಮಾಡುತ್ತಾ ತಪ್ಪು ಮಾಡಿದಾಗ,ಆಫೀಸರ್ ಕೆಂಗಣ್ಣಿಗೆ ತುತ್ತಾಗುವುದು ಕೊನೆ ಕೊನೆಗೆ ಅಭ್ಯಾಸವಾಗಿ ನನಗೆ ಅವಳು ಅಥವಾ ಇನ್ನೊಬ್ಬಳು, ಸಮಾಧಾನ ಮಾಡುವುದು ನಾನು ಅವಳಿಗೆ, ಇವಳಿಗೆ, ಸಮಾಧಾನ ಮಾಡುವುದು ಇದ್ದೇ ಇರುತ್ತಿತ್ತು. ಹೀಗೇ ಮಕ್ಕಳ ಜವಾಬ್ದಾರಿ,ಅವರ ಮದುವೆ,ಬಸಿರು, ಬಾಣಂತನ,ಹೀಗಂತ 60 ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಈಗ ಮಕ್ಕಳೆಲ್ಲ ಅವರವರ ಕಾಲ ಮೇಲೆ ನಿಂತಿದ್ದಾರೆ. ರೆಕ್ಕೆ ಬಲಿತ ಹಕ್ಕಿಗಳು.ತಮ್ಮ ತಮ್ಮ ಗೂಡಿನಲ್ಲಿ ಮರಿಗಳೊಂದಿಗೆ ಸುಖವಾಗಿದ್ದಾರೆ.ನಾವೀಗ ಯಾವುದೇ ನಿರ್ಬಂಧ ವಿಲ್ಲದೆ ಸೊಗಸಾಗಿ ಸೇವೆ ಸಲ್ಲಿಸಬಹುದು ಅಂದುಕೊಂಡರೆ, ಸರಕಾರವೇ ನಮ್ಮನ್ನು 60 ತುಂಬಿತು,ಕಡಿದು ಕಟ್ಟೆ ಹಾಕಿದ್ದು ಸಾಕು,ಮನೆಯಲ್ಲಿ ಇರಿ,ಅಂತ ಕಳಿಸುತ್ತಿದೆ. ತಪ್ಪಲ್ಲವೇ ಇದು. ಹೋಗ್ಲಿ ಬಿಡಿ ಸ್ವಾಮಿ.ನಾವೀಗ ಸ್ವಚ್ಛಂದ ಪಕ್ಷಿಗಳಂತೆ ಹಾರಾಡುತ್ತಾ ಇರಬಹುದು ನಮಗೆ ಬೇಕಾದ ಊರಿಗೆ ಬೇಕಾದ ಸಮಯದಲ್ಲಿ ಬೇಕಾದಂತೆ ತಿರುಗಾಡಬಹುದು ರಜ ಕೇಳುವ ಗೋಜೆ ಇಲ್ಲ ಅಂದುಕೊಂಡಿದ್ದೆ.ಆದರೆ….. ಆದದ್ದೇ ಬೇರೆ. ಸದ್ದಿಲ್ಲದೆ ನೆಂಟರಾದ ಸಕ್ಕರೆ ಕಾಯಿಲೆ ಬಂತು . ಅದರ ಅಣ್ಣ ಬಿ.ಪಿ. ಬಂದು ಎರಡು ವರ್ಷ ಆಯ್ತು. ಸಾಲದ್ದಕ್ಕೆ ಮಂಡಿ ನೋವು, ಬೆನ್ನು ನೋವು. ವಾಕಿಂಗ್ ಮಾಡಬೇಕು ಅಂತ ಡಾಕ್ಟರ್ ಸುಲಭವಾಗಿ ಸಲಹೆ ಕೊಡುತ್ತಾರೆ ಕಣ್ರೀ . ಹಿಮ್ಮಡಿನೋವು ಬೇರೆ , ವಾಕಿಂಗ್ ಮಾಡಲು ಆಗಲ್ಲ. ಬಿಡಪ್ಪ ಇನ್ನುಮೇಲೆ ಮನೆಯಲ್ಲಿ ಇರ್ತೀನಿ ರುಚಿ ರುಚಿ ಆಗಿ ಮಾಡಿಕೊಂಡು ತಿನ್ನೋಣ ಅಂದ್ರೆ, ಶುಗರ್ ಬಿಪಿ ಕಾಟ. ಮಕ್ಕಳ ಮನೆಗೆ ಹೋಗಿ ಮೊಮ್ಮಕ್ಕಳನ್ನು ನೋಡಿಕೊಳ್ಳೋಣ ಎಂದರೆ ಅವರ ಜೊತೆ ಆಟ ಆಡಲಿಕ್ಕೆ ಆಗಲ್ಲ,ಎತ್ತಿಕೊಳ್ಳೋಕೂ ಆಗಲ್ಲ. ಅವರ ಹಿಂದೆ ಓಡೋಕೆ ಸಾಧ್ಯವೇ ಇಲ್ಲ. ಅವರೇನಾದರೂ ಬಿದ್ರೆ, ಅಯ್ಯೋ ಅಮ್ಮ, ಸರಿಯಾಗಿ ನೋಡಿಕೊಳ್ಳುವುದು ಅಲ್ವಾ, ಬೀಳೋ ತನಕ ಏನು ಮಾಡ್ತಾ ಇದ್ರೋ ಏನೋ ಅಂತಾರೆ, ಒಂದೊಂದೇ ಮಕ್ಕಳನ್ನು ಹೆತ್ತಿರುವ ಮಕ್ಕಳು.ಕಿವಿ ಸರಿಯಾಗಿ ಕೇಳಲ್ಲ, ಅಂತ ಎಲ್ಲರೂ ಉಪೇಕ್ಷೆ ಮಾಡಿ ಜೋರಾಗಿಯೇ ಹೇಳ್ತಾರೆ. ‘ನಿನ್ನ ಹತ್ತಿರ ಯಾರು ಗಂಟಲು ಹರಿದುಕೊಳ್ಳುತ್ತಾರೆ ಮಾರಾಯ್ತಿ ಅಂತಾರೆ.ಇವರು ಚಿಕ್ಕವರಿದ್ದಾಗ ನಾವೇನು ಕಮ್ಮಿ ಗಂಟಲು ಹರ್ಕೊಂಡಿದ್ವ. ಅದು ಹೇಳೋರ್ಯಾರು. ಇಷ್ಟು ದಿನ ಆಫೀಸಿನಲ್ಲಿ ಸ್ನೇಹಿತೆಯರು ಕಷ್ಟ ಸುಖ ವಿಚಾರಿಸುತ್ತಿದ್ದರು. ಸಲಹೆ ಸೂಚನೆ ಕೊಡುತ್ತಿದ್ದರು. ಈಗ ನಮ್ಮ ದುಃಖ ದುಮ್ಮಾನಗಳನ್ನು ಕೇಳುವವರು ಯಾರು?. ಇದರ ಮೇಲೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸುವ ಮಕ್ಕಳಿಂದ ಹತ್ತು ಹಲವು ರಿಸ್ಟ್ರಿಕ್ಷನ್ ಬೇರೆ.’ಖಾರ ತಿನ್ನಬೇಡ’ ‘ಉಪ್ಪು ತಿನ್ನಬೇಡ, ‘ಸಿಹಿ ತಿನ್ನಬೇಡ,’ನೀರು ಕುಡಿ ನೀರು ಕುಡಿ ನೀರು ಕುಡಿ’. ಉಪ್ಪು, ಖಾರ, ಸಿಹಿ ಎಲ್ಲಾ ಬಿಟ್ಟು…..ಈ ಸಂಭ್ರಮಕ್ಕೆ ನಾವು ಯಾಕಾದರೂ ಬದುಕಿದ್ದೇವೆಯೋ ಅನಿಸುತ್ತೆ. ಒಂದು ಕ್ಷಣ ಮಾತ್ರ ಅಷ್ಟೇ ಹಾಗನಿಸೋದು ಕಣ್ರೀ.ಸ್ಮಶಾನ ವೈರಾಗ್ಯ ಅಂತಾರಲ್ಲ ಹಾಗೆ.ನಿರಂತರ ಆ ಡಾಕ್ಟರ್, ಈ ಡಾಕ್ಟರ್,ಆ ಮಾತ್ರೆ, ಯೋಗ, ಧ್ಯಾನ, ಪ್ರಾಣಾಯಾಮ ಅಂತ ಏನೆಲ್ಲ ಕಸರತ್ತು ಮಾಡಿ ಇನ್ನೂ ಬದುಕುವ ಆಸೆ. ಬಹುಶಹ ಇದುವೇ ಜೀವನ ಅಂತ ಈಗ ಅರ್ಥ ಆಗ್ತಿದೆ. ಪೂರ್ತಿ ಅರ್ಥಮಾಡಿಕೊಳ್ಳೋಣ ಅನ್ನುವಷ್ಟರಲ್ಲಿ ಮೇಲೆ ಕುಳಿತಾನಲ್ಲ ಅವನು ತುಂಬಾ ಜಾಣ.’ ಸಾಕು ಬಾ, ನಿನ್ನ ಆಟ ಏನು ನಡೆಯದು ನನ್ನ ಮುಂದೆ,’ ಅಂತ ಕರೆದುಕೊಂಡು ಬಿಡುತ್ತಾನೆ. ಬರೋಲ್ಲ ಅನ್ನೋಕೆ ಅದೇನು ನಮ್ಮ ಮಾವನ ಮನೆನಾ, ಹೋಗಲೇಬೇಕಲ್ಲ. ಇಷ್ಟೆಲ್ಲದರ ಮಧ್ಯ ನನಗೆ ತುಂಬಾ ಬೇಸರವಾಗಿದ್ದು ಏನು ಗೊತ್ತೆ?. ಮೊನ್ನೆ ಪೇಪರ್ನಲ್ಲಿ 60 ವರ್ಷದ ವಯೋ ವೃದ್ದೆಯ ಸಾವು ಎಂಬ ವಿಚಾರ. 60 ವರ್ಷದ ಮಹಿಳೆ ಅಂದಿದ್ದರೆ ಸಾಕಾಗುತ್ತಿರಲಿಲ್ಲವೇ ‘ವಯೋ ವೃದ್ಧೆ’ ಎಂಬ ವಿಶೇಷಣದ ಅವಶ್ಯಕತೆ ಇತ್ತೇ?. ಹೆಂಗಸರಿಗೆ ಈ ವಿಶೇಷಣ ಎಷ್ಟು ಬೇಜಾರು ತರಿಸುತ್ತೆ ಅನ್ನುವ ಕಾಮನ್ ಸೆನ್ಸ್ ಇಲ್ಲವಲ್ಲ. ಸರ್ಕಾರ ಬೇರೆ ಈಗ ಹಿರಿಯ ನಾಗರಿಕರಿಗೆ ಅಂತ ಏನೇನೋ ಸವಲತ್ತು ನೀಡುತ್ತಿದೆ. ಒಂದು 10 ವರ್ಷ ಮೊದ್ಲೇನಾದ್ರೂ ಕೊಟ್ಟಿದ್ರೆ ಆ ಸವಲತ್ತುಗಳನ್ನು ಅನುಭವಿಸಿಯಾದರೂ ನೋಡಬಹುದಿತ್ತು. ಊರು ಹೋಗು ಕಾಡು ಬಾ ಅನ್ನುವಾಗ, ಸವಲತ್ತಿನ ಮುಂಡಾಮೋಚುತು ಅಲ್ವಾ. ಒಟ್ಟಿನಲ್ಲಿ ಹಲ್ಲಿದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ , ಅನ್ನೋದೇ ಜೀವನದ ನೀತಿ ಪಾಠ. ಏನಂತೀರಾ? ಹೂ ಅಂತೀರಾ?ಹಹ್ಹಹ್ಹ ಇಲ್ಲಪ್ಪಾ ಇಲ್ಲ. ಆ ದೇವರು ನಮಗೆ ಎಷ್ಟೊಂದು ಎಂಡೋಮೆಂಟ್ ಪಾಲಿಸಿಗಳನ್ನು ಕೊಟ್ಟಿದ್ದಾನೆ ಗೊತ್ತಾ. ಹಾಗೇ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ಬನ್ನಿ. ನಿಮಗೆ ದೇವರು ಕೈ, ಕಾಲು, ಕಣ್ಣು, ಮೂಗು, ಬಾಯಿ, ಎಲ್ಲಾ ಅಂಗಗಳನ್ನು ನೀಡಿದ್ದಾನೆ ಅಲ್ವಾ. ನೀವೇನು ಕುಂಟರೆ,? ಕುರುಡರೆ,? ಅಥವಾ ಕೈಲಾಗದವರೇ,? ಅಲ್ಲವಲ್ಲ. ಕುಂಟರು, ಕುರುಡರನ್ನು ನೋಡಿದಾಗ ನಾವೇ ಪುಣ್ಯವಂತರು ಅಂದುಕೊಂಡಿಲ್ಲವೇ. ಇನ್ನು ನಿಮಗೆ ಅಪ್ಪ-ಅಮ್ಮಂದಿರ ಪ್ರೀತಿ ಸಿಕ್ಕಿದೆ. ಸುಖವಾಗಿ ಅಂತಲೇ ಇಟ್ಟುಕೊಳ್ಳಿ. ಬೆಳೆದು ಓದಿ ವಿದ್ಯಾವಂತರಾಗಿದ್ದೀರಿ. ಈ ಭಾಗ್ಯ ಎಷ್ಟು ಜನರಿಗುಂಟು?. ಮೂರು ಹೊತ್ತು ಸುಖವಾಗಿ ಉಂಡು, ಉಟ್ಟು, ಬೆಳೆಯಲಿಲ್ಲವೇ? ನಾವೇ ಪುಣ್ಯವಂತರಲ್ಲವೇ?, ಜಗತ್ತಿನಲ್ಲಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದವರನ್ನು ನೋಡಿದಾಗ. ಮೊದಲು ಕೆಲಸ ಸಿಕ್ಕಾಗ, ಮನವ ನರಿತು ನಡೆವ ಪತಿ/ ಪತ್ನಿ ಸಿಕ್ಕಾಗ, ಜೀವನ ಬಣ್ಣ ಬಣ್ಣವಾಗಿ ಎಷ್ಟು ಸುಂದರ ಇಂದು ಅನಿಸಲಿಲ್ಲವೇ?ನಿಮ್ಮದೇ ಕನಸಿನ ಮನೆ ನೀವು ಕಟ್ಟಿದಾಗ, ಮೊದಲು ತಾಯಿ / ತಂದೆ ಆದಾಗ,ಸ್ವರ್ಗ ಮೂರೇ ಗೇಣು ಅನಿಸಲಿಲ್ಲವೇ? ನಿಮ್ಮ ಮಗು ನಿಮ್ಮ ಮನೆ,ಮಡಿಲು ತುಂಬಿದಾಗ, ಅದರ ಲಾಲನೆ ಪಾಲನೆ ಮಾಡುತ್ತಾ ಜಗತ್ತನ್ನೇ ಮರೆಯಲಿಲ್ಲವೇ ನೀವು?. ಮಗು ಬೆಳದಂತಿಲ್ಲ ಓದು,ವಿದ್ಯಾಭ್ಯಾಸ, ಉದ್ಯೋಗ,ಮದುವೆ, ಬಸಿರು, ಬಾಣಂತನಗಳಲ್ಲಿ ಸ್ವರ್ಗ ಸುಖ ಅನುಭವಿಸಲಿಲ್ಲವೇ?….. ಅದೇ ಜೀವನವಲ್ಲವೇ!!.ವರ್ಷಗಳು ಉರುಳಿದ್ದು ಗೊತ್ತಾಗಲಿಲ್ಲ. ದೇವರು ಒಂದರ ಮೇಲೆ ಒಂದು ಸಂತಸದ ಕ್ಷಣಗಳನ್ನು ಕಲ್ಪಿಸಿಕೊಟ್ಟ. ಅದು ಹಲ್ಲು, ಕಡಲೆ, ಎರಡು ಇದ್ದ ಕಾಲವಲ್ಲವೇ.ಆಗ ನಿಮಗೆ ದೇವರಿಗೆ ಒಂದು thanks ಹೇಳೋಕು ಪುರುಸೊತ್ತಿರಲಿಲ್ಲ. ಅವನು ತುಂಬಾ ಜಾಣ. ನಮ್ಮಂತಹ ಕೋಟಿ ಕೋಟಿ ಜನರನ್ನು ನೋಡಿದವನಲ್ಲವೇ. ಇಳಿ ವಯಸ್ಸು ಕೇವಲ ಆತನ ಸ್ಮರಣೆಗೆ ಮಾತ್ರ ಮೀಸಲು ಇಡಬೇಕೆಂದು ಬೇರೆಲ್ಲಾ ಅವಯವಗಳನ್ನು, ಒಂದೊಂದಾಗಿ (ಅಂದರೆ ಕಣ್ಣು, ಕಿವಿ ಇತ್ಯಾದಿ ), off ಮಾಡ್ತಾ ಬರ್ತಾನೆ. ಇನ್ನಾದರೂ ನಾವು ದೇವರನ್ನು ಜಪಿಸಬೇಕಲ್ಲವೇ? ( ಈಗಲಾದರೂ ಜಪಿಸ್ತಾರ ಅಂತ ಟೆಸ್ಟ್ ಮಾಡ್ತಾನೆ ಮಾರಾಯ್ರೆ ). ಗಂಡ ಹೇಳಿದ್ದು ಹೆಂಡತಿಗೆ ಕೇಳಲ್ಲ. ಹೆಂಡತಿ ಹೇಳಿದ್ದು ಗಂಡನಿಗೆ ಕೇಳಲ್ಲ. ಹಾಗಾಗಿ ಅವರ ನಡುವೆ ಜಗಳವೇ ಇಲ್ಲವಲ್ಲ. ಅದಕ್ಕೆ ಅವನನ್ನ ತುಂಬಾ ಬುದ್ಧಿವಂತ ಅಂದಿದ್ದು. ಕವಿಯೊಬ್ಬರು ಹೇಳಿದಂತೆ, ಹಲ್ಲು ಹೋಗಿ ಬೆನ್ನು ಬಾಗಿ ಶರೀರ ಗೂಡಾಗುವ ಮುನ್ನ —- ನೆನೆಯೋಣ ಆ ಶಿವನನ್ನ. ಏನಂತೀರಾ?. ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ. ,
“ಹೀಗೊಂದು ಅನಿಸಿಕೆ 60ರ ಆಸು ಪಾಸು”ನಿಮ್ಮೊಂದಿಗೆ ಹಂಚಿಕೊಳ್ಳುವವರು, ಶಶಿಕಲಾ ಚಂದ್ರಶೇಖರ್. ಶಿವಮೊಗ್ಗ Read Post »
ವನಜಾಕ್ಷಿ ಬೆಟ್ಟದಾಲೂರು ಕವಿತೆ “ಎಲ್ಲಾ ವಿದಾಯವೂ ಅಂತ್ಯವೇನಲ್ಲ!”
ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಎಲ್ಲಾ ವಿದಾಯವೂ ಅಂತ್ಯವೇನಲ್ಲ!” ಎಲ್ಲಾ ವಿದಾಯವೂ ಅಂತ್ಯವೇನಲ್ಲ! ಆ ಮಾಯಗಾರನಿಲ್ಲಿಹಾದಿಯ ಮೇಲೆ ಬಿಳಿ ಬಿಳಿ ಹೂವಿನಕ್ಷರಗಳಹರಡಿ ಬರೆದು ಹೋಗಿದ್ದಾನೆ—ಪತ್ರಗಳಓದಲು ಬಾರದ ಭಾಷೆಯಲ್ಲಿಕಣ್ಣಿನಾಳದ ಕನ್ನಡಕ ತೆರೆದು ಓದುವವರಿಗಾಗಿ ಮರದ ಕೊಂಬೆಗಳಲ್ಲಿಇನ್ನೂ ಹಸಿರಾಗಿಯೇ ಇದೆ ಬದುಕು;ಆದರೆ ಅದರ ಕೆಳಗೆಎಷ್ಟು ಪುಟ್ಟ ವಿದಾಯಗಳ ಪಕಳೆಗಳುಈ ವಿದಾಯವನ್ನು ಕಾಣಲುಕಣ್ಣಿದ್ದರೆ ಸಾಲದು—ಹೂವು ತೊಟ್ಟು ಕಳಚಿದ ಶಬದವನ್ನೂಮೌನದಲ್ಲಿ ಆಲಿಸಬಲ್ಲಅಂತ:ಕರಣ ಬೇಕು! ಯಾವ ಶಬ್ದವೂ ಸಿಡಿಯದೆಪರಿಮಳ ಮಾಯವಾಗದೆಯಾವ ಕೈಯೂ ಬೀಳಿಸದೆಯಾರ ಕೈಗೂ ಸಿಗದೆಯಾರಿಗೂ ತಿಳಿಯದಂತೆ ಇಳಿಯುತ್ತಲೇ ಸಾಗಿದೆಕೆಲವು ಸಂಬಂಧಗಳು ಹೀಗೆಯೇ ನಿರಂತರವಾಗಿ ಬದುಕಿನಿಂದ ಕಳೆದು ಹೋಗುತ್ತಾರೆಒಮ್ಮೆ ನೆರಳಾಗಿದ್ದವರುಒಂದು ದಿನ ನೆನಪಾಗುತ್ತಾರೆ;ಆಪ್ತರೆನಿಸಿದ್ದವರುಮನೆಯ ದಾರಿಯಲ್ಲೇಅಪರಿಚಿತರಂತೆ ಕಾಣುತ್ತಾರೆ. ಆದರೆ ಈ ನೆಲ ಮಾತ್ರಬಿದ್ದದ್ದನ್ನೂ ತನ್ನದಾಗಿಸಿಕೊಳ್ಳುತ್ತದೆ,ಯಾರನ್ನೂ ಪ್ರಶ್ನಿಸುವುದಿಲ್ಲ!ಮಣ್ಣಿಗೆ ಬಿದ್ದಿದ್ದನ್ನು ತನ್ನದಾಗಿಸಿಕೊಂಡುಕಾಪಿಟ್ಟು ಕೊಳ್ಳುತ್ತದೆ ಬದುಕಿನ ದೊಡ್ಡ ಸತ್ಯ ಇದೇನಮ್ಮಿಂದ ದೂರವಾದದ್ದೆಲ್ಲನಾಶವಾಗಿರುವುದಿಲ್ಲಅದು ನಮ್ಮೊಳಗೆಬೇರೆ ರೂಪದಲ್ಲಿ ಮುಂದುವರಿಯುತ್ತಿರುತ್ತದೆಈ ಹೂವುಗಳಂತೆಕೆಲವರು ನಮ್ಮ ಬದುಕಿನಿಂದ ಕಳಚಿಕೊಂಡರೂಅವರನ್ನು ಹುಡುಕಲಾಗುವುದಿಲ್ಲಾ ಅವರುನಡೆದುಹೋದ ಹೆಜ್ಜೆಗಳಲ್ಲಿರುವುದಿಲ್ಲನಮ್ಮ ಮೌನದೊಳಗೆ ಕುಳಿತಿರುತ್ತಾರೆ.ಮನಸ್ಸಿನೊಳಗೆ ಮಾತಾಡುತ್ತಾರೆನೆನಪಿನಲ್ಲಿ ಕಥೆಯಾಗುತ್ತಾರೆ ಇಂದು ಈ ಬಯಲು ಕೇವಲಹೂವುಗಳಿಂದ ತುಂಬಿಲ್ಲ ಹಲವುರೂಪಾಂತರದಿಂದಹಿಂದೆ ಯಾರೋ ಇದ್ದರುಎಂಬ ನೆನಪುಗಳಿಂದ ತುಂಬಿದೆ. ಮೇಲಿನ ಕೊಂಬೆತನ್ನ ಖಾಲಿತನವನ್ನು ನೋಡುತ್ತಿಲ್ಲ—ಹೊಸ ಮೊಗ್ಗಿಗಾಗಿಮೌನವಾಗಿ ಕಾಯುತ್ತಿದೆಮುಗ್ಧತೆಯ ಹುಟ್ಟುಸಂಭ್ರಮದಲ್ಲಿ ಮುನ್ನುಗ್ಗಿ ಬರುತ್ತಿದೆ. ಆದರೆ ಮರದ ಮೇಲಿರುವ ಈ ಹೂವುಗಳುನಮಗೆ ಕೇಳುತ್ತಿವೆ:“ಬದುಕಿನಿಂದ ಹೊರಟುಹೋಗುವುದೇ ಅಂತ್ಯವೇ?ಅಥವಾನಮ್ಮನ್ನು ಬಿಟ್ಟುಹೋದ ನಂತರವೂನಮ್ಮೊಳಗೆ ಬದುಕುತ್ತಲೇ ಇರುತ್ತಾರೆಯೇ ಆಪ್ತರು ನೋಯಿಸಿದವರು ಪ್ರೀತಿಕೊಟ್ಟವರು ದ್ವೇಷಿಸಿದವರೂ .. ಪ್ರಕೃತಿ ಪ್ರತಿದಿನಹುಟ್ಟುವುದನ್ನೂ ಕಳಚುವುದನ್ನೂಒಂದೇ ಸೌಂದರ್ಯದಿಂದಸಂಭ್ರಮದಿಂದಆಚರಿಸುತ್ತಿರುತ್ತದೆ;ನಾವು ಮಾತ್ರಉಳಿದದ್ದನ್ನು ಬದುಕು ಎಂದೂ,ಉದುರಿದ್ದನ್ನು ಅಂತ್ಯವೆಂದೂತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ. ವನಜಾಕ್ಷಿ ಬೆಟ್ಟದಾಲೂರು
ವನಜಾಕ್ಷಿ ಬೆಟ್ಟದಾಲೂರು ಕವಿತೆ “ಎಲ್ಲಾ ವಿದಾಯವೂ ಅಂತ್ಯವೇನಲ್ಲ!” Read Post »



